Home ಜಿಲ್ಲೆ ಕಲಬುರಗಿ ಶಹಾಬಾದ:ಕೆಪಿಎ ಆಸರೆ ಯೋಜನೆ ಪೋಸ್ಟರ್ ಬಿಡುಗಡೆ

ಶಹಾಬಾದ:ಕೆಪಿಎ ಆಸರೆ ಯೋಜನೆ ಪೋಸ್ಟರ್ ಬಿಡುಗಡೆ

ಕಲಬುರಗಿ,ಜೂ.8-ಕರ್ನಾಟಕ ಛಾಯಾಗ್ರಾಹಕರ ಸಂಘ ಹಾಗೂ ಕಲಬುರಗಿ ಜಿಲ್ಲಾ ಛಾಯಾಗ್ರಾಹಕರ ಅಸೋಸಿಯೇಶನ್ ಸಹಯೋಗದಲ್ಲಿ ಶಹಬಾದ ಫೆÇೀಟೊಗ್ರಾಫರ್ಸ ಸಂಘದ ವತಿಯಿಂದ ಕೆ.ಪಿ.ಎ ಆಸರೆ ಯೋಜನೆಯ ಪೆÇೀಸ್ಟರ್ ಬಿಡುಗಡೆ ಬಿಡುಗಡೆ ಮಾಡಲಾಯಿತು.
ಕಲಬುರಗಿ ಜಿಲ್ಲಾ ಫೆÇೀಟೊಗ್ರಾಫರ್ಸ ಅಸೊಶಿಯೇಶನ್ ಅಧ್ಯಕ್ಷ ಬಸವರಾಜ ಸಿ.ತೋಟದ ಅವರು ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡುತ್ತ ಕರ್ನಾಟಕ ಛಾಯಾಗ್ರಾಹಕರ ಸಂಘ ಹಾಗೂ ಕಲಬುರಗಿ ಜಿಲ್ಲಾ ಛಾಯಾಗ್ರಾಹಕರ ಅಸೋಸಿಯೇಶನ್ ಸಹಯೋಗದೊಂದಿಗೆ ಛಾಯಾಗ್ರಾಹಕರ ಕುಟುಂಬದ ಹಿತರಕ್ಷಣೆಗಾಗಿ “ಕೆಪಿಎ ಆಸರೆ ಯೋಜನೆ” ಜಾರಿಗೆ ತರಲಾಗಿದೆ. ಈ ಯೋಜನೆಯಡಿ ಸದಸ್ಯರಾದ ಛಾಯಾಗ್ರಾಹಕರು ಅಕಸ್ಮಾತ್ ನಿಧನ ಹೊಂದಿದಲ್ಲಿ, ಅವರ ಆಶ್ರಿತ ಕುಟುಂಬಕ್ಕೆ 1,00,000 ರೂ. ಆರ್ಥಿಕ ನೆರವು ನೀಡುವ ಯೊಜನೆ ಛಾಯಾಗ್ರಾಹಕ ವೃತ್ತಿಯಲ್ಲಿ ಇರುವ ಅನಿಶ್ಚಿತತೆ ಹಾಗೂ ಕುಟುಂಬದ ಭವಿಷ್ಯದ ದೃಷ್ಟಿಯಿಂದ ಈ ಯೋಜನೆಯನ್ನು ರೂಪಿಸಲಾಗಿದೆ ಎಂದು ತಿಳಿಸಿದರು.
ಅಸೊಶಿಯೇಶನ್ ಸಲಹೆಗಾರರಾದ ಚಂದ್ರಶೇಖರ ಬ್ಯಾಕೋಡ, ಅಸೊಶಿಯೇಶನ್ ಮಾಧ್ಯಮ ಸಲಹೆಗಾರರಾದ ನಾರಯಣ ಜೋಶಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಶಹಬಾದ ತಾಲ್ಲೂಕಿನ ಅಧ್ಯಕ್ಷ ಮಲ್ಲಿಕಾರ್ಜುನ ತುಪ್ಪದ ಮಠ, ಮಹಾಲಿಂಗ ತುಪ್ಪದಮಠ, ಮಲ್ಲಿಕಾರ್ಜುನ ಬೇಳಮಗಿ, ಮಲ್ಲಿಕಾರ್ಜುನ ರೆಡ್ಡಿ, ಮಲ್ಲಿನಾಥ ಎಸ್ ಟೆಂಗಳಿ, ಸಂತೋಷ ಕೊಬಾಳ, ಬುರಬುರೆ, ಅಮಿತ ಸಿಂಘ,ಮಹೇಶ್ ಕೆ. ಶೆರಿಕರ,
ಮಾರುತಿ ರಾಠೋಡ, ಅರವಿಂದ ಎಂ. ಚವ್ಹಾಣ ಹಾಗೂ ತಾಲ್ಲೂಕಿನ ಛಾಯಾಗ್ರಾಹಕರು ಉಪಸ್ಥಿತರಿದ್ದರು.
“ಬನ್ನಿ ಆಸರೆ ಯೋಜನೆಯ ಸದಸ್ಯರಾಗೋಣ” ಎಂಬ ಘೋಷವಾಕ್ಯದೊಂದಿಗೆ ಜೂನ್ 1 ರಿಂದ ಸದಸ್ಯತ್ವ ನೋಂದಣಿ ಆರಂಭವಾಗಿದೆ. ಕಲಬುರಗಿ ಜಿಲ್ಲೆಯ ಎಲ್ಲಾ ವೃತ್ತಿಪರ ಹಾಗೂ ಹವ್ಯಾಸಿ ಛಾಯಾಗ್ರಾಹಕರು ಈ ಯೋಜನೆಯ ಸದಸ್ಯರಾಗಿ ತಮ್ಮ ಕುಟುಂಬಕ್ಕೆ ಭದ್ರತೆ ಕಲ್ಪಿಸಿಕೊಳ್ಳುವಂತೆ ಸಂಘದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ. ವಿಶೇಷ ಸೂಚನೆ ಸಂಗದಲ್ಲಿ ಸದಸ್ಯತ್ವ ಹೊಂದಿದ ಛಾಯಾಗ್ರಾಹಕರಿಗೆ ಮಾತ್ರ ಅವಕಾಶ ಇರುತ್ತದೆ.