
ಕಲಬುರಗಿ,ಜು.04- ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಯ ನಿಟ್ಟಿನಲ್ಲಿ ರಾಜ್ಯ ಸರ್ಕಾರ ವಿಶೇಷ ಆಸಕ್ತಿ ವಹಿಸಿದ್ದು, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆ.ಕೆ.ಆರ.ಡಿ.ಬಿ) ಮೂಲಕ ಕೈಗೊಂಡಿರುವ ಕಾಮಗಾರಿಗಳ ಅನುμÁ್ಠನದಲ್ಲಿ ಇಂಜಿನಿಯರ್‍ಗಳ ಪಾತ್ರ ಅತ್ಯಂತ ನಿರ್ಣಾಯಕವಾಗಿದೆ ಎಂದು ಕೆ.ಕೆ.ಆರ್.ಡಿ.ಬಿ. ಕಾರ್ಯದರ್ಶಿಗಳಾದ ನಲಿನ್ ಅತುಲ್ ಅವರು ಹೇಳಿದರು.
ಶುಕ್ರವಾರ, ನಗರದ ನಾಗನಹಳ್ಳಿ ಕ್ರಾಸ್ ಹತ್ತಿರದಲ್ಲಿರುವ ಜೆಸ್ಟ್ ಹೋಟೆಲ್(ಉಪ್ಪಿನ ವೆಂಚರ್ಸ್ ಘಟಕ )ದಲ್ಲಿ ಆಯೋಜಿಸಿದ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಲಬುರಗಿ ಹಾಗೂ ಲೋಕೋಪಯೋಗಿ ಇಲಾಖೆ ಈಶಾನ್ಯ ವಲಯ ಕಲಬುರಗಿ ಸಂಯುಕ್ತಾಶ್ರಯದಲ್ಲಿ ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಲ್ಯಾಣ ಕರ್ನಾಟಕ ಪ್ರದೇಶದ ಎಲ್ಲಸ್ತರದ ಅಭಿಯಂತರಿಗಾಗಿ ಬೀದರ, ಯಾದಗಿರಿ, ಕಲಬುರಗಿ ಎರಡು ದಿನಗಳ ಸಮಗ್ರ ತಾಂತ್ರಿಕ ತರಬೇತಿ ಕಾರ್ಯಗಾರ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಫಾಟಿಸಿ ಮಾತನಾಡಿದರು.
ಕಲ್ಯಾಣ ಕರ್ನಾಟಕ ಭಾಗವು ಅಭಿವೃದ್ಧಿಯಲ್ಲಿ ರಾಜ್ಯದ ಇತರ ವಿಭಾಗಗಳಿಗಿಂತ ಹಿಂದೆ ಉಳಿದಿರುವ ಹಿನ್ನೆಲೆಯಲ್ಲಿ, ಈ ಭಾಗಕ್ಕೆ ವಿಶೇಷ ಒತ್ತು ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಂಜಿನಿಯರ್‍ಗಳು ಬದ್ಧತೆಯಿಂದ ಕಾರ್ಯನಿರ್ವಹಿಸುವ ಅವಶ್ಯಕತೆ ಇದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದ ಕುರಿತು ಮಾತನಾಡುತ್ತಾ, ನಮ್ಮ ಇಂಜಿನಿಯರ್ ಬಂಧುಗಳು ಕೈಗೊಳ್ಳುವ ಯಾವುದೇ ಕೆಲಸಗಳು ಅಥವಾ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ನಾವೆಲ್ಲರೂ ಬೆನ್ನೆಲುಬಾಗಿ ನಿಲ್ಲುತ್ತೇವೆ. ಈ ಮೂಲಕ ಇಂಜಿನಿಯರ್‍ಗಳ ಸಂಕಷ್ಟಗಳಿಗೆ ಸ್ಪಂದಿಸಲು ಈ ಕಾಂiÀರ್ರ್iಗಾರವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಾಗಾರದ ಮೂಲಕ ಇಂಜಿನಿಯರ್‍ಗಳ ಅಭಿಪ್ರಾಯಗಳನ್ನು ಆಲಿಸಿ, ತಾಂತ್ರಿಕ ಹಾಗೂ ಆಡಳಿತಾತ್ಮಕ ಸಮಸ್ಯೆಗಳನ್ನು ಬಗೆಹರಿಸಲು ನಾವು ಬದ್ಧರಿದ್ದೇವೆ, ಎಂದು ಅವರು ಭರವಸೆ ನೀಡಿದರು.
ಅಭಿವೃದ್ಧಿಯ ಮೈಲಿಗಲ್ಲುಗಳು:
2013-14ರ ನಂತರ ಈ ಭಾಗದ ಅಭಿವೃದ್ಧಿಗೆ ಅನುದಾನದ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದ್ದು, ಕಳೆದ ಮೂರು ವರ್ಷಗಳಲ್ಲಿ ಸುಮಾರು 5,000 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಮಂಡಳಿಯ ವತಿಯಿಂದ ವಿವಿಧ ಇಲಾಖೆಗಳಿಗೆ ಅಗತ್ಯವಿರುವ ಮೂಲಸೌಕರ್ಯ ಕಲ್ಪಿಸಲಾಗುತ್ತಿದ್ದು, ಯಾವುದೇ ಇಲಾಖೆಯ ಮೊರೆ ಹೋಗದೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುವಷ್ಟು ಹಣಕಾಸು ನೆರವು ಆರ್ಥಿಕ ಸಬಲತೆಯನ್ನು ಮಂಡಳಿ ಹೊಂದಿದೆ ಎಂದು ಹೇಳಿದರು.
ಇ-ಪೆÇ್ರಕ್ಯೂರ್‍ಮೆಂಟ್ ವ್ಯವಸ್ಥೆಯ ಮೂಲಕ ಯೋಜನೆಗಳ ಅನುಮೋದನೆ, ಟೆಂಡರ್ ಪ್ರಕ್ರಿಯೆ ಮತ್ತು ಪಾವತಿಯನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸಲಾಗಿದ್ದು, ಪಾರದರ್ಶಕತೆಗೆ ಆದ್ಯತೆ ನೀಡಲಾಗಿದೆ. ಇಂಜಿನಿಯರ್‍ಗಳಿಗೆ ಕೇವಲ ಕಾಮಗಾರಿಗಳ ಉಸ್ತುವಾರಿ ಮಾತ್ರವಲ್ಲದೆ, ಗುಣಮಟ್ಟದ ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವ ಜವಾಬ್ದಾರಿಯೂ ಇದೆ. ಇಲಾಖೆಗಳಲ್ಲಿನ ಸಿಬ್ಬಂದಿ ಕೊರತೆಯನ್ನು ನೀಗಿಸಲು ಮತ್ತು ಸಾಮಥ್ರ್ಯ ವರ್ಧನೆಗೆ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ವಿಸ್ತಾರವಾಗಿ ಮಾತನಾಡಿದರು.
ಕೃಷಿ, ಕೈಗಾರಿಕೆ, ಜವಳಿ, ಪ್ರವಾಸೋದ್ಯಮ ಮತ್ತು ಶಿಕ್ಷಣದಂತಹ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸುವುದು ಮಂಡಳಿಯ ಮುಖ್ಯ ಗುರಿಯಾಗಿದೆ. ಈಗಾಗಲೇ 24,000 ಕೋಟಿಗೂ ಹೆಚ್ಚು ಹಣವನ್ನು ಅಭಿವೃದ್ಧಿಗಾಗಿ ಕಳೆದ 5-6 ವರ್ಷಗಳಲ್ಲಿ ಬಳಸಲಾಗಿದೆ ಎಂದು ಹೇಳಿದರು.
ಈ ವರ್ಷ ಈಗಾಗಲೇ ನಾವು ಸರ್ಕಾರದಿಂದ ಕಲ್ಯಾಣ ಕರ್ನಾಟಕ ಭಾಗಕ್ಕೆ ಐದು ಬೇರೆ ಬೇರೆ ಪಾಲಿಸಿಗಳನ್ನು ಕೇಳಿದ್ದೇವೆ. ಅಗ್ರಿಕಲ್ಚರ್ ಅಂಡ್ ಅಲೈಡ್ ಸೆಕ್ಟರ್, ಇಂಡಸ್ಟ್ರಿಯಲ್ ಪಾಲಿಸಿ. ನಮಗೆ ಇಂಡಸ್ಟ್ರಿಯಲ್ ಪಾಲಿಸಿ ಒಂದು ಹೊಸದಾಗಿ ಮಾಡಿ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದೇವೆ ಅದು ಈಗ ಅನುಮೋದನೆ ಸಿಕ್ಕಿದೆ ಎಂದರು.
ಕಲಬುರಗಿ ಈಶಾನ್ಯ ವಲಯದ ಲೋಕೋಪಯೋಗಿ ಇಲಾಖೆಯ ಮುಖ್ಯ ಅಭಿಯಂತರರಾದ ಸುಭಾμï ಶಿವಶಂಕರ ಮಾತನಾಡಿ, ಕೃಷಿ, ಕೈಗಾರಿಕೆ, ಶಿಕ್ಷಣ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಹೊಸ ನೀತಿಗಳನ್ನು ರೂಪಿಸಲಾಗಿದ್ದು, ಅವುಗಳ ಸಮರ್ಪಕ ಅನುμÁ್ಠನಕ್ಕೆ ಇಂಜಿನಿಯರ್‍ಗಳ ತಾಂತ್ರಿಕ ನೈಪುಣ್ಯತೆ ಅವಶ್ಯಕವಾಗಿದೆ. ಈ ಭಾಗದ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರದ ಎಲ್ಲಾ ಇಲಾಖೆಗಳು ಸಮನ್ವಯತೆಯಿಂದ ಕೆಲಸ ಮಾಡಬೇಕಿದ್ದು, ಮುಂದಿನ ದಿನಗಳಲ್ಲಿ ಕಲ್ಯಾಣ ಕರ್ನಾಟಕವು ರಾಜ್ಯದ ಅತ್ಯಂತ ಅಭಿವೃದ್ಧಿಶೀಲ ಭಾಗವಾಗಿ ಹೊರಹೊಮ್ಮಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಇಂಜಿನಿಯರ್‍ಗಳ ಕಲ್ಯಾಣ ಮತ್ತು ಯೋಜನೆಗಳ ಸುಗಮ ಅನುμÁ್ಠನಕ್ಕಾಗಿ ಸರ್ಕಾರವು ಎಲ್ಲ ರೀತಿಯ ಸಹಕಾರ ನೀಡಲಿದೆ. ಇಂಜಿನಿಯರ್‍ಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ವಿಶೇಷ ಕಾಂiÀರ್iಗಾರವೊಂದನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಕೆ.ಕೆ.ಆರ.ಡಿ.ಬಿ ಹಣಕಾಸು ಸಹಾಯಕ ನಿಯಂತ್ರಕರಾದ ಇಂದುಶ್ರೀ ಆರ್. ಅವರು ಸ್ವಾಗತಿಸಿದರು.
ನಂತರ ಸಂಪನ್ಮೂಲ ವ್ಯಕ್ತಿಯಾದ ನಿವೃತ್ತ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಅನ್ವರ ಅವರು ಕಾರ್ಯಾಗಾರದ ಸಂಪೂರ್ಣ ಮಾಹಿತಿಯನ್ನು ಪಿ.ಪಿ.ಟಿ ಮೂಲಕ ವಿವರಿಸಿದರು.
ಕಾರ್ಯಕ್ರಮದಲ್ಲಿ ಕೆ.ಕೆ.ಆರ.ಡಿ.ಬಿ ಉಪಕಾರ್ಯದರ್ಶಿ ಸುರೇಖಾ, ಕೆ.ಕೆ.ಆರ.ಡಿ.ಬಿ ಹೆಚ್ಚುವರಿ ನಿರ್ದೇಶಕರಾದ ಪ್ರವೀಣಾ ಪ್ರೀಯಾ ಡೇವಿಡ್, ಕೆ.ಕೆ.ಆರ.ಡಿ.ಬಿ ಹಣಕಾಸು ನಿಯಂತ್ರಕರಾದ ಪವನಕುಮಾರ, ಕೆ.ಕೆ.ಆರ.ಡಿ.ಬಿ ಅಧೀಕ್ಷಕ ಇಂಜಿನಿಯರ ಆನಂದ ಕಮಲಾಪೂರಕರ್ ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ತಾಂತ್ರಿಕ ತಜ್ಞರಾದ ಯಳಸಂಗಿ ಮಠ, ನಿವೃತ್ತ ಮುಖ್ಯ ಇಂಜಿನಿಯರ ಎಂ. ನಾರಾಯಣ್, ಕಲಬುರಗಿ ಅಪ್ಪ ಇಂಜಿನಿರಿಂಗ್ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಸಿದ್ರಾಮಪ್ಪ ಅವಂತಿ ಇತರರು ಸೇರಿದಂತೆ ಬೀದರ, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಯ ಎಲ್ಲಸ್ತರದ ಅಧಿಕಾರಿಗಳು ಹಾಗೂ ಮುಖ್ಯ ಇಂಜಿನಿಯರಗಳು ಉಪಸ್ಥಿತರಿದ್ದರು.


































