Home ಜಿಲ್ಲೆ ಬೆಂಗಳೂರು ಹಲವು ಹೊಸ ಯೋಜನೆ ಜಾರಿಗೆ ಡಿ.ಕೆ.ಸುರೇಶ್ ಕ್ರಮ

ಹಲವು ಹೊಸ ಯೋಜನೆ ಜಾರಿಗೆ ಡಿ.ಕೆ.ಸುರೇಶ್ ಕ್ರಮ

oplus_148897794

ಕನಕಪುರ,ಜು.೭: ಹೈನುಗಾರಿಕೆಯತ್ತ ರೈತರನ್ನು ಸೆಳೆಯಲು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಹಲವು ಹೊಸ ಯೋಜನೆಗಳನ್ನು ಕೈಗೊಂಡಿದ್ದಾರೆ ಎಂದು ಬೆಂಗಳೂರು ಹಾಲು ಒಕ್ಕೂಟದ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಡಿ.ಸಿ.ನಾಗರಾಜಯ್ಯ ಹೇಳಿದ್ದಾರೆ.


ಸಾತನೂರು ಹೋಬಳಿಗೆ ಸೇರಿದ ಕುರುಬಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆಶ್ರಯದಲ್ಲಿ ಬೆಂಗಳೂರು ಸಹಕಾರ ಹಾಲು ಒಕ್ಕೂಟವು ಹಮ್ಮಿಕೊಂಡಿದ್ದ ತಳಿ ಅಭಿವೃದ್ದಿ, ಲಿಂಗ ನಿರ್ಧರಿತ ವೀರ್ಯ ನಳಿಕೆಗಳ ಬಳಕೆ ಉತ್ಕೃಷ್ಟ ಹೆಣ್ಣು ಕರುಗಳ ಜನನ, ಬಂಜೆತನ ನಿವಾರಣಾ ಶಿಬಿರದ ಉದ್ಘಾಟನೆ ಮಾಡಿ ಅವರು ಮಾತನಾಡಿದರು.


ಹಾಲು ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ರೈತರನ್ನು ಹೈನುಗಾರಿಕೆ ಯತ್ತ ಸೆಳೆಯಲು ಡಿ.ಕೆ.ಸುರೇಶ್ ಹೊಸ ಹೊಸ ಕ್ರಮಗಳನ್ನು ಕೈಗೊಳ್ಳುತಿದ್ದಾರೆ, ಪ್ರಮುಖವಾಗಿ ಹೆಣ್ಣು ಕರುಗಳಿಗೆ ಜನ್ಮನೀಡುವ ಉತ್ತಮ ತಳಿಯ ಹಸುಗಳ ಸಂರಕ್ಷಣೆ ಮಾಡುವ ಮೂಲಕ ಹೈನುಗಾರಿಕೆಯ ವಿಸ್ತರಣೆ ಹಾಗೂ ರೈತರ ಆದಾಯ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದರು


ಡಿ.ಕೆ.ಸುರೇಶ್ ನೇತೃತ್ವದಲ್ಲಿ ರಾಸುಗಳ ತಳಿ ಅಭಿವೃದ್ದಿಗೆ ವಿಶೇಷ ಒತ್ತು ನೀಡಲಾಗುತ್ತಿದೆ,ಈ ಹಿಂದೆ ರಾಸುಗಳಲ್ಲಿ ಕೃತಕ ಗರ್ಭಧಾರಣೆಯ ಯಶಸ್ಸಿನ ಪ್ರಮಾಣ ಸುಮಾರು ಶೇ೩೦ರಷ್ಟು ಇತ್ತು ಪ್ರಸಕ್ತವರ್ಷದ ಜನವರಿ ಫೆಬ್ರವರಿಯಿಂದ ಅದು ಶೇ.೬೦ರಷ್ಟು ಏರಿಕೆಯಾಗುವ ಮೂಲಕ ಪಶು ಪಾಲನಾ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆಯಾಗಿದೆ ಎಂದು ತಿಳಿಸಿದರು.


ತಳಿ ಅಭಿವೃದ್ದಿಯನ್ನು ಇನ್ನಷ್ಟು ವೈಜ್ಞಾನಿಕವಾಗಿ ನಡೆಸುವ ಉದ್ದೇಶದಿಂದ ಕೇಂದ್ರದ ಭಾರತ್ ಪಶುಧನ್ ತಂತ್ರಾಂಶದಲ್ಲಿ ಕೃತಕ ಗರ್ಭಧಾರಣೆ ಮತ್ತು ಅದರ ವಿವರಗಳನ್ನು ದಾಖಲಿಲಾಗುತ್ತದೆ,ಇದರಿಂದ ಜನಿಸಿದ ರಾಸಿನ ಸಂಪೂರ್ಣ ಮಾಹಿತಿ ಡಿಜಿಟಲಿಕರಣ ಲಭ್ಯವಾಗಲಿದೆ ಎಂದರು.


ಆರೋಗ್ಯವಂತ ರಾಸುಗಳ ಸಾಕಾಣಿಯಿಂದ ರೈತರಿಗೆ ಆದಾಯ ಹೆಚ್ಚಿಸಲು ಸಹಕಾರಿಯಾಗಲಿದೆ ಈ ಹೊಸ ಕ್ರಮಗಳಿಂದ ಹೈನುಗಾರಿಕೆ ಕ್ಷೇತ್ರದಲ್ಲಿ ವೈಜ್ಞಾನಿಕ ಪದ್ದತಿಗಳನ್ನು ಬಲಗೊಳ್ಳತ್ತಿದ್ದು,ರೈತರಿಗೆ ದೀರ್ಘಾವಧಿಯಲ್ಲಿ ಹೆಚ್ಚಿನ ಆರ್ಥಿಕ ಲಾಭ ದೊರೆಯಲಿದೆ ಎಂಬ ನಿರೀಕ್ಷೆಯಿದೆ ಎನ್ನುವ ಉದ್ದೇಶದಿಂದ ಹೊಸ ಪದ್ದತಿಯನ್ನು ಡಿ.ಕೆ. ಸುರೇಶ್ ಜಾರಿಗೆ ತಂದಿದ್ದಾರೆ ಎಂದು ತಿಳಿಸಿದರು.


ಬಮೂಲ್‌ನ ಮಾಜಿ ಅಧ್ಯಕ್ಷರು ಹಾಗೂ ಕುರುಬಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕೆ. ನಟೇಶ್ ಮಾತನಾಡಿ,ರೈತರನ್ನು ಆರ್ಥಿಕವಾಗಿ ಸಭಲರನ್ನಾಗಿ ಮಾಡಬೇಕು ಎಂಬ ಉದ್ದೇಶದಿಂದ ಹೈನುಗಾರಿಕೆಯ ಕ್ಷೇತ್ರದಲ್ಲಿ ಹೊಸ ಆಯಾಮವನ್ನು ನಮ್ಮ ನಾಯಕರಾದ ಡಿ.ಕೆ. ಸುರೇಶ್‌ಹೊರದೇಶಗಳಲ್ಲಿ ಬಳಸುವ ತಾಂತ್ರಿಕತೆಯನ್ನು ನಮ್ಮಲ್ಲಿ ಅಳವಡಿಸಿಕೊಳ್ಳು ಬೇಕಾದ ಎಲ್ಲಾ ಕ್ರಮಗಳನ್ನು ವೈದ್ಯಾಧಿಕಾರಿಗಳ ಮೂಲಕ ಜಾರಿಗೊಳಿಸಲಾಗುತ್ತಿದೆ ಎಂದು ತಿಳಿಸಿದರು.


ನಿವೃತ್ತ ವೈಧ್ಯಾಧಿಕಾರಿ ಡಾ. ವೆಂಕಟಸ್ವಾಮಿ ರೆಡ್ಡಿ ಮಾತನಾಡಿ, ಈದಿನ ಕೃತಕ ಗರ್ಭಧಾರಣಾ ಕಾರ್ಯಕರ್ತರಿಗೆ ಉತ್ತಮ ಕಾರ್ಯವಿಧಾನಗಳ ಕುರಿತು ತರಬೇತಿಯನ್ನು ನೀಡಲಾಗಿದೆ. ತಳಿ ಅಭಿವೃದ್ದಿಗೆ ಮತ್ತು ಕೃತಕ ಗರ್ಭಧಾರಣೆಯ ಯಶಸ್ಸಿಗೆ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶದಿಂದ ಕಾರ್ಯಕರ್ತರಿಗೆ ನಿಯಮಿತವಾಗಿ ವೀರ್ಯದ ಸುರಕ್ಷಿತ ಸಂಗ್ರಹಣೆ, ಮತ್ತು ಬಳಕೆ, ಸ್ವಚ್ಚತೆ ಮತ್ತು ಜೈವಿಕ ಸುರಕ್ಷತಾ ಕ್ರಮಗಳು,ರಾಸುಗಳಲ್ಲಿ ಈಸ್ಟ್ರಸ್‌ಗುರುತಿಸುವಿಕೆ, ವಿಧಾನಗಳ ತರಬೇತಿಯನ್ನು ಈದಿನ ನೀಡಲಾಗಿದೆ ಎಂದರು.


ಈ ಸಂದರ್ಭದಲ್ಲಿ ಉಪ ವ್ಯವಸ್ಥಾಪಕ ಡಾ. ಟಿ.ಸಿ.ಪ್ರಕಾಶ್,ಡಾ.ಮನು, ಸಹಾಯಕ ವ್ಯವಸ್ಥಾಪಕರಾದ ಅರುಣ್‌ಕುಮಾರ್, ವಿಸ್ತರಣಾಧಿಕಾರಿಗಳಾದ ಮುನಿರಾಜು ಪರ್ಹಾಜಭೀನ್, ನೇತ್ರಾವತಿ, ಪ್ರಭಾಕರ್, ಬಸವರಾಜು, ಒಳ ಗೊಂಡಂತೆ ಕುರುಬಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ಧೇಶಕರಾದ ಕೆಎಂ. ವೆಂಕಟೇಶ್, ಕಾರ್ಯನಿರ್ವಾಹಕ ಶಿವಶಂಕರ್‌ಆಂಜಿ, ಹಾಲು ಪರೀಕ್ಷಕರಾದ ಸುಮಂತ್, ಸಹಾಯಕ ನಾಗೇಶ್, ಸುಚಿಗಾರ್ತಿ ಪ್ರೇಮ, ನಿರ್ದೇಶಕರಾದ ಎಂ. ಪ್ರಕಾಶ್, ಕೃಷ್ಣೇಗೌಡ ದೊಡ್ಡವೀರೇಗೌಡ, ಕೆ.ಟಿ. ರಮೇಶ್, ಕೃಷ್ಣೇಗೌಡ ಮರೀಗೌಡ, ರತ್ನಮ್ಮ, ಎಂ. ರಜನಿ, ಶಿವಲಿಂಗ ಶಿವಸ್ವಾಮಿ ಒಳಗೊಂಡಂತೆ ಸಂಘಕ್ಕೆ ಹಾಲು ಸರಬರಾಜು ಮಾಡುವ ಉತ್ಪಾದಕರು, ಗ್ರಾಮಸ್ಥರು ಉಪಸ್ಥಿತರಿದ್ದರು.