
ಕಲಬುರಗಿ: ಡಾ.ವಿಕ್ರಮ ಸಾರಾಭಾಯಿ ಅವರು ಭೌತಶಾಸ್ತ್ರಜ್ಞ, ಖಗೋಳಶಾಸ್ತ್ರಜ್ಞ, ಕೈಗಾರಿಕೋದ್ಯಮಿ. ಇಸ್ರೋ ಸಂಸ್ಥೆಯ ಸ್ಥಾಪಕರು. ಪರಮಾಣು ಶಕ್ತಿಯ ಬಗ್ಗೆ ಸಂಶೋಧನೆ ಮಾಡಿದವರು. ಉಪಗ್ರಹಗಳ ತಯಾರಿಕೆ ಮತ್ತು ಉಡಾವಣೆ ಸೇರಿದಂತೆ ಅನೇಕ ಕಾರ್ಯಗಳನ್ನು ಮಾಡುವ ಮೂಲಕ ರಾಷ್ಟ್ರ ನಿರ್ಮಾಣ ಕಾರ್ಯಕ್ಕೆ ತಮ್ಮದೇ ಆದ ಅನನ್ಯವಾದ ಕೊಡುಗೆಯನ್ನು ನೀಡಿದ್ದಾರೆ ಉಪನ್ಯಾಸಕ ಎಚ್.ಬಿ.ಪಾಟೀಲ ಅಭಿಮತ ವ್ಯಕ್ತಪಡಿಸಿದರು.
ನಗರದ ಮಹಾದೇವ ನಗರದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ಡಾ.ವಿಕ್ರಮ ಸಾರಾಬಾಯಿ ಅವರ 107ನೇ ಜನ್ಮದಿನಾಚರಣೆಯಲ್ಲಿ ಅವರು ಮಾತನಾಡುತ್ತಿದ್ದರು.
ವಿಜ್ಞಾನ ಕ್ಷೇತ್ರ ಇಂದು ಈ ಮಟ್ಟಕ್ಕೆ ಬೆಳೆದಿದೆ ಎಂದರೆ, ಅದಕ್ಕೆ ಅನೇಕ ವಿಜ್ಞಾನಗಳ ಶ್ರಮ ಸಾಕಷ್ಟಿದೆ. ವಿದ್ಯಾರ್ಥಿಗಳು ಕುತೋಹಲಕಾರಿಗಳಾಗಿರಬೇಕು. ಹೊಸ ವಿಷಯಗಳನ್ನು ತಿಳಿದುಕೊಂಡು, ನಾವಿನ್ಯತೆ ಸೃಜನಶೀಲತೆ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಕೌಶಲಗಳನ್ನು ಅಳವಡಿಸಿಕೊಂಡು ಸ್ವಾವಲಂಬನೆಯುತವಾದ ಜೀವನ ಸಾಗಿಸಬೇಕು ಎಂದರು.
ಕರಾವಿ¥ ಗ್ರಾಮೀಣ ಘಟಕಸ ಮಾಜಿ ಸಂಚಾಲಕ ಶಿವಯೋಗ¥ ಎಸ್.ಬಿರಾದಾರ, ಸಮಾಜ ಸೇವಕ ರಾಜು ಹೆಬ್ಬಾಳ್ ಸೇರಿದಂತೆ ಮತ್ತಿತರರಿದ್ದರು.






























