ಕಲಬುರಗಿ: ನಗರದ ಫಿಲ್ಟರ್‍ಬೆಡ್ ಆಶ್ರಯ ಕಾಲೋನಿಯಲ್ಲಿ ಡಾ.ಬಾಬು ಜಗಜೀವನರಾಮ ಅವರ ಕಟ್ಟೆಯ ಮೇಲೆ ಇರುವ ಡಾ.ಬಾಬು ಜಗಜೀವನರಾಮ ಅವರ ಭಾವಚಿತ್ರದ ಫಲಕವನ್ನು ಹರಿದು ಹಾಕಿ ಕಟ್ಟೆಯ ಸುತ್ತಮುತ್ತ ಮದ್ಯದ ಬಾಟಲಿಗಳನ್ನು ಒಡೆದು ಹಾಕಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ರವಿ ತಳವಾರ ಅವರು ಚೌಕ್ ಪೊಲೀಸ್ ಠಾಣೆ ಪಿಐ ಅವರಿಗೆ ದೂರು ಸಲ್ಲಿಸಿದರು. ಮಾದಿಗ ಸಮಾಜದ ಯುವ ಮುಂಡರಾದ ಪ್ರದೀಪ್ ಭಾವೆ, ದತ್ತು ಭಾಸಗಿ, ಕಾಂತು, ವಿಲಾಸ ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.