
ಲಕ್ಷೆö್ಮÃಶ್ವರ,ಸೆ೩: ಸಂಘ ಸಂಸ್ಥೆಗಳ ಕಾರ್ಯಕರ್ತರು ಸಮಾಜಮುಖಿ ಕೆಲಸಗಳನ್ನು ಮಾಡಲು ಮುಂದಾಗಬೇಕು. ಒಗ್ಗಟ್ಟಿನಿಂದ ಯಾವುದೇ ಕೆಲಸವನ್ನಾದರೂ ಮಾಡಲು ಸಾಧ್ಯ’ ಎಂದು ಮಹಿಳಾ ಸಾಹಿತಿ ಲಲಿತಕ್ಕ ಕೆರಿಮನಿ ಹೇಳಿದರು. ಇಲ್ಲಿನ ಬಾಳಿಕಾಯಿ ಅವರ ಮಿಲ್ ಆವರಣದಲ್ಲಿ ಸಮಾಜ ಸೇವಕ ಶಿವಲಿಂಗಯ್ಯ ಹೊತ್ತಗಿಮಠ ಸ್ನೇಹಿತರ ಬಳಗದ ವತಿಯಿಂದ ಜರುಗಿದ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಿರಿಯ ನಾಗರಿಕರು ಮತ್ತು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಆರ್. ಲಕ್ಕುಂಡಿಮಠ ಕಾರ್ಯಕ್ರಮ ಉದ್ಘಾಟಿಸಿ `ಯುವ ಜನತೆ ಉತ್ತಮ ಕೆಲಸಗಳನ್ನು ಮಾಡುವ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು. ಎಲ್ಲವನ್ನೂ ಸರ್ಕಾರವೇ ಮಾಡಲು ಸಾಧ್ಯವಿಲ್ಲ. ಕಾರಣ ಸಣ್ಣಪುಟ್ಟ ಕೆಲಸಗಳನ್ನು ಸಂಘ ಸಂಸ್ಥೆಗಳು, ಸಮಾಜ ಚಿಂತಕರು, ಕಾರ್ಯಕರ್ತರು ಮಾಡಬೇಕು’ ಎಂದು ತಿಳಿಸಿದರು.
ಕಾಯಕ ಜೀವಿಗಳಾದ ಪಾದರಕ್ಷೆ ರಿಪೇರಿ ಮಾಡುವ ರವಿ ಹಂಜಗಿ, ಸರ್ಕಾರಿ ಆಸ್ಪತ್ರೆಯ ಸ್ವಚ್ಚತಾ ಸೇವಕಿ ಯಲ್ಲಮ್ಮ ಮಡಿವಾಳರ, ರೈತರಿಗೆ ಬುಟ್ಟಿ ಮಾಡಿಕೊಡುವ ಕೊರವರ ಸಮಾಜದ ಸೋಮಣ್ಣ ಭಜಂತ್ರಿ, ಪೌರ ಕಾರ್ಮಿಕ ರೇಣಪ್ಪ ಕಮತದ, ಹಡಪದ ಅಪ್ಪಣ್ಣ ಸಮಾಜದ ತಿಪ್ಪಣ್ಣ ಹಡಪದ ಅವರನ್ನು ಹಾಗೂ ಎಂ.ಎ ಕನ್ನಡ ವಿಷಯದಲ್ಲಿ ೯ ಚಿನ್ನದ ಪದಕ ಪಡೆದ ಸಂಗೀತಾ ಲಕ್ಕಪ್ಪನವರನ್ನು ಸನ್ಮಾನಿಸಲಾಯಿತು.
ಸಂಘಟಕ ಶಿವಲಿಂಗಯ್ಯ ಹೊತಗಿಮಠ ಎಲೆಮರೆಯ ಕಾಯಿಯಂತೆ ಹಲವು ವರ್ಷಗಳಿಂದ ಕಾಯಕದಲ್ಲಿಯೇ ಸಂತೃಪ್ತಿ, ದೇವರನ್ನು ಕಾಣುವ ಕಾಯಕ ಜೀವಿಗಳ ಬಗ್ಗೆ ಮಾತನಾಡಿದರು. ಚಂಬಣ್ಣ ಬಾಳಿಕಾಯಿ, ಮಹೇಶ ಹೊಗೆಸೊಪ್ಪಿನ, ಪದ್ಮರಾಜ ಪಾಟೀಲ, ಶಶಿಧರ ಮಳಲಿ, ಮಹೇಶ ಲಮಾಣಿ (ಅಕ್ಕಿಗುಂದ ) ಚನ್ನಪ್ಪ ಕೋಲಕಾರ, ಮಂಜುನಾಥ ಮಾಗಡಿ ಮಾತನಾಡಿದರು. ನೀಲಪ್ಪ ಕರ್ಜೆಕಣ್ಣವರ, ಪ್ರೇಮವ್ವ ಹೊತಗಿಮಠ, ಪತ್ರ‍್ತರ ಸಂಘ ಅಧ್ಯಕ್ಷ ಅಶೋಕ ಸೊರಟೂರ, ನಾಗರಾಜ ಹಣಗಿ, ಮಲ್ಲಿಕಾರ್ಜುನ ಕಳಸಾಪುರ, ರಮೇಶ ನಾಡಗೇರ, ದಿಗಂಬರ ಪೂಜಾರ, ಮಾಳಿಂಗರಾಯ ಪೂಜಾರ, ಹೊನ್ನಪ್ಪ ವಡ್ಡರ, ಅಮರೇಶ ತೆಂಬದಮನಿ, ರಾಮು ಅಡಗಿಮನಿ, ಮಲ್ಲಿಕಾರ್ಜುನ ದೊಡ್ಡೂರ, ಜಗದೇವಯ್ಯ ಹಾವೇರಿಮಠ, ಶಿವಾನಂದ ಲಿಂಗಶೆಟ್ಟಿ, ಪ್ರವೀಣ ಬೋಮಲೆ, ಸ್ವಾತಿ ಪೈ, ವೀಣಾ ಜಾಮನೂರ, ಎಲ್..ಆರ್. ಮಲ್ಲಸಮುದ್ರ ಇದ್ದರು. ರತ್ನಾ ಕರ್ಕಿ, ನಿರ್ಮಲಾ ಅರಳಿ ನಿರೂಪಿಸಿದರು.






























