Home ಜಿಲ್ಲೆ ಕಲಬುರಗಿ ಆ. 21 ರಿಂದ ‘ಸಮಾದಾನ ಸಮಾರೋಹ’ ವಿಶೇಷ ಲೋಕ ಅದಾಲತ್

ಆ. 21 ರಿಂದ ‘ಸಮಾದಾನ ಸಮಾರೋಹ’ ವಿಶೇಷ ಲೋಕ ಅದಾಲತ್

ಕಲಬುರಗಿ: ಮೇ.19: ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯವು ‘ಸಮಾದಾನ ಸಮಾರೋಹ; ವಿಶೇಷ ಲೋಕ ಅದಾಲತ್ ಕಾರ್ಯಕ್ರಮವು ಆಗಷ್ಟ ತಿಂಗಳ 21, 22, ಮತ್ತು 23ರಂದು ಮೂರು ದಿನಗಳ ಕಾಲ ನಡೆಯಲಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ನ್ಯಾಯಾಧೀಶರಾದ ಶ್ರೀನಿವಾಸ ನವಲೆ ತಿಳಿಸಿದರು.

    ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಕರೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಲಬುರಗಿ ಜಿಲ್ಲೆಯಲ್ಲಿ ಇತ್ಯರ್ಥಗೊಂಡ ಪ್ರಕರಣಗಳ ಕುರಿತು ಈಗ ಅವುಗಳ ಬಗ್ಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥಪಡಿಸಿಕೊಳ್ಳಲು ವಿಶೇಷ ಲೋಕ ಅದಾಲತ್ ಆಯೋಜಿಸಲಾಗಿದೆ. ಪಕ್ಷಗಾರರು ನವದೆಹಲಿಗೆ ಹೋಗದೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಛೇರಿಯಲ್ಲಿ ಮತ್ತು ತಾಲ್ಲೂಕು ಕಾನೂನು ಸೇವಾ ಸಮಿತಿಯಲ್ಲಿ ಹಾಜರಾಗಿ ರಾಜಿ ಸಂಧಾನಕ್ಕೆ ಮಧ್ಯಸ್ಥಗಾರರ ಮೂಲಕ ಪ್ರಕರಣವನ್ನು ಇತ್ಯರ್ಥಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. 

  ರಾಜಿ ಸಂಧಾನದಲ್ಲಿ ಭಾಗವಹಿಸಲು ವಿ.ಸಿ. ಸೌಲಭ್ಯ ಸಹ ಇರುತ್ತದೆ. ಕಾರಣ ಕಲಬುರಗಿ ಜಿಲ್ಲೆಯಲ್ಲಿ ಇತ್ಯರ್ಥಗೊಂಡಿರುವ ಪ್ರಕರಣಗಳ ಕುರಿತು  ಸರ್ವೋಚ್ಚ ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಕಕ್ಷಿದಾರರು ಸಹಕರಿಸಬೇಕೆಂದು ಮತ್ತು ತಮ್ಮ ಪ್ರಕರಣಗಳನ್ನು ರಾಜಿ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಭಾಗ ವಹಿಸಬೇಕೆಂದು ಕಕ್ಷಿದಾರರಿಗೆ ಸಲಹೆ ನೀಡಿದರು. 

  ಮಾನ್ಯ ಸರ್ವೋಚ್ಚ ನ್ಯಾಯಾಲಯವು ಕರ್ನಾಟಕಕ್ಕೆ ಸಂಬಂಧಪಟ್ಟ ಒಟ್ಟು 4,328 ಪ್ರಕರಣಗಳನ್ನು ಈ ಪೂರ್ವ ಸಮಾಧಾನ ಪ್ರಕ್ರಿಯೆಗಾಗಿ ಗುರುತಿಸಿದ್ದು, ಇವುಗಳನ್ನು ಜಿಲ್ಲಾವಾರು ವಿಂಗಡಿಸಿ ಆಯಾ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳಿಗೆ ರವಾನಿಸಲಾಗಿದೆ. ಇದರಲ್ಲಿ ಸರ್ಕಾರಿ ಸಂಸ್ಥೆಗಳು ಪಕ್ಷಗಾರರಾಗಿರುವ 937 ಕ್ಕೂ ಹೆಚ್ಚು ಪ್ರಕರಣಗಳೂ ಸೇರಿದ್ದು, ಇವುಗಳ ಶೀಘ್ರ ಇತ್ಯರ್ಥಕ್ಕಾಗಿ ಮಾನ್ಯ ಅಡ್ವೊಕೇಟ್ ಜನರಲ್ ಅವರೊಂದಿಗೆ ಸಭೆ ನಡೆಸಿ ಸರ್ಕಾರದ ಪೂರ್ಣ ಸಹಕಾರವನ್ನು ಕೋರಲಾಗಿದೆ ಎಂದು ಹೇಳಿದರು.

ಈ ವಿಶೇಷ ಅದಾಲತ್ನಲ್ಲಿ ಬ್ಯಾಂಕಿಂಗ್, ನಾಗರಿಕ ಕಾನೂನು (ಅiviಟ), ಪರಿಹಾರ ಪ್ರಕರಣಗಳು, ಗ್ರಾಹಕ ವ್ಯಾಜ್ಯಗಳು ಮತ್ತು ರೇರಾ (ಖಇಖಂ), ಕ್ರಿಮಿನಲ್, ಕೌಟುಂಬಿಕ ವಿವಾದಗಳು, ಕಾರ್ಮಿಕ ಮತ್ತು ಕೈಗಾರಿಕಾ ಕಾನೂನುಗಳು, ಭೂಸ್ವಾಧೀನ, ಆಸ್ತಿ ತೆರಿಗೆ ಹಾಗೂ ಬಾಡಿಗೆ ನಿಯಂತ್ರಣಕ್ಕೆ ಸಂಬಂಧಿಸಿದ 12 ಪ್ರಮುಖ ವಿಭಾಗಗಳ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುತ್ತದೆ.

ಪಕ್ಷಗಾರರಿಗೆ ನೋಟಿಸ್ ಜಾರಿಯಾದ ನಂತರ, ಸ್ಥಳೀಯ ಜಿಲ್ಲಾ ಅಥವಾ ತಾಲೂಕು ಕಾನೂನು ಸೇವಾ ಪ್ರಾಧಿಕಾರಗಳಲ್ಲಿ ಭೌತಿಕವಾಗಿ ಅಥವಾ ವರ್ಚುವಲ್ ವಿಧಾನದಲ್ಲಿ ಪೂರ್ವ ಸಮಾಧಾನ ಸಭೆಗಳು ನಡೆಯಲಿವೆ. ಒಂದು ವೇಳೆ ಪಕ್ಷಗಾರರು ಬೇರೆ ರಾಜ್ಯಗಳಲ್ಲಿದ್ದರೆ, ಅವರ ವಿನಂತಿಯ ಮೇರೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಲು ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು.

ವಕೀಲರು ಮತ್ತು ಸಾರ್ವಜನಿಕರು ಈ ಅದಾಲತ್ನ ಪ್ರಯೋಜನ ಪಡೆಯಲು ಸುಪ್ರೀಂ ಕೋಟ್ರ್ನ ಅಧಿಕೃತ ವೆಬ್ಸೈಟ್ www.sci.gov.in ನಲ್ಲಿ ಲಭ್ಯವಿರುವ ಗೂಗಲ್ ಫಾರ್ಮ್ ಲಿಂಕ್ ಮೂಲಕ ತಮ್ಮ ವಿನಂತಿಯನ್ನು ಸಲ್ಲಿಸಬಹುದು. ನ್ಯಾಯಾಲಯದ ಅಲೆದಾಟವಿಲ್ಲದೆ, ಉಚಿತವಾಗಿ ಹಾಗೂ ಸೌಹಾರ್ದಯುತವಾಗಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಅವರು ಮನವಿ ಮಾಡಿದರು.