
ಲಕ್ಷೆ÷್ಮÃಶ್ವರ,ಅ೧೨: ಪಟ್ಟಣದಲ್ಲಿ ದಸರಾ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ದುರ್ಗಾ ದೌಡ ಎರಡನೆಯ ದಿನವಾದ ಸೋಮವಾರ ಮುಂಜಾನೆ ಹಳ್ಳದಕೇರಿ ಓಣಿಯ ಸಣ್ಣಧ್ಯಾಮವನ ದೇವಸ್ಥಾನದಿಂದ ಆರಂಭಗೊAಡು ಮಾರ್ಗದಕ್ಕೂ ಎಲ್ಲಾ ದೇವಸ್ಥಾನಗಳಿಗೂ ತೆರಳಿ ಪೂಜೆ ಸಲ್ಲಿಸಲಾಯಿತು.
ದುರ್ಗಾ ದೌಡು ಹೊರಡುವ ಮಾರ್ಗದಕ್ಕೂ ರಸ್ತೆಗಳಿಗೆ ನೀರನ್ನು ಸಿಂಪಡಿಸಿ ಮಹಿಳೆಯರು ರಂಗೋಲಿ ಹಾಕಿ ಬರಮಾಡಿಕೊಳ್ಳುತ್ತಿರುವ ದೃಶ್ಯ ಕಂಡು ಬಂದಿತು.
ಗುರುನಾಥ ದಾನಪ್ಪನವರ ನೇತೃತ್ವದಲ್ಲಿ ನಡೆಯುತ್ತಿರುವ ಎರಡನೆಯ ದಿನದ ದುರ್ಗಾದೌಡು ಕಾರ್ಯಕ್ರಮದಲ್ಲಿ ಬಸವರಾಜ ಅರಳಿ ರಾಘವೇಂದ್ರ ಪೂಜಾರ್ ಶಿವಯೋಗಿ ಅಂಕಲಕೋಟಿ ಶಂಕ್ರಣ್ಣ ಬಾಳಿಕಾಯಿ ಬಸವೇಶ್ ಮಹಾಂತಶೆಟ್ಟರ ಗುರುರಾಜ್ ಪಾಟೀಲ್ ಕುಲಕರ್ಣಿ ಗಂಗಾಧರ್ ಪುರಾಣಿಕ ಮಠ ದೇವಪ್ಪ ಗಡೆದ ರವಿ ಲಿಂಗ ಶೆಟ್ಟಿ ತಿಪ್ಪಣ್ಣ ಸಂಶಿ ಮಹೇಶ್ ಹೊಗೆಸೊಪ್ಪಿನ ಮಲ್ಲನ ಗೌಡ್ರು ಪಾಟೀಲ ಸೇರಿದಂತೆ ಅನೇಕರಿದ್ದರು.























