Home ಜಿಲ್ಲೆ ಕಲಬುರಗಿ ಮಳಖೇಡನಲ್ಲಿ ರಸ್ತೆ ತಡೆದು ರೈತರಿಂದ ಬೃಹತ್ ಪ್ರತಿಭಟನೆ;ರೈತರು ಒಗ್ಗಟ್ಟಾದರೆ ಸರ್ಕಾರವೇ ನಮ್ಮ ಬಳಿ ಬರುತ್ತೇ: ಶಾಂತಕುಮಾರ...

ಮಳಖೇಡನಲ್ಲಿ ರಸ್ತೆ ತಡೆದು ರೈತರಿಂದ ಬೃಹತ್ ಪ್ರತಿಭಟನೆ;ರೈತರು ಒಗ್ಗಟ್ಟಾದರೆ ಸರ್ಕಾರವೇ ನಮ್ಮ ಬಳಿ ಬರುತ್ತೇ: ಶಾಂತಕುಮಾರ ಚನ್ನಕ್ಕಿ

ಸೇಡಂ ,ಆ ,25: ನಾವೆಲ್ಲಾ ರೈತರು ಒಂದಾಗಿ ನಿಂತರೆ ನಮ್ಮ ಒಗ್ಗಟ್ಟಿನ ಶಕ್ತಿಗೆ ಮಣಿದು ಸರ್ಕಾರವೇ ನಮ್ಮ ಬಳಿ ಬಂದು ಪರಿಹಾರ ಕಲ್ಪಿಸುತ್ತದೆ. ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ರೈತರು ಸಂಘಟಿತ ಹೋರಾಟವೊಂದೇ ದಾರಿ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕಾ ಅಧ್ಯಕ್ಷರಾದ ಶಾಂತಕುಮಾರ ಚನ್ನಕ್ಕಿ ಗುಡುಗಿದರು. ತಾಲೂಕಿನ ಮಳಖೇಡ ಗ್ರಾಮದಲ್ಲಿರುವ ರಾಜ್ಯ ಹೆದ್ದಾರಿಯ ಎಪಿಎಂಸಿ ಎದುರುಗಡೆ (2025-26 ನೇ ಸಾಲಿನ) ಬೆಳೆ ವಿಮೆ ಪರಿಹಾರದ ಹಣ ಇನ್ನೂ ಮಳಖೇಡ ಗ್ರಾಪಂ ವ್ಯಾಪ್ತಿಯಲ್ಲಿನ ಸಾವಿರಾರು ರೈತರ ಕೈಸೇರದ ಹಿನ್ನೆಲೆಯಲ್ಲಿ ತಾಲೂಕಾ ಹಾಗೂ ಗ್ರಾಮ ಘಟಕದಿಂದ ರಸ್ತೆಯನ್ನು ತಡೆದು ಬೃಹತ್ ಪ್ರತಿಭಟನೆ ನಡೆಸಿ ಮಾತನಾಡಿದ ಅವರು ಸರ್ಕಾರದ ವಿಳಂಬ ಧೋರಣೆಯನ್ನು ಖಂಡಿಸಿದ ಅನ್ನದಾತರು, ತಕ್ಷಣವೇ ವಿಮೆ ಹಣವನ್ನು ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುವಂತೆ ಆಗ್ರಹಿಸಿದರು. ಈ ವೇಳೆಯಲ್ಲಿ ಭೀಮರಾವ್ ಪಾಟೀಲ್ ಅಶೋಕ ಬಂಡಿ,ಶರಣು ಅವಂಟಿ,ಮಾರುತಿ ಹೊಕ್ಕಳ್,ಹಾಗೂ ಸಂದೀಪ ಸಂಗಾವಿ,ಚಂದ್ರಶೇಖರ್ ಮರಗೊಳ, ಗುರುರಾಜ ತಳಕಿನ, ಅಭಿಶೇಕ ಬಜಾರ,ಚಂದ್ರಕಾಂತ ತೋಟ್ನಳ್ಳಿ, ಮಂಜುನಾಥ ಪಾಟೀಲ್ ಬಿಜನಳ್ಳಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.ಸ್ಥಳಕ್ಕೆ ಧಾವಿಸಿದ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಪೆÇಲೀಸರು ಪ್ರತಿಭಟನಾಕಾರರ ರೈತರನ್ನು ಮನವೊಲಿಸಲು ಯತ್ನಿಸಿದ್ದಾರೆ.ಸುಮಾರು ಎರಡು ಗಂಟೆಗಳ ಕಾಲ ರೈತರ ಪ್ರತಿಭಟನೆಯಿಂದ ಸಂತೆಗೆ ಬರುವ ಜಾನುವಾರುಗಳಿಗೆ ಸಾರ್ವಜನಿಕರಿಗೆ ತೊಂದರೆ ಅನುಭವಿಸುವಂತಾಗಿದೆ.