
ಬ್ಯಾಹಟ್ಟಿ(ತಾ.ಹುಬ್ಬಳ್ಳಿ),ನ.೪: ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಉತ್ತರಪ್ರದೇಶದ ಕಾಶಿ ಜ್ಞಾನಪೀಠದಲ್ಲಿ ೧೯೨೦ರಲ್ಲಿಯೇ ಆಗಿನ ಪೀಠಾಚಾರ್ಯರಾಗಿದ್ದ ಲಿಂಗೈಕ್ಯ ಜಗದ್ಗುರು ಶ್ರೀ ಶಿವಲಿಂಗ ಶಿವಾಚಾರ್ಯ ಭಗವತ್ಪಾದರು ಕರ್ನಾಟಕ ಸಂಘವನ್ನು ಸ್ಥಾಪನೆ ಮಾಡಿ ಕನ್ನಡದ ಕಾರ್ಯಕ್ರಮಗಳಿಗೆ ವ್ಯಾಪಕ ಪ್ರೋತ್ಸಾಹ ನೀಡಿದ್ದರು ಎಂದು ಕಾಶಿ ಜ್ಞಾನಪೀಠದ ಹಿರಿಯ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ನುಡಿದರು.
ಅವರು ವಾರಾಣಸಿಯ ಜಂಗಮವಾಡಿ ಮಠದಲ್ಲಿ ಅಲ್ಲಿಯ ಕರ್ನಾಟಕ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ೭೧ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡುತ್ತಿದ್ದರು. ಕಾಶಿಯಲ್ಲಿ ಬಹಳ ಹಿಂದಿನ ಕಾಲದಿಂದಲೂ ಕನ್ನಡ ಮಾತನಾಡುವ ಜನ ಇರುವುದರಿಂದ ಕನ್ನಡ ಸಂಸ್ಕöÈತಿಗೆ ಆದ್ಯತೆ ಪ್ರಾಪ್ತವಾಗಿದೆ. ಸ್ವಾತಂತ್ರö?ಯ ಹೋರಾಟಗಾರರು ಹಾಗೂ ಶಿಕ್ಷಣ ತಜ್ಞರೂ ಆಗಿದ್ದ ಮದನಮೋಹನ ಮಾಳವೀಯ ಅವರು ೧೯೧೬ರಲ್ಲಿ ಕಾಶಿಯಲ್ಲಿ ಬನಾರಸ್ ಹಿಂದೂ ವಿಶ್ವವಿದ್ಯಾಲಯ ಸ್ಥಾಪನೆ ಮಾಡಿದ ಸಂದರ್ಭದಲ್ಲಿ ಕರ್ನಾಟಕದ ಹಲವಾರು ಪ್ರಾಧ್ಯಾಪಕರು ಅಲ್ಲಿ ಸೇವೆಗೆ ಸೇರಿದಾಗ ಅವರ ಇಚ್ಛೆಯಂತೆ? ಸಮಸ್ತ ಕನ್ನಡಿಗರನ್ನು ಸಂಘಟಿಸಿ ಕಾಶಿ ಜ್ಞಾನಪೀಠದಲ್ಲಿ ಕರ್ನಾಟಕ ಸಂಘ ಸ್ಥಾಪನೆಯಾಗಲು ಲಿಂಗೈಕ್ಯ ಜಗದ್ಗುರು ಶ್ರೀ ಶಿವಲಿಂಗ ಶಿವಾಚಾರ್ಯ ಭಗವತ್ಪಾದರು ಶ್ರಮಿಸಿದ್ದು ಪೀಠದ ಇತಿಹಾಸದಲ್ಲಿ ದಾಖಲೆಯಾಗಿದೆ ಎಂದರು.
ಕಾಶಿ ಪೀಠದ ಜಂಗಮವಾಡಿಮಠದ ಆವರಣದಲ್ಲಿಯೇ ಸ್ಥಾಪನೆಯಾದ ಕರ್ನಾಟಕ ಸಂಘದ ಆಶ್ರಯದಲ್ಲಿ ಶತಮಾನಗಳಿಂದ ಕನ್ನಡಪರ ಸಾಹಿತ್ಯಾತ್ಮಕ, ಶೈಕ್ಷಣಿಕ ಮತ್ತು ಸಾಂಸ್ಕöÈತಿಕ ಕಾರ್ಯಕ್ರಮಗಳು ನಿರಂತವಾಗಿ ನಡೆದುಕೊಂಡು ಬಂದಿವೆ. ಕರ್ನಾಟಕದ ಸಾವಿರಾರು ಜನ ವಿದ್ಯಾರ್ಥಿಗಳು ಅಧ್ಯಯನ ಮತ್ತು ಸಂಶೋಧನೆಗಳನ್ನು ನಡೆಸುವಲ್ಲಿ ಕಾಶಿ ಪೀಠದಲ್ಲಿಯೇ ಆಶ್ರಯ ಪಡೆದಿದ್ದು, ಎಲ್ಲರಿಂದ ಕಾಶಿಯಲ್ಲಿ ಕನ್ನಡದ ವಾತಾವರಣ ನಿರ್ಮಾಣವಾಗಿದೆ ಎಂದೂ ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯೆ ಶಕುಂತಲಾ ದುಂಡಿಗೌಡರ ತಮ್ಮ ಪತಿಯೊಂದಿಗೆ ಸೇರಿ ಕಾರ್ಯಕ್ರಮ ಉದ್ಘಾಟಿಸಿ, ಕರ್ನಾಟಕಕ್ಕೂ ಕಾಶಿ ಪೀಠಕ್ಕೂ ಆರಂಭದಿAದಲೂ ಒಂದು ಅವಿನಾಭಾವ ಸಂಬAಧವಿದ್ದು, ಶತಮಾನ ಕಂಡ ಕಾಶಿ ಪೀಠದ ಕರ್ನಾಟಕ ಸಂಘದ ಆಶ್ರಯದಲ್ಲಿ ನಡೆದ ರಾಜ್ಯೋತ್ಸವ ಉದ್ಘಾಟನೆಯ ಅವಕಾಶ ತಮಗೆ ಲಭ್ಯವಾದದ್ದು ಪುಣ್ಯ ವಿಶೇಷವಾಗಿದೆ ಎಂದರು.
ಪೀಠದ ವ್ಯವಸ್ಥಾಪಕ ಆರ್.ಕೆ.ಸ್ವಾಮಿ, ಅಖಿಲೇಶ್ ಹಿರೇಮಠ, ಶಿವಾನಂದ ಹಿರೇಮಠ, ಶಿವಮೂರ್ತಿ ಹಿರೇಮಠ, ಕಾಶಿ ಪೀಠದ ಗುರುಕುಲದ ವಿದ್ಯಾರ್ಥಿಗಳು ರಾಜ್ಯೋತ್ಸವದಲ್ಲಿ ಪಾಲ್ಗೊಂಡಿದ್ದರು.





















