
ಕಲಬುರಗಿ,ನ.6-ಕಲಬುರಗಿ ನಗರ ಪೆÇಲೀಸರ ವಿಶೇಷ ಕಾರ್ಯಾಚರಣೆ ನಡೆಸಿ CEIR Portal ಮೂಲಕ 60 ಲಕ್ಷ ರೂ. ಮೌಲ್ಯದ 300 ಮೊಬೈಲ್ಗಳ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ.ತಿಳಿಸಿದರು.
ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರ ಪೆÇಲೀಸ್ ಆಯುಕ್ತಾಲಯ ವ್ಯಾಪ್ತಿಯ ಎಲ್ಲಾ ಪೆÇಲೀಸ್ ಠಾಣೆಗಳ ವ್ಯಾಪ್ತಿಯಲ್ಲಿನ ಸಾರ್ವಜನಿಕರು ತಮ್ಮ ಮೊಬೈಲ್ ಫೆÇೀನ್ಗಳು ಕಳೆದುಕೊಂಡ ಬಗ್ಗೆ ಇ-ಐosಣ ಮತ್ತು CEIR Portal ನಲ್ಲಿ ತಮ್ಮ ದೂರುಗಳನ್ನು ದಾಖಲಿಸಿದ್ದರು. ಸದರಿ ಮೊಬೈಲ್ಗಳ ಪತ್ತೆ ಕುರಿತು ನಗರ ಪೆÇಲೀಸ ಆಯುಕ್ತರಾದ ಡಾ.ಶರಣಪ್ಪ ಎಸ್ ಡಿ., ಅವರ ಮಾರ್ಗದರ್ಶನದಲ್ಲಿ ಉಪ ಪೊಲೀಸ್ ಆಯುಕ್ತರಾದ ಶಾಲೂ, ಪ್ರವೀಣ ಹೆಚ್. ನಾಯಕ್ ಹಾಗೂ ಕಲಬುರಗಿ ನಗರದ ಎಲ್ಲಾ ಸಹಾಯಕ ಪೆÇಲೀಸ್ ಆಯುಕ್ತರ ನೇತೃತ್ವದಲ್ಲಿ ಕಲಬುರಗಿ ನಗರ ವ್ಯಾಪ್ತಿಯ ಎಲ್ಲಾ ಪೆÇಲೀಸ್ ಠಾಣೆಗಳ ಪೆÇಲೀಸ್ ಇನ್ಸಪೇಕ್ಟರ್ ರವರ ಮುಂದಾಳತ್ವದಲ್ಲಿ ಎಲ್ಲಾ ಪೆÇಲೀಸ್ ಠಾಣೆಗಳಲ್ಲಿನ ಅಇIಖ Pಔಖಖಿಂಐ ಕರ್ತವ್ಯ ನಿರ್ವಹಿಸುವ ತಾಂತ್ರಿಕ ಸಿಬ್ಬಂದಿಗಳ ಕಾರ್ಯಕ್ಷಮತೆಯಿಂದ ಹಾಗೂ ಅಇಓ ಪೆÇಲೀಸ್ ಠಾಣೆಯ ಅಧಿಕಾರಿ ಸಿಬ್ಬಂದಿಯವರ ಸಹಾಯದಿಂದ ಇಲ್ಲಿಯವರೆಗೆ ಒಟ್ಟು 3616 ಮೋಬೈಲ್ ಫೆÇೀನ್ ಗಳನ್ನು ವಾರಸುದಾರರಿಗೆ ಹಿಂದಿರುಗಿಸಲಾಗಿದ್ದು ಇರುತ್ತದೆ. ಪ್ರಸ್ತುತ 300 ಮೋಬೈಲ್ ಫೆÇೀನ್ಗಳ ಒಟ್ಟು ಅಂ.ಕಿ. 60,00,000/- (ಅರವತ್ತು ಲಕ್ಷ) ರೂಪಾಯಿ ಮೌಲ್ಯದ ಮೊಬೈಲ್ಗಳನ್ನು ಪತ್ತೆ ಹಚ್ಚಲಾಗಿದೆ. ಇಲ್ಲಿಯವರೆಗೆ ಒಟ್ಟು 3616 ಮೊಬೈಲ್ಗಳನ್ನು ವಾರಸುದಾರರಿಗೆ ಹಿಂದಿರುಗಿಸಲಾಗಿದೆ. ಸಾರ್ವಜನಿಕರು ತಮ್ಮ ಮೊಬೈಲ್ ಫೆÇೀನ್ ಗಳನ್ನು ಕಳೆದುಕೊಂಡಲ್ಲಿ ಕಳ್ಳತನವಾದಲ್ಲಿE-Lost ಮತ್ತು CEIR Portal ನಲ್ಲಿ ತಮ್ಮ ದೂರುಗಳನ್ನು ದಾಖಲಿಸಬೇಕು ಎಂದು ಅವರು ತಿಳಿಸಿದರು.
ಸಾರ್ವಜನಿಕರು ತಮ್ಮ ಮೊಬೈಲ್ಗಳಿಗೆ ಸ್ಟ್ರಾಂಗ್ ಪಾಸವರ್ಡಗಳನ್ನು ಅಳವಡಿಸಿರಬೇಕು, ಮೊಬೈಲ್ಗಳಲ್ಲಿ Find My Device Settingಗಳನ್ನು ಸಕ್ರಿಯಗೊಳಿಸಿರಬೇಕು. ನಿಮ್ಮ ಮೊಬೈಲ್ಗಳಿಗೆ ಥಂಬ್ ಲಾಕ್ಗಳನ್ನು ಅಳವಡಿಸಿರಬೇಕು. ಸಾರ್ವಜನಿಕರು ತಮ್ಮ ಮೊಬೈಲ್ ಕಳೆದುಕೊಂಡಾಗ ಕಡ್ಡಾಯವಾಗಿ ಇ-ಐosಣ ಮತ್ತು CEIR ಪೆÇೀರ್ಟಲ್ಗಳಲ್ಲಿ ದೂರನ್ನು ದಾಖಲಿಸಬೇಕು ಎಂದು ಮನವಿ ಮಾಡಿದರು.
ಮೊಬೈಲ್ ಫೆÇೀನ್ಗಳ ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಕಾರ್ಯವನ್ನು ನಗರ ಪೊಲೀಸ್ ಆಯುಕ್ತರಾದ ಡಾ.ಶರಣಪ್ಪ ಎಸ್.ಡಿ ಅವರು ಶ್ಲಾಘಿಸಿದರು.
……………….
ಚೌಕ ಪೆÇಲೀಸ ಠಾಣೆಯಿಂದ 47, ಸಬ್ ಅರ್ಬನ್ ಪೆÇಲೀಸ ಠಾಣೆಯಿಂದ 38, ಸೆನ್ ಪೆÇಲೀಸ ಠಾಣೆಯಿಂದ 38, ವಿಶ್ವವಿದ್ಯಾಲಯ ಪೆÇಲೀಸ ಠಾಣೆಯಿಂದ 36, ಎಂ.ಬಿ ನಗರ ಪೆÇಲೀಸ ಠಾಣೆಯಿಂದ 30, ಸ್ಟೇಷನ್ ಬಜಾರ ಪೆÇಲೀಸ್ ಠಾಣೆಯಿಂದ 23, ಅಶೋಕ ನಗರ ಪೆÇಲೀಸ ಠಾಣೆಯಿಂದ 23, ರೋಜಾ ಪೆÇಲೀಸ ಠಾಣೆಯಿಂದ 23, ಬ್ರಹ್ಮಪೂರ ಪೆÇಲೀಸ ಠಾಣೆಯಿಂದ 20, ರಾಘವೇಂದ್ರ ನಗರ ಪೆÇಲೀಸ್ ಠಾಣೆಯಿಂದ 15, ಫರಹತಾಬಾದ ಪೆÇಲೀಸ್ ಠಾಣೆಯಿಂದ 04 ಮೊಬೈಲ್ಗಳು ಸೇರಿ ಒಟ್ಟು 300 ಮೊಬೈಲ್ಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ.ತಿಳಿಸಿದರು.
……………….
ಕಲಬುರಗಿಯಲ್ಲಿ ಕಳ್ಳತನವಾದ/ಕಳೆದುಕೊಂಡ ಮೊಬೈಲ್ಗಳ ಪೈಕಿ ದೇಶದ ವಿವಿಧ ರಾಜ್ಯಗಳಲ್ಲಿ ಸದರಿ ಮೊಬೈಲ್ಗಳನ್ನು ಪತ್ತೆ ಹಚ್ಚಲಾಗಿದ್ದು, ಕರ್ನಾಟಕ ರಾಜ್ಯದಲ್ಲಿ 230 ಮೊಬೈಲ್ಗಳು, ಮಹಾರಾಷ್ಟ್ರ ರಾಜ್ಯದಲ್ಲಿ 28 ಮೊಬೈಲ್ಗಳು, ಆಂಧ್ರಪ್ರದೇಶ ರಾಜ್ಯದಲ್ಲಿ 22 ಮೊಬೈಲ್ಗಳು, ತೆಲಂಗಾಣ ರಾಜ್ಯದಲ್ಲಿ 13 ಮೊಬೈಲ್ಗಳು, ಉತ್ತರ ಪ್ರದೇಶ ರಾಜ್ಯದಲ್ಲಿ 03 ಮೊಬೈಲ್ಗಳು, ಕೇರಳ ರಾಜ್ಯದಲ್ಲಿ 01 ಮೊಬೈಲ್ನ್ನು ಪತ್ತೆ ಹಚ್ಚಲಾಗಿರುತ್ತದೆ. ಅದರಲ್ಲಿ ಕಲಬುರಗಿ ನಗರದಲ್ಲಿ 158 ಮೊಬೈಲ್ಗಳು, ಕಲಬುರಗಿ ಜಿಲ್ಲೆಯಲ್ಲಿ 26 ಮೊಬೈಲ್ಗಳು, ಬಿಜಾಪೂರ ಜಿಲ್ಲೆಯಲ್ಲಿ 15 ಮೊಬೈಲ್ಗಳು, ಬೀದರ ಜಿಲ್ಲೆಯಲ್ಲಿ 10 ಮೊಬೈಲ್ಗಳು, ರಾಯಚೂರು ಜಿಲ್ಲೆಯಲ್ಲಿ 08 ಮೊಬೈಲ್ಗಳು, ಬೆಂಗಳೂರು ಜಿಲ್ಲೆಯಲ್ಲಿ 06 ಮೊಬೈಲ್ಗಳು, ಬಳ್ಳಾರಿ ಜಿಲ್ಲೆಯಲ್ಲಿ 04 ಮೊಬೈಲ್ಗಳು ಯಾದಗಿರಿ ಜಿಲ್ಲೆಯಲ್ಲಿ 03 ಮೊಬೈಲ್ಗಳು, ಚಿತ್ರದುರ್ಗ ಜಿಲ್ಲೆಯಲ್ಲಿ 01 ಮೊಬೈಲ್ ಹಾಗೂ ಕೋಲಾರ ಜಿಲ್ಲೆಯಲ್ಲಿ 01 ಮೊಬೈಲ್ನ್ನು ಪತ್ತೆ ಹಚ್ಚಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ.ವಿವರಿಸಿದರು.





















