Home ಜಿಲ್ಲೆ ಬರಪೀಡಿತ ಪ್ರದೇಶ ಘೋಷಿಸದಿದರೆ ರಾಷ್ಟ್ರೀಯ ಹೆದ್ದಾರಿ ಬಂದ್;ರೈತ ಸಂಘÀ ಎಚ್ಚರಿಕೆ

ಬರಪೀಡಿತ ಪ್ರದೇಶ ಘೋಷಿಸದಿದರೆ ರಾಷ್ಟ್ರೀಯ ಹೆದ್ದಾರಿ ಬಂದ್;ರೈತ ಸಂಘÀ ಎಚ್ಚರಿಕೆ


ಬಾದಾಮಿ,ಸೆ.೮: ತಾಲೂಕನ್ನು ಕೂಡಲೇ ಬರಪೀಡಿತ ಪ್ರದೇಶವೆಂದು ಘೋಷಿಸಬೇಕು. ಇಲ್ಲದಿದ್ದರೆ ರಾಷ್ಟಿçÃಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸುವುದಾಗಿ ರೈತ ಸಂಘಟಗಳು ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಭಾರತೀಯ ಕಿಸಾನ ಸಂಘ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ನಡೆಯುತ್ತಿರುವ ರೈತರ ಅನಿರ್ದಿ?Á್ಟವಧಿ ಧರಣಿಯ ಅಂಗವಾಗಿ ಸೋಮವಾರ ಮೂರನೇ ದಿನವೂ ಮುಂದುವರಿದಿದೆ.


ಧರಣಿ ನಿರತ ಸ್ಥಳಕ್ಕೆ ತಹಶೀಲ್ದಾರ ಎಸ್.ಎಫ್.ಬೊಮ್ಮನ್ನವರ, ಕೃಷಿ ಸಹಾಯಕ ನಿರ್ದೇಶಕ ಅಶೋಕ ತಿರಕಣ್ಣವರ ಹಾಗೂ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಪಿ.ಪಾಟೀಲ ಭೇಟಿ ನೀಡಿ, ಸರ್ಕಾರ ಶೀಘ್ರದಲ್ಲಿಯೇ ತಾಲೂಕನ್ನು ಬರಗಾಲ ಎಂದು ಘೋ?Àಣೆ ಮಾಡುವ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.


ಆದರೆ, ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಹೊರಬರುವವರೆಗೆ ಧರಣಿಯನ್ನು ಹಿಂಪಡೆಯುವುದಿಲ್ಲ ಎಂದು ರೈತರು ಸ್ಪ?À್ಟಪಡಿಸಿದರು. ತಕ್ಷಣವೇ ಬಾದಾಮಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಂಡು ಕುಳಗೇರಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಮುಖಂಡರು ಎಚ್ಚರಿಕೆ ನೀಡಿದರು.


ಪ್ರತಿಭಟನೆಯಲ್ಲಿ ಭಾರತೀಯ ಕಿಸಾನ ಸಂಘದ ಉತ್ತರ ಪ್ರಾಂತ ಕಾರ್ಯಕಾರಿಣಿ ಸದಸ್ಯ ಸುಬ್ಬರಾಯಗೌಡ ಪಾಟೀಲ, ಜಿಲ್ಲಾ ಯುವ ಪ್ರಮುಖ ಕಿರಣಕುಮಾರ ಕುಲಕರ್ಣಿ, ತಾಲುಕಾಧ್ಯಕ್ಷ ರುದ್ರಗೌಡ ಪಾಟೀಲ, ತಾಲೂಕು ರೈತ ಸಂಘದ ಅಧ್ಯಕ್ಷ ಸಿದ್ದನಗೌಡ ಗೌಡರ, ಬಿ.ಐ.ಬಡಿಗೇರ, ಎಂ.ಎಚ್.ಕುಮ್ಮಿ, ಬಿ.ಕೆ.ಹುಣಸಿಕಟ್ಟಿ, ಬಾಬು ಜಾಲಿಹಾಳ, ನಿಂಗನಗೌಡ ಹಿರೇನಿಂಗನಗೌಡರ, ಶೇಖರಯ್ಯ ರೇ?ೆ್ಮ, ಸಿದ್ದಪ್ಪ ಖವಾಸ್ತೆ, ಸುಭಾ?ï ಅಂಗಡಿ, ದಶರಥಗೌಡ ಗದ್ದಿಗೌಡರ ಸೇರಿದಂತೆ ಅನೇಕ ರೈತರು ಹಾಗೂ ಮುಖಂಡರು ಭಾಗವಹಿಸಿದ್ದರು.