
ಬೀದರ : ಜೂ 13: ಸಮಾಜದಲ್ಲಿ ಪಿಡುಗಾಗಿರುವ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಎಲ್ಲರೂ ಮುಂದಾಗುವಂತೆ ಬೀದರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರು ಗೌರವಾನ್ವಿತ ಶ್ರೀ ರಾಘವೇಂದ್ರ ಉಪಧ್ಯೆ ಅವರು ಕರೆ ನೀಡಿದರು.
ಬೀದರ ನಗರದ ರಂಗ ಮಂದಿರದಲ್ಲಿ ಇಂದು ಶುಕ್ರವಾರ ರಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೋಸೈಟಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದಲ್ಲಿ ಶಾಸನಾತ್ಮಕವಾಗಿ ಹಾಗೂ ಕಾನೂನಾತ್ಮಕವಾಗಿ ಬಾಲಕಾರ್ಮಿಕ ಪದ್ಧತಿಗೆ ಶಿಕ್ಷೆ ಸಹ ಇದೆ. ಈ ಹಿನ್ನೆಲೆಯಲ್ಲಿ ಬಾಲಕಾರ್ಮಿಕರನ್ನಾಗಿ ಮಕ್ಕಳನ್ನು ದುಡಿಸಿಕೊಳ್ಳುವ ಪಾಲಕರಲ್ಲಿ ಸೂಕ್ತ ಅರಿವು ಮೂಡಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
ಮಕ್ಕಳು ಮನೆಗಳಲ್ಲಿ ಕೆಲಸ ಮಾಡುವದು ಹಿರಿಯರಿಗೆ ಗೌರವ ನೀಡಿದಂತೆ.ಆದರೆ 14 ವರ್ಷ ಒಳಗಿನ ಬಾಲಕಾರ್ಮಿಕರು ಹಾಗೂ 14 ರಿಂದ 18 ವರ್ಷ ಒಳಗಿನ ಕಿಶೋರ್ ಮಕ್ಕಳನ್ನು ಬಾಲಕಾರ್ಮಿಕತೆಗೆ ಬಳಸುವುದು ಅಪರಾಧ ಹಾಗೂ ತಪ್ಪಿತಸ್ಥರಿಗೆ ಜೈಲು ಶಿಕ್ಷೆ ಸಹ ಇದೆ ಎಂದು ಹೇಳಿದರು.
ಸಾಮಾನ್ಯ ಮಕ್ಕಳಂತೆ ಬಾಲಕಾರ್ಮಿಕ ಮಕ್ಕಳಿಗೂ ಉತ್ತಮ ಶಿಕ್ಷಣ ದೊರೆಯಬೇಕು. ಮಕ್ಕಳು ಬಾಲಕಾರ್ಮಿಕರಾಗಿ ಉಳಿಯುವುದರಿಂದ ದೇಶದ ಅಭಿವೃದ್ಧಿಗೆ ಮಾರಕ.ಅದರಂತೆ ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೂ ತೊಂದರೆಯಾಗುವದರಿಂದ ಬಾಲಕಾರ್ಮಿಕ ಪದ್ಧತಿ ಹೋಗಲಾಡಿಸಲು ನೆರವಾಗಬೇಕು. ಮಕ್ಕಳ ಹಕ್ಕುಗಳ ಬಗ್ಗೆ ಪಾಲಿಕ, ಪೆÇೀಷಕರಲ್ಲಿ ಸೂಕ್ತ ಅರಿವು ಮೂಡಿಸುವಂತೆ ಅವರು ಸಲಹೆ ನೀಡಿದರು.
ನಮ್ಮ ದೇಶದ ಭವಿಷ್ಯ ಮಕ್ಕಳ ಕೈಯಲ್ಲಿದೆ ನಮ್ಮ ದೇಶದಲ್ಲಿ ಮಕ್ಕಳ ಮೇಲೆ ಹಲವರು ರೀತಿ ಮಕ್ಕಳ ಮೇಲೆ ದೌರ್ಜನ್ಯ ಆಗ್ತಾ ಇದೆ. ಬಾಲ್ಯ ವಿವಾಹ ಮದುವೆಯನ್ನು ತಡೆಯಬೇಕಾದರೆ ಒಂದು ಇಲಾಖೆಯಲ್ಲಿ ನಂಬರ್ 1098 ಅನ್ನು ಕೊಟ್ಟಾಗ ಮಕ್ಕಳನ್ನು ಯಾರು ನೋಡಿಕೊಳ್ಳುತ್ತಿದ್ದರು ಅಂತ ಪಾಲಕರೆ ಬಾಲ ವಿವಾಹ ಮದುವೆಗಳಲ್ಲಿ ಭಾಗಿ ಆ ಕರೆಯ ಮೂಲಕ ಸ್ನೇಹಿತರು ಬಾಲ ವಿವಾಹ ತಡೆದ ಘಟನೆಗಳಾಗಿವೆ ಅವರು ತಿಳಿಸಿದರು.
ಬಾಲ್ಯ ವಿವಾಹ ತಡೆಯಬೇಕಾದರೆ ಒಂದು ಇಲಾಖೆಯಲ್ಲಿ 1098 ಕೊಡಲಾಗಿತ್ತು. ಬಾಲಕ, ಬಾಲಕಿಯ ತಂದೆ-ತಾಯಿಗಳೇ ವಿವಾಹ ಮಾಡಿ ಮಾನವನ ಹಾಳು ಮಾಡುತ್ತಿದ್ದಾರೆ ವಿವಾಹವನ್ನು ತಡೆಯಲು ಬಾಲಕಿಯ ಸ್ನೇಹಿತರು ಕರೆ ಮಾಡಿ ಹಲವಾರು ಮದುವೆಗಳನ್ನು ನಿಲ್ಲಿಸಿದರೆ. ಅದೇ ರೀತಿಯಾಗಿ ಒಂದು ಪೆಟಿಷನ್ ಇತ್ತು ಹೈಕೋರ್ಟ್ ಪ್ರತಿಕ್ಷಣ ಏನೆಂದರೆ ಯಾವುದೋ ಒಂದು ಸರ್ಕಾರಿ ಶಾಲೆಯಲ್ಲಿ ಒಂದು ಜೊತೆ ಬಟ್ಟೆ ಕೊಡುತ್ತಾರೆ, ಈ ರೀತಿ ಬಟ್ಟೆ ಕೊಟ್ಟರೆ ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದಾಗ ಹೈಕೋರ್ಟಿನಲ್ಲಿ ಎರಡು ಜೊತೆ ಬಟ್ಟೆ ಕೊಡಲು ಆದೇಶವಾಯಿತು ಎಂದು ತಿಳಿಸಿದರು.
ಬಾಲಕರಿಗೆ ತಂದೆ-ತಾಯಿ ಒಳ್ಳೆಯ ಮಾರ್ಗದರ್ಶನ ನೀಡದಿದ್ದರೆ, ಶಿಕ್ಷಣದಲ್ಲಿ ಸಿಗಬೇಕಾದ ಶಿಕ್ಷಣವನ್ನು ಸರಿಯಾದ ಸಮಯಕ್ಕೆ ಒದಗಿಸಿ ಕೊಡಬೇಕು ಅಂದರೆ ಮಾತ್ರ ನಮ್ಮ ದೇಶ ಉತ್ತಮ ಗುಣಮಟ್ಟಗೆ ಕೊಂಡೊಯ್ಯಲು ಸಾಧ್ಯ. ಅದರಂತೆ ಮಗನ ಕನಸುಗಳು ಎಲ್ಲ ಮಕ್ಕಳು ತಂದೆ ತಾಯಿ ಶಿಕ್ಷಣ ಕೊಡಬೇಕು ಅನ್ನೋದು ಎಲ್ಲರ ಬಯಕೆ, ಕೆಲವರು ಬಡತನದಿಂದ ಕಳಸಬಹುದು ಇಲ್ಲಿ ಎಲ್ಲ ಮಕ್ಕಳು ಕೆಂಪು, ಅಥವಾ ಬಳಿ ಬಟ್ಟೆ ಧರಿಸಿದನ್ನು ನೋಡಿರಬಹುದು, ಈ ರೀತಿಯಾಗಿ ಹಲವಾರು ಸಮಸ್ಯೆಗಳು ಎದುರಿಸುತ್ತಿದ್ದಾರೆ ಎಂದು ಹೇಳಿದರು.
ಸಂಸ್ಕøತದಲ್ಲಿ ಒಂದು ಭಾಷೆ ಇದೆ. ನಮ್ಮ ಬಸವಣ್ಣರ ನಾಡು ಇದು ಕಾಯಕವೇ ಕೈಲಾಸ ಅಂತ ಬಸವಣ್ಣನವರು ಹೇಳಿದ್ದಾರೆ ಸಣ್ಣ ವಯಸ್ಸಿನಲ್ಲಿ ಕಾಯಕ ಪ್ರಾರಂಭ ಮಾಡಿ ಬಿಟ್ರು ಒಬ್ಬ ವ್ಯಕ್ತಿಗಳು, ಪ್ರತಿಯೊಬ್ಬ ಮಗು ಶಿಕ್ಷಣ ಪಡೆದಲ್ಲಿ ಉತ್ತಮ ಸಮಾಜ ಸುಧಾರಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಸಣ್ಣ ವಯಸ್ಸಿನಲ್ಲಿ ಕಾಯಕ ಪ್ರಾರಂಭಿಸಿ ಬಿಟ್ಟರೆ ವಾಸ್ತವದಲ್ಲಿ ಕಾಯಕ ಎಂದರೆ ಏನು ಯಾವ ನಿಟ್ಟಿನಲ್ಲಿ ಯಾವ ಯೋಜನೆಗಳು ತಮ್ಮ ಸರಿಯಾದ ಸಮಯ ತಕ್ಕಂತೆ ಕೆಲಸ ಮಾಡಿದರೆ ಸಾಕು ಎಂದರು. ಅದೇ ರೀತಿಯಲ್ಲಿ ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ತಾವೆಲ್ಲರೂ ಹಾಗೂ ನಾವೆಲ್ಲರೂ ಈ ಉನ್ನತ ಗುಣಮಟ್ಟದ ಶಿಕ್ಷಣ ನೀಡಿ ಸಹಕಾರಿಸಿದಲ್ಲಿ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದು ಹೇಳಿದರು.
ಬೀದರ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ ಅವರು ಮಾತನಾಡಿದರು. ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯ ಇಡೀ ವಿಶ್ವ ದಲ್ಲಿ ಆಚರಣೆಯನ್ನು ಹಮ್ಮಿಕೊಳ್ಳಲಾಯಿತು, 2002ರಲ್ಲಿ ಪ್ರಾರಂಭ ಗೊಂಡಿತು, 4.2 ಲಕ್ಷ ಮಕ್ಕಳು ಕೆಲಸ ಮಾಡುತ್ತಿದ್ದಾರೆ. 18 ವರ್ಷ ಒಳಗಿನ ಮಕ್ಕಳು ಬಾಲ ಕಾರ್ಮಿಕರು, ಮಕ್ಕಳು ಕೆಲಸ ಮಾಡಬಾರದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮುಖ್ಯವಾಗಿ ಯಾವುದೇ ಮಕ್ಕಳು ಯಾವುದೇ ಒಂದು ಕಾರ್ಖಾನೆ ಇರಬಹುದು ಅಥವಾ ಬೇರೆ ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡಬಾರದು, ಒಂದು ವೇಳೆ 18 ವರ್ಷ ಮಕ್ಕಳಿಗೆ ನಮ್ಮ ಕಾರ್ಮಿಕ ಇಲಾಖೆ ಇದೆ ಅಥವಾ ಜಿಲ್ಲಾಡಳಿತ ಇದೆ ನೋಡಿ ಇರಬಾರದು, 18 ವರ್ಷ ಒಳಗಿನ ಇದರೆ ಅದನ್ನು ತಾವುಗಳು ನಿಲ್ಲಿಸಬೇಕು.
ಮಕ್ಕಳು ಜೀವನದಲ್ಲಿ ಆಕಾಶದೆತ್ತರದ ಗುರಿ ಹೊಂದಬೇಕು. ಸ್ವಾಮಿ ವಿವೇಕಾನಂದ,ಎಪಿಜೆ ಅಬ್ದುಲ್ ಕಲಾಂರಂತಹ ಗಣ್ಯರ ಜೀವನಸಾಧನೆ ತಿಳಿದು,ದೇಶದ ಅಭಿವೃದ್ಧಿಯಲ್ಲಿ ನೆರವಾಗಬೇಕು. ಮಕ್ಕಳು ದೇಶದ ಆಸ್ತಿ, ಮಾನವೀಯತೆ ದೃಷ್ಟಿಯಿಂದ ಮಕ್ಕಳನ್ನು ಬಾಲಕಾರ್ಮಿಕರನ್ನಾಗಿ ದುಡಿಸಿಕೊಳ್ಳದಂತೆ ನೆರೆಹೊರೆಯವರು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಬೇಕು, ಮಕ್ಕಳು ಬೇರೆ ಕ್ಷೇತ್ರದಲ್ಲಿ ಕೊಲವೊಬ್ಬರು ಡಾಕ್ಟರ್ಸ್ ಆಗಬಹುದು, ಬೇರೆ ಬೇರೆ ಕೆಲಸ ಉದ್ಯೋಗ ದೋರಕಬಹುದು ಪ್ರತಿಯೊಬ್ಬ ಮಗು ಶಿಕ್ಷಣ ಪಡೆದಲ್ಲಿ ಉತ್ತಮ ಸಮಾಜ ನೀಡಲು ಸಾಧ್ಯ ಎಂದು ತಿಳಿಸಿದರು.
ಮಕ್ಕಳು ಜೀವನ ಸರಿಯಾಗಿ ರೂಪಿಸಿಕೊಳ್ಳಲಿಕ್ಕೆ ಆಗುವದಕ್ಕೆ ಶಿಕ್ಷಣವನ್ನು ಪಡೆದುಕೊಳ್ಳಬೇಕಾಗುತ್ತದೆ, ಸೌಲಭ್ಯ ಎಲ್ಲ ಮಕ್ಕಳು ಕಡ್ಡಾಯವಾಗಿ 18 ವರ್ಷದ ವರೆಗೆ ಶಿಕ್ಷಣ ಪಡಬೇಕು. ತಾವೆಲ್ಲರೂ ಅದಕ್ಕೆ ಯಾವುದೇ ಸಮಸ್ಯೆ ಬಂದರೆ 1098 ಕರೆ ಮಾಡಿ ಎಂದು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಶ್ರೀ ರಾಘವೇಂದ್ರ ಉಪಧ್ಯೆ ಅವರು ಪ್ರಮಾಣ ವಚನ ಬೋಧಿಸಿದರು.
ಬೀದರ ಜಿಲ್ಲಾ ನ್ಯಾಯಾಲಯದಿಂದ ಜಾಥಾ ಕಾರ್ಯಕ್ರಮವು ತಹಶೀಲ್ ಕಛೇರಿ, ಬಸವೇಶ್ವರ ಚೌಕ, ಅಂಬೇಡ್ಕರ್ ವೃತ್ತದಿಂದ ರೋಟ್ರಿಕ್ ಕ್ಲಬ್ ವೃತ್ತದ ಮೂಲಕ ವೃತ್ತದ ಮೂಲಕ ಜರುಗಿಸಿ ರಂಗಮಂದಿರ ವರೆಗೆ ಜಾಗೃತಿ ಜಾಥಾ ನ್ಯಾಯಾಲಯದ ಆವರಣದಲ್ಲಿ ಬೀದರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಗೌರವಾನ್ವಿತ ಶ್ರೀಯುತ ಎಸ್.ಬಿ.ರೇಹಮಾನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೀರಿಶ್ ದಿಲೀಪ್ ಬದೋಲೆ, ಬೀದರ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಓಂಕಾರ ಎಸ್.ಆರ್, ಜಿಲ್ಲಾ ವಕೀಲರ ಸಂಘ ಅಧ್ಯಕ್ಷರು ಮಠಪತಿ ಸಂಜಯ, ಬೀದರ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶಾರದ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು ಸೀಮಪ್ಪಾ ಬಿ.ಸರ್ಕುರೆ, ಜೆ.ಜೆ.ಬಿ ಸದಸ್ಯರು ಸಂಜುಪಾಟೀಲ್, ಬೀದರ ಬಾಲಕಾರ್ಮಿಕ ಯೋಜನಾ ಸೋಸೈಟಿ ಯೋಜನಾ ನಿರ್ದೇಶಕರ ಅರ್ಜುನ ಸಿತಾಳಗೇರ, ಕಾರ್ಮಿಕ ನಿರೀಕ್ಷಕರು ಕೆ.ಸುವರ್ಣಾ, ಸಂತೋಷ ಗಾಯಕವಾಡ, ರಾಹುಲ ರತ್ನಾಕರ್, ಮಂಜುನಾಥ ಕಾರ್ಮಿಕ ಇಲಾಖೆ ಸಿಬ್ಬಂದಿಗಳು ಹಾಗೂ ಜಿಲ್ಲಾ ಮಟ್ಟದಅಧಿಕಾರಿಗಳು ಮಾಧ್ಯಮ ಮಿತ್ರರು ಈ ಕಾರ್ಯಕ್ರಮದ ಕೇಂದ್ರ ಬಿಂದು ವಿದ್ಯಾರ್ಥಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

























