
ಚನ್ನಮ್ಮನ ಕಿತ್ತೂರು,ಅ.೧೦: ಎಲ್ಲರ ಸಹಕಾರದಿಂದ ಉತ್ಸವ ಯಶಸ್ವಿಗೊಳ್ಳವುದೆಂದು ಲೋಕೋಪಯೋಗಿ ಇಇ ಪ್ರವೀಣ ಹುಲಜಿ ಅಭಿಪ್ರಾಯಪಟ್ಟರು.
ಐತಿಹಾಸಿಕ ಚನ್ನಮ್ಮನ ಕಿತ್ತೂರ ಉತ್ಸವದ ನಿಮಿತ್ಯ ತಾಲೂಕಿನ ನಿಚ್ಚಣಕಿ ಗ್ರಾಪಂ ವ್ಯಾಪ್ತಿ ಡೊಂಬರಕೊಪ್ಪ ಪ್ರವಾಸಿಮಂದಿರದಲ್ಲಿ ಕರಯಲಾಗಿದ್ದ ವೇದಿಕೆÀ ಸಮಿತಿ ರಚಿಸುವ ಕುರಿತುಪೂರ್ವಭಾವಿ ಸಭೆ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದರು. ಕಿತ್ತೂರು ಉತ್ಸವ ವೈಭವಯುತವಾಗಿ ಆಚರಿಸಬೇಕೆಂದು ತೀರ್ಮಾನಿಸಲಾಗಿದ್ದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿದೆ. ಈ ಉತ್ಸವದ ವಿಜಯೋತ್ಸವ ನಿರ್ವಹಣೆಗಾಗಿ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಈಗಾUಲೇ ವಿವಿಧ ಉಪ ಸಮಿತಿಗಳನ್ನು ರಚಿಸಿ ಆದೇಶಿಸಲಾಗಿದೆ. ಅದಕ್ಕಾಗಿ ಅಧಿಕಾರಿಗಳದಷ್ಟೇ ಜವಾಬ್ದಾರಿ ಇರುವುದಿಲ್ಲ. ಆದ್ದರಿಂದ ಅಧಿಕಾರಿಗಳು, ಸ್ಥಳೀಯರು ಜೊತೆಗೂಡಿ ಯಾವುದೇ ಲೋಪದೋಷವಾಗದಂತೆ ಜವಾಬ್ದಾರಿ ವಹಿಸಿಕೊಂಡು ಕಾರ್ಯನಿರ್ವಹಿಸಿದಾಗ ಈ ಉತ್ಸವ ಯಶಸ್ವಿಯಾಗುತ್ತದೆ ಇದಕ್ಕೆ ನಿಮ್ಮೇಲ್ಲರ ಸಹಕಾರ ಅಗತ್ಯ ಎಂದರು.
ಸಭೆಯಲ್ಲಿ ಸದಸ್ಯರುಗಳ ಸಾಕಷ್ಟು ಅಹವಾಲುಗಳು ಕೇಳಿಬಂದವು. ಅವುಗಳನ್ನು ಲೋಕೋಪಯೋಗಿ ಇಲಾಖೆ ಇಇ ಹುಲಜಿ ಸ್ಥಳದಲ್ಲಿಯೇ ಪರಿಹಾರ ಕಂಡುಕೊAಡರು.
ಈ ವೇಳ ಪಿಡಬ್ಲೂಡಿ ಎಇಇ ಜಯಂತ ಗುಂಜಟ್ಕರ ಪಾಟೀಲ, ಪಿಡಬ್ಲೂಡಿ ವ್ಯವಸ್ಥಾಪಕ ಶ್ರೀಧರ ಪೂಜಾರ, ಕೆಇಬಿ ಎಇಇ ಶಿವಾನಂದ ಬಾಲಕೋಟಿ, ಪಾಪು ನರಗುಂದ, ಅಶಪಾಕ ಹವಾಲ್ದಾರ, ಕಿರಣ ಪಾಟೀಲ, ಅಪ್ಪಾಸಾಬ ಶಿಲ್ಲೇದಾರ, ಶಿವಾನಂದ ಬೋಗೂರ, ಲ್ಯಾಂಡ ಆರ್ಮಿ ಅಧಿಕಾರಿ ರಾಮಯ್ಯಾ, ದೌಲತ್ತ್ ಪರಂಡಿಕರ, ಪ್ರಮೋದ ಕಾಜಗಾರ, ಪಿಡಬ್ಲೂಡಿ ಸಿಬ್ಬಂದಿ, ಶಾರದಾ ಬಾಗೇವಾಡಿ, ಕಾವ್ಯಶ್ರೀ ಹವಾಲ್ದಾರ, ಸಹಾಯಕ ಇಂಜಿನಿಯರ್ ಸಚಿನಕುಮಾರ ಹಂಚಿನಮನಿ, ಶ್ರೀಧರ ಮೆಳವಂಕಿ, ಕಿರಿಯ ಅಭಿಯಂತರರು ರಾಜು ಮುಖನಾಳ ಇತರರಿದ್ದರು.























