ಕಲಬುರಗಿ: ನಗರದ ಬ್ರಹ್ಮಪುರ ಬಡಾವಣೆಯ ಭೋವಿ ವಡ್ಡರ ಸಮಾಜದ ಕೂಲಿಕಾರ್ಮಿಕ ಸೂರ್ಯಕಾಂತ ಮಂಜಳಕರ್ ಎಂಬುವವರು ಆಂಧ್ರ ಮೂಲದ ಗುತ್ತಿಗೆದಾರರ ಹತ್ತಿರ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಕಟ್ಟಡದಿಂದ ಬಿದ್ದು ಶಾಶ್ವತ ಅಂಗವಿಕಲನಾಗಿರುವದರಿಂದ ಪರಿಹಾರ ನೀಡದೇ ಜೀವಬೆದರಿಕೆ ಹಾಕುತ್ತಿರುವ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಂಡು, ಬಡ ಕೂಲಿಕಾರ್ಮಿಕನಿಗೆ ಸರಕಾರ 75 ಲಕ್ಷ ರೂ ಪರಿಹಾರ ನೀಡುವಂತೆ ಆಗ್ರಹಿಸಿ ಇಂದು ಕಲಬುರಗಿ ಜಿಲ್ಲಾ ಭೋವಿ ವಡ್ಡರ ಸಮಾಜದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.ರವಿಚಂದ್ರ ಗುತ್ತೇದಾರ,ವಿಠಲ ನೆಲೋಗಿ,ಹರಿಬಾಬು ದೋತ್ರೆ,ಸುರೇಶ ಸಾಗರ,ತಿಮ್ಮಯ್ಯ ದೇವಕರ ಸೇರಿದಂತೆ ಅನೇಕರು ಪಾಲ್ಗೊಂಡರು.