
ಲಕ್ಷೆ÷್ಮÃಶ್ವರ,ಅ೧೪: ತಾಲೂಕಿನಾದ್ಯಂತ ಕಳೆದ ಮೂರು ತಿಂಗಳನಿAದ ಮಳೆಯಾಗದ್ದರಿಂದ ಹಾಗೂ ಅಕ್ಟೋಬರ್ ೩ನೇ ವಾರ ಬಂದರು ಮೋಡಗಳ ಸುಳಿವೇ ಇಲ್ಲದ್ದರಿಂದ ರೈತರು ಹಿಂಗಾರಿ ಬಿತ್ತನೆಯ ಆಸೆಯನ್ನೇ ಬಿಟ್ಟಿದ್ದು ಇದರಿಂದಾಗಿ ಜಾನುವಾರುಗಳಿಗೆ ಮೇವಿನ ಬರ ರೈತರಿಗೆ ಬರೆ ಎಳೆಯಲಿದ್ದು ರೈತರಿಗೆ ಈಗ ಜಾನುವಾರಗಳ ಚಿಂತೆಯು ಕಾಡತೊಡಗಿದೆ. ಕಳೆದ ಆಗಸ್ಟ್ ನಲ್ಲಿ ೫೦ ಮಿ.ಮೀ ಸಪ್ಟೆಂಬರ್ ನಲ್ಲಿ ೧೮.೭ ಮಿಲಿ ಮೀಟರ್ ಈ ಅಕ್ಟೋಬರ್ ನಲ್ಲಿ ಕೇವಲ ೬ ಮಿಲಿಮೀಟರ್ ಮಳೆಯಾಗಿದೆ.
ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಮೂಲಗಳಿಂದ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಆಡು ಕುರಿ ಮತ್ತು ದೊಡ್ಡ ಜಾನುವಾರುಗಳನ್ನು ಹಿಡಿದು ಸುಮಾರು ೪೦,೦೦೦ಕ್ಕೂ ಹೆಚ್ಚು ಜಾನುವಾರಗಳಿದ್ದು ಅದರಲ್ಲಿ ಸುಮಾರು ೧೧,೦೦೦ ಆಕಳು ಎತ್ತು ಎಮ್ಮೆ ಸೇರಿದ್ದು ಇವುಗಳ ಪಾಲನೆ ರೈತರಿಗೆ ಸವಾಲಾಗಿದೆ.
ಮೂಲಗಳಿಂದ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಸುಮಾರು ಮೂರು ತಿಂಗಳ ಹಿಂದೆಯೇ ತಾಲೂಕಿನಲ್ಲಿ ೧ ಲಕ್ಷ ೧೫೦೦೦ಟನ್ನ್ ಮೇವು ಸಂಗ್ರಹ ಇತ್ತು ಎನ್ನಲಾಗಿದೆ ಆದರೆ ಪ್ರತಿನಿತ್ಯವೂ ಬಳಕೆಯಾಗುವುದರಿಂದ ಈ ಪ್ರಮಾಣ ಈಗ ಶೇಕಡಾ ೭೦ಕ್ಕಿಂತಲೂ ಹೆಚ್ಚು ಬಳಕೆಯಾಗಿರುವುದರಿಂದ ಉಳಿದ ಮೇವು ಸಂಗ್ರಹ ಜಾನುವಾರುಗಳಿಗೆ ಸಾಲದು ಎಂಬ ಭಯ ಕಾಡತೊಡಗಿದೆ. ಆದರೆ ಸರ್ಕಾರ ಇದುವರೆಗೂ ಮೇವು ಬ್ಯಾಂಕುಗಳ ನಾಗಲಿ ಗೋಶಾಲೆಗಳಾಗಲಿ ಆರಂಭಿಸಲು ಮುಂದಾಗದಿರುವುದು ಇನ್ನೂ ಹೆಚ್ಚಿನ ಭೀಕರತೆಗೆ ಕಾರಣವಾಗಲಿದೆ.
ಈ ಕುರಿತು ಜೆಡಿಎಸ್ ನ ಮುಖಂಡ ಶಂಕರ್ ಬಾಳಿಕಾಯಿ ಪ್ರತಿಕ್ರಿಯೆ ನೀಡಿ, ಸರ್ಕಾರ ಭೀಕರ ಬರಗಾಲದ ಮಧ್ಯ ರೈತರು ಮೇವಿನ ಸಂಕಷ್ಟವನ್ನು ಎದುರಿಸಬೇಕಾಗಿದ್ದು ಈ ಕೂಡಲೇ ಪ್ರತಿ ಗ್ರಾಮ ಪಂಚಾಯಿತಿಗೆ ಒಂದು ಮೇವು ಬ್ಯಾಂಕು ಮತ್ತು ಗೋಶಾಲೆಯನ್ನು ಆರಂಭಿಸಬೇಕು ಎಂದು ಒತ್ತಾಯಿಸಿದ್ದಾರೆ.























