Home ಕ್ರೈಂ ಸುದ್ದಿಗಳು ವಿದ್ಯುತ್ ಶಾರ್ಟ್ ಸಕ್ರ್ಯೂಟ್4 ಎಕರೆ ಕಬ್ಬು ಬೆಂಕಿಗೆ ಆಹುತಿ

ವಿದ್ಯುತ್ ಶಾರ್ಟ್ ಸಕ್ರ್ಯೂಟ್4 ಎಕರೆ ಕಬ್ಬು ಬೆಂಕಿಗೆ ಆಹುತಿ

ಮುದ್ದೇಬಿಹಾಳ: ವಿದ್ಯುತ್ ಶಾಟ್ ಸಕ್ರ್ಯೂಟ್ ನಿಂದಾಗಿ 4 ಎಕರೆ ಕಬ್ಬು ಬೆಂಕಿಗೆ ಆಹುತಿಯಾಗಿದ್ದು ಸುಮಾರು 8 ಲಕ್ಷ ರೂ ಮೌಲ್ಯದ ಕಬ್ಬಿನ ಬೆಳೆ ಹಾನಿಯಾಗಿರುವ ಘಟನೆ ತಾಲೂಕಿನ ಸರೂರ ಗ್ರಾಮದಲ್ಲಿ ಮಂಗಳವಾರ ಮದ್ಯಾಹ್ನ ನಡೆದಿದೆ.
ಸರೂರ ಗ್ರಾಮದ ಸರ್ವೆ ನಂ 22/2ಅ ಮತ್ತು 22/ಬ ಮಾಲಿಕರಾದ ಶಿವಪ್ಪ ಎಚ್.ಲೊಟಗೇರಿ ಅವರಿಗೆ ಸೇರಿದ 2.2 ಎಕರೆ, ಹಾಗೂ ಚಂದ್ರಕಲಾ ಎಸ್ ಲೊಟಗೇರಿ ಅವರಿಗೆ ಸೇರಿದ 2 ಎಕರೆ ಜಮೀನಿನಲ್ಲಿ ಬೆಳೆದಿದ್ದ ಕಬ್ಬು ವಿದ್ಯುತ್ ಶಾಟ್ ಸಕ್ರ್ಯೂಟ್ ನಿಂದ ಕಿಡಿ ಕಬ್ಬಿಗೆ ತಗುಲಿ ಬೆಳೆ ಬೆಂಕಿಗೆ ಆಹುತಿಯಾಗಿದೆ.
ಕಬ್ಬಿನ ಬೆಳೆಗೆ ಬೆಂಕಿ ತಗುಲಿದ ಸುದ್ದಿ ತಿಳಿಯುತ್ತಿದ್ದಂತೆ ರೈತರು ಮುದ್ದೇಬಿಹಾಳ ಅಗ್ನಿಶಾಮಕ ಇಲಾಖೆಯ ಠಾಣೆಗೆ ಮಾಹಿತಿ ಮುಟ್ಟಿಸಿದ್ದಾರೆ ಅಗ್ನಿಶಾಮಕ ಅಧಿಕಾರಿ ಸುದ್ದಿತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದರು ಅಂದಾಜು 8 ಲಕ್ಷ ರೂ ಗಿಂತ ಹೆಚ್ಚು ನಷ್ಟ ಉಂಟಾಗಿದೆ ಎಂದು ಮಾಲಿಕರು ಹಾಗೂ ರೈತರು ಪತ್ರಿಕೆಗೆ ತಿಳಿಸಿದ್ದಾರೆ.
ಅಗ್ನಿಶಾಮಕ ಠಾಣೆಯ ಅಧಿಕಾರಿಗಳಾದ ಸಹಾಯಕ ಅಗ್ನಿಶಾಮಕ ಠಾಣಾ ಅಧಿಕಾರಿ ಬಸವರಾಜ ಬಿರಾದಾರ, ಜಾವೀದ್ ಜಮಖಂಡಿ, ಸಿದ್ದಣ್ಣ ಪೊಲಿಶಿ, ಶರಣಬಸವರಾಜ ಬಾಗೇವಾಡಿ, ಸುಭಾಸ ಗೌಡರ, ಶಿವಾನಂದ ಭೋವಿ ಹಾಗೂ ರೈತರು ಬೆಂಕಿ ನಂದಿಸಲು ಶ್ರಮದಾನ ಮಾಡಿದರು.