
ಕುಣಿಗಲ್, ಜೂ. ೬- ಇಲ್ಲಿನ ಪುರಸಭೆಯಲ್ಲಿ ರಾತ್ರೋ ರಾತ್ರಿ ಅಕ್ರಮವಾಗಿ ಕಂದಾಯ ಹಾಗೂ ಪುರಸಭಾ ಜಾಗದಲ್ಲಿ ನಿರ್ಮಿಸಿರುವ ನಿವೇಶಗಳು ಹಾಗೂ ಮನೆಗಳಿಗೆ ಇ-ಖಾತೆ ಮಾಡಿದ ನಿವೃತ್ತ ಮುಖ್ಯಾಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪುರಸಭೆ ಮಾಜಿ ಅಧ್ಯಕ್ಷ ಕೆ.ಎಲ್. ಹರೀಶ್ ಆಗ್ರಹಿಸಿದರು.
ಪಟ್ಟಣದ ಪುರಸಭಾ ಕಚೇರಿ ಮುಂದೆ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪುರಸಭೆಯಲ್ಲಿ ಆಡಳಿತಾಧಿಕಾರಿಯಾಗಿ, ಮೇಲಾಧಿಕಾರಿಗಳಾಗಲಿ, ಶಾಸಕರಾಗಲಿ ಯಾವುದೇ ಹಿಡಿತ ಇಲ್ಲದೆ ಇಲ್ಲಿನ ಪುರಸಭಾ ಪ್ರಭಾರ ಮುಖ್ಯಾಧಿಕಾರಿ ಕೃಷ್ಣ ಎಂಬುವರು ಕಂದಾಯ ಹಾಗೂ ಗ್ರಾಮ ಠಾಣಾ ನಿವೇಶನಗಳನ್ನು ನಿವೃತ್ತಿಯ ದಿನ ರಾತ್ರಿ ೧೨ ಗಂಟೆಯವರೆಗೂ ಈ ಖಾತೆ ಮಾಡಿ ಅಕ್ರಮ ನಡೆಸಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಮಾಜಿ ಪುರಸಭಾಧ್ಯಕ್ಷೆ ಮಂಜುಳಾ ಅವರ ಪತಿ ಎರಡನೇ ವಾರ್ಡಿನಲ್ಲಿ ಅಕ್ರಮವಾಗಿ ಕಂದಾಯ ಗ್ರಾಮಗಳಲ್ಲಿದ್ದ ನಿವೇಶನಗಳನ್ನು ಪುರಸಭೆಗೆ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ.
ಜತೆಗೆ ೧೧ ನೇ ವಾರ್ಡಿನ ಯಾವುದೋ ಖಾತೆಯನ್ನು ಯಾರದೋ ಹೆಸರಿಗೆ ವರ್ಗಾಯಿಸಿ ಪ್ರಕರಣ ದಾಖಲಾದರೂ ಸಹ ಕೆಲವು ಅಧಿಕಾರಿಗಳು ಪುರಸಭೆಯಲ್ಲಿ ಕರ್ತವ್ಯ ನಿರ್ವಹಿಸುತ್ತ ದ್ರೋಹವೆಸಿಗುತ್ತಿದ್ದಾರೆ. ಈ ಬಗ್ಗೆ ಪುರಸಭೆಯ ಆಡಳಿತಾಧಿಕಾರಿ ಹಾಗೂ ಜಿಲ್ಲಾ ಯೋಜನಾ ನಿರ್ದೇಶಕರಿಗೆ ಮನವಿ ಮಾಡಿ ದೂರು ಸಲ್ಲಿಸಿದರು ಯಾವುದೇ ಕ್ರಮ ಕೈಗೊಂಡಿರುವುಲ್ಲ ಎಂದು ಆರೋಪಿಸಿ ಇಲ್ಲಿನ ಇಂಜಿನಿಯರ್ ಪ್ರಭಾರರಾಗಿ ಕೆಲಸ ಮಾಡುತ್ತಿದ್ದಾರೆ ಅವರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ರೀತಿ ವಾರಕ್ಕೆ ಒಂದೆರಡು ಬಾರಿ ಕೆಲಸಕ್ಕೆ ಹಾಜರಾಗಿ ತನಗೆ ಇಷ್ಟ ಬಂದ ಕಾಮಗಾರಿಯನ್ನು ಮಾಡಿಸುತ್ತಾ ಗುಣಮಟ್ಟ ಕೆಲಸವನ್ನು ಮಾಡಿಸದೆ ಸರ್ಕಾರದ ಖಜಾನೆಗೆ ನಷ್ಟ ಉಂಟು ಮಾಡುತ್ತಿದ್ದಾರೆ ಎಂದು ದೂರಿದರು.
ಖಾಯುಂ ಇಂಜಿನಿಯರ್ನ್ನು ವರ್ಗಾಯಿಸಬೇಕು. ಮುಂದಿನ ದಿನಗಳಲ್ಲಿ ಈ ಎಲ್ಲಾ ಅಕ್ರಮಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು. ಪ್ರಭಾರ ಮುಖ್ಯಾಧಿಕಾರಿಗಳ ಆಡಳಿತ ಅವಧಿಯಲ್ಲಿ ಕೋಟ್ಯಂತರ ರೂಪಾಯಿ ಹಣ ಅವ್ಯವಾರದಿಂದ ಕೂಡಿದೆ ಎಂದು ಆರೋಪಿಸಿದರು. ಕೂಡಲೇ ತನಿಖೆ ಮಾಡಿ ಇಲ್ಲದಿದ್ದರೆ ಉಗ್ರ ಹೋರಾಟ ಕೈಗೊಳ್ಳುವದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಮಾಜಿ ಪುರಸಭಾ ಸದಸ್ಯ ವಾಸು, ಜೆಡಿಎಸ್ ವಕ್ತಾರ ತರೀಕೆರೆ ಪ್ರಕಾಶ್, ಮಾರುತಿ ನಾಗಣ್ಣ, ನಿಖಿಲ್ ಮತ್ತಿತರರು ಭಾಗವಹಿಸಿದ್ದರು.


































