Home ಜಿಲ್ಲೆ ತುಮಕೂರು ನೃತ್ಯ ಪ್ರಿಯರ ಮನ ಸೆಳೆದ ದಶಾವತಾರ

ನೃತ್ಯ ಪ್ರಿಯರ ಮನ ಸೆಳೆದ ದಶಾವತಾರ

ತುಮಕೂರು, ಅ. ೧೭- ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳಿಂದಾಗಿ ತುಮಕೂರು ದಸರಾ ಇಡೀ ಜಿಲ್ಲೆಯ ಜನರನ್ನು ಆಕರ್ಷಿಸುತ್ತಿದೆ.


ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ತುಮಕೂರಿನ ನೀಲಾಲಯ ನೃತ್ಯ ಕೇಂದ್ರದವರು ಪ್ರಸ್ತುತಪಡಿಸಿದ ?ದಶಾವತಾರ? ಶಾಸ್ತ್ರೀಯ ನೃತ್ಯರೂಪಕ ಕಲಾ ರಸಿಕರ ಮನಕ್ಕೆ ಮುದ ನೀಡಿತು. ಕಲಾವಿದರ ಭಾವಾಭಿವ್ಯಕ್ತಿಯಲ್ಲಿ ಮೂಡಿ ಬಂದ ದಶಾವತಾರಗಳು ಪ್ರೇಕ್ಷಕರಿಗೆ ದರ್ಶನ ನೀಡಿದವು. ಶಾಸ್ತ್ರೀಯ ನೃತ್ಯ ಆಸಕ್ತರು ಈ ದಶಾವತಾರದ ಕತೆವನ್ನು ಉಸಿರು ಬಿಗಿ ಹಿಡಿದು ನೋಡಿದರು. ಕಲಾವಿದರ ಅಭಿನಯ, ಪ್ರಸ್ತುತಿ, ವಸ್ತ್ರವಿನ್ಯಾಸ ಎಲ್ಲವೂ ಒಂದಕ್ಕೊಂದು ಹಿತವಾಗಿ ಬೆಸೆದುಕೊಂಡಿದ್ದರಿಂದ ನೃತ್ಯ ರೂಪಕ ಜನರ ಮನಸೂರೆಗೊಂಡಿತು.


ನಾಡದೇವತೆ ತಾಯಿ ಚಾಮುಂಡೇಶ್ವರಿಗೆ ಅಲಂಕಾರ ಮಾಡಲಾಗಿತ್ತು. ಬೆಳಿಗ್ಗೆ ೫ ಗಂಟೆಯಿಂದ ೧೦ ಗಂಟೆವರೆಗೆ ವಿವಿಧ ಧಾರ್ಮಿಕ ಆಚರಣೆಗಳು ನಡೆದವು. ಕಾಲೇಜು ವಿದ್ಯಾರ್ಥಿಗಳು, ಹಿರಿಯರು ದೇವಿ ದರ್ಶನ ಪಡೆದರು.


ಸಂಜೆ ೪ ಗಂಟೆಗೆ ಆರಂಭಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತುಮಕೂರಿನ ಜಿಎಂಎಚ್‌ಪಿಎಸ್ ಶಾಲೆ ವಿದ್ಯಾರ್ಥಿಗಳು ನಮ್ಮ ಕರ್ನಾಟಕ ನೃತ್ಯ ಪ್ರದರ್ಶಿಸಿದರು.
ತುಮಕೂರು ತಾಲ್ಲೂಕು ಬಿಆರ್‌ಸಿ ತಂಡದವರು ಪ್ರಸ್ತುತಪಡಿಸಿದ ಜಾನಪದ ನೃತ್ಯ ಗಮನ ಸೆಳೆಯಿತು. ನಗರದ ಸದ್ವಿದ್ಯ ಶಾಲೆ ಮಕ್ಕಳ ?ಜಾನಪದ ನೃತ್ಯ ವೈಭವ? ದಸರಾ ರಂಗು ಹೆಚ್ಚಿಸಿತು. ಅನಿಕೇತನ ಪ್ರೌಢಶಾಲೆ ಮಕ್ಕಳ ಪೂಜಾ ಕುಣಿತ ಪ್ರೇಕ್ಷಕರಿಗೆ ರೋಮಾಂಚನ ಮೂಡಿಸಿತು.


ಚಿತ್ರಕಲೆ, ಫ್ಯಾಷನ್ ಶೋ ವಿಜೇತರ ವಿವರ: ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದವರು.


೫ ರಿಂದ ೭ ವರ್ಷ: ಚಿತ್ರಕಲೆ- ಟಿ.ಎಸ್.ಶ್ರೀಯಾ, ಎಚ್.ಕೆ.ಅಖಿಲ್, ಅನ್ವಿತ್ ಎನ್.ಮಿರ್ಜಿ. ಕಸದಿಂದ ಕಲೆ- ಲಿಖಿತ್ ಆರಾಧ್ಯ, ಎಸ್.ಆರ್.ಯುವರಾಜ್, ಸಾನ್ವಿ.ಬುಕ್ ಬ್ಯಾಲೆನ್ಸ್- ಎಚ್.ಕೆ.ವಿಕಾಸ್, ಶ್ರೀಯಾ, ಎಚ್.ಎನ್.ವಿಧಾತ್.


೮ ರಿಂದ ೧೦ ವರ್ಷದವರು: ಚಿತ್ರಕಲೆ- ಕೆ.ಎಸ್.ಸನ್ನಿದಿ, ಡಿ.ಲಿಖಿತ, ಎಸ್.ಶ್ರೀಯಾ. ಕಸದಿಂದ ಕಲೆ- ಕೃತಿಕಾ, ಬಿ.ಪುಷ್ಪತಾ, ಟಿ.ಎಸ್.ಶ್ರೇಷ್ಠಶ್ರೀ. ಗೋಣಿ ಚೀಲದ ಓಟ- ಎನ್.ಹೇಮಂತ್, ಕುಶಾಲ್, ಕೆ.ಆರ್.ದಿವ್ಯಾ. ಬಲೂನ್ ಬ್ಯಾಲೆನ್ಸ್- ಎಲ್.ಕೌಶಿಕ್, ತೇಜಸ್ ರೆಡ್ಡಿ, ಎಸ್.ಕೃತಿಕಾ.


ತಾಯಿ, ಮಕ್ಕಳ ಫ್ಯಾಷನ್ ಶೋ ಸ್ಪರ್ಧೆಯಲ್ಲಿ ದಿವ್ಯಾಶ್ರೀ- ರಿಷಿತಾ ಮೊದಲ ಸ್ಥಾನ ಪಡೆದರೆ, ನಯನಾ- ಅಶ್ವಿನ್ ದ್ವಿತೀಯ, ಕವಿತಾ- ಡಿಂಪನಾ ತೃತೀಯ ಸ್ಥಾನ ತಮ್ಮದಾಗಿಸಿಕೊಂಡರು.


ತಾಯಿ- ಮಕ್ಕಳ ಫ್ಯಾಷನ್ ಶೋ ಮೆರುಗು
ತುಮಕೂರು ದಸರಾ ಅಂಗವಾಗಿ ನಗರದಲ್ಲಿ ಮಕ್ಕಳಿಗಾಗಿ ಹಲವು ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.


ಜಿಲ್ಲಾ ಕ್ರೀಡಾಂಗಣದಲ್ಲಿ ಚಿತ್ರಕಲೆ, ಕಸದಿಂದ ಕಲಾಕೃತಿ ರಚನೆ, ಗೋಣಿ ಚೀಲ ಧರಿಸಿ ಓಡುವುದು ಒಳಗೊಂಡಂತೆ ವಿವಿಧ ಸ್ಪರ್ಧೆ ಏರ್ಪಡಿಸಲಾಗಿತ್ತು. ೫ ರಿಂದ ೭ ವರ್ಷ, ೮ ರಿಂದ ೧೦ ವರ್ಷ ಎಂದು ಎರಡು ವಿಭಾಗದಲ್ಲಿ ಮಕ್ಕಳು ಪಾಲ್ಗೊಂಡಿದ್ದರು.


ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ಫ್ಯಾಷನ್ ಶೋ ಸ್ಪರ್ಧೆಯಲ್ಲಿ ತಾಯಿ, ಮಕ್ಕಳು ಮಿಂಚಿದರು. ೬೫ಕ್ಕೂ ಹೆಚ್ಚು ಜನ ನೋಂದಣಿ ಮಾಡಿಕೊಂಡಿದ್ದರು. ಸಾಂಪ್ರದಾಯಿಕ ಉಡುಗೆ ತೊಟ್ಟು ಪಾಲ್ಗೊಂಡಿದ್ದರು. ಸೀತೆ, ಲವ- ಕುಶ, ಸಂಗೊಳ್ಳಿ ರಾಯಣ್ಣ, ರಾಧೆ, ಶ್ರೀಕೃಷ್ಣ, ರೈತ, ಯೋಧ, ಪೊಲೀಸರ ವೇಷಭೂಷಣದಲ್ಲಿ ಗಮನ ಸೆಳೆದರು.