Home ಕ್ರೈಂ ಸುದ್ದಿಗಳು ಗೃಹಬಳಕೆ ಸಿಲಿಂಡರ್‍ಗಳ ವಶ

ಗೃಹಬಳಕೆ ಸಿಲಿಂಡರ್‍ಗಳ ವಶ

ಭಾಲ್ಕಿ, ಮೇ 19:ಭಾಲ್ಕಿ ಪಟ್ಟಣ ಪ್ರದೇಶದ ವಿವಿಧ ಹೋಟೆಲ್‍ಗಳು ಹಾಗೂ ಟೀ ಪಾಯಿಂಟ್‍ಗಳಲ್ಲಿ ವಾಣಿಜ್ಯ ಬಳಕೆಯ ಬದಲಾಗಿ, ನಿಯಮಬಾಹಿರವಾಗಿ ಗೃಹಬಳಕೆಯ ಎಲ್‍ಪಿಜಿ ಸಿಲಿಂಡರ್‍ಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ ಎಂಬ ಸಾರ್ವಜನಿಕ ದೂರುಗಳ ಹಿನ್ನೆಲೆಯಲ್ಲಿ, ಇಂದುತಹಸೀಲ್ದಾರ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಜಂಟಿತಂಡ ಭರ್ಜರಿ ದಾಳಿ ನಡೆಸಿ ಅಕ್ರಮವಾಗಿ ಬಳಸುತ್ತಿದ್ದಎಲ್‍ಪಿಜಿ ಸಿಲಿಂಡರಗಳನ್ನು ವಶಪಡಿಸಿಕೊಂಡರು,

ಈ ಕಾರ್ಯಚರಣೆಯಲ್ಲಿತಾಲೂಕು ಪಂಚಾಯತ್‍ಕಾರ್ಯನಿರ್ವಾಹಕ ಅಧಿಕಾರಿಗಳು, ಆಹಾರಇಲಾಖೆಯಆಹಾರ ಶಿರಸ್ತೆದಾರರು ಹಾಗೂ ಆಹಾರ ನಿರೀಕ್ಷಕರು, ಭಾಲ್ಕಿ ನಗರಸಭೆಯ ಮುಖ್ಯ ಅಧಿಕಾರಿಗಳು ಮತ್ತು ಭಾಲ್ಕಿ ವೃತ್ತ ಪೆÇಲೀಸ್ ನಿರೀಕ್ಷಕರು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.