
ಕಲಬುರಗಿ,ನ.6-ಗುಲಬರ್ಗಾ ವಿಶ್ವವಿದ್ಯಾಲಯದ UUCMS ದ ಸಂಯೋಜಕರಾಗಿ ಪತ್ರಿಕೋದ್ಯಮ ವಿಭಾಗದ ಸಂಯೋಜಕ ಡಾ.ಸುರೇಶ ಜಂಗೆ ಅವರು ಗುರುವಾರ ಅಧಿಕಾರ ಸ್ವೀಕರಿದರು.
ಈ ಮೊದಲು ಇದ್ದ ಈರಣ್ಣ ಹುಮನಾಬಾದ ಅವರ ಸೇವಾ ನಿವೃತ್ತಿ ಹೊಂದಿದ ಪ್ರಯುಕ್ತ ಈ ಸ್ಥಾನಕ್ಕೆ ಜಂಗೆ ಅವರನ್ನು ನೇಮಿಸಲಾಯಿತು. ವಿದ್ಯಾರ್ಥಿಗಳಿಗೆ ಸಂಬಂದಿಸಿದ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಕಾರ್ಯ ಮಾಡಲಾಗುವುದು ಎಂದು ಈ ವೇಳೆ ಸುರೇಶ ಜಂಗೆ ಹೇಳಿದರು.
ವಿದ್ಯಾರ್ಥಿಗಳ ಪರವಾಗಿ ಪರೀಕ್ಷೆ, ಅಂಕಪಟ್ಟಿ ಸೇರಿ ಎಲ್ಲ ಕಾರ್ಯಗಳು ತ್ವರಿತವಾಗಿ ಮಾಡಲಾಗುವುದು ಎಂದರು.
ಈ ವೇಳೆ ಮಾತನಾಡಿದ ಡಾ. ಅರುಣಕುಮಾರ ಕುರ್ನೆ, ನಿವೃತ್ತಿ ಎಂಬುವುದು ಎಲ್ಲರಿಗೂ ಸಾಮಾನ್ಯ. ವಿಶ್ವವಿದ್ಯಾಲಯಕ್ಕೆ ಸೇವೆ ಸಲ್ಲಿಸಿದ ಪ್ರತಿಯೊಬ್ಬರ ಕಾರ್ಯ ಸ್ಲಾಘನೀಯ ಎಂದರು. ಡಾ.ರುಮ್ಮಾ, ಮಹೇಶ, ಡಾ. ಹಣಮಂತ ಮೇಲ್ಕೆರಿ, ಡಾ.ಶಂಭುಲಿಂಗ ನಡಿಗೇರಿ, ವಿಠ್ಠಲ್ ಚಿಕಣಿ, ಸಿದ್ದಾರೂಢ ಕಾಂಬಳೆ, ಡಾ.ಸಿದ್ಧಾರ್ಥ ಬಬಲಾದ, ನಿಜಲಿಂಗ ದೊಡ್ಮನಿ, ಡಾ.ಅಶೋಕ ದೊಡ್ಮನಿ, ಶಾಂತಕುಮಾರ ನಗನೂರ, ಮೋಹನರಾವ್ ಸೇರಿದಂತೆ ಅನೇಕರು ಇದ್ದರು.





















