Home ಜಿಲ್ಲೆ ಲೋಕ ಕಲ್ಯಾಣ, ಮಳೆಗಾಗಿ ಸೈಕಲ್ ತೀರ್ಥಯಾತ್ರೆ

ಲೋಕ ಕಲ್ಯಾಣ, ಮಳೆಗಾಗಿ ಸೈಕಲ್ ತೀರ್ಥಯಾತ್ರೆ

ಸಂಜೆವಾಣಿ ವಾರ್ತೆ,
ವಿಜಯಪುರ, ಸೆ.೧೨: ಲೋಕ ಕಲ್ಯಾಣ ಹಾಗೂ ಉತ್ತಮ ಮಳೆಗಾಗಿ ಸಂಕಲ್ಪ ಮಾಡಿಕೊಂಡಿರುವ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಪಾಲಭಾವಿ ಗ್ರಾಮದ ಸುರೇಶ ಯಲ್ಲಪ್ಪ ಕಡಪಟ್ಟಿ ಅವರು ಕೈಗೊಂಡಿರುವ ಸೈಕಲ್ ತೀರ್ಥಯಾತ್ರೆ ಇಂಡಿ ತಾಲೂಕಿನ ಅಥರ್ಗಾ ಗ್ರಾಮಕ್ಕೆ ಆಗಮಿಸಿದೆ.
ಆಧ್ಯಾತ್ಮಿಕ ಭಕ್ತಿ ಹಾಗೂ ಪರಿಸರ ಸ್ನೇಹಿ ಸಂದೇಶವನ್ನು ಸಾರುವ ಉದ್ದೇಶದಿಂದ ಆರಂಭಿಸಿರುವ ಈ ಯಾತ್ರೆಯನ್ನು ಮುಗುಳಖೋಡ ಮಠದಿಂದ ಪ್ರಾರಂಭಿಸಿರುವ ಸುರೇಶ ಅವರು, ಮಾರ್ಗಮಧ್ಯೆ ಲಚ್ಯಾಣದ ಶ್ರೀ ಸಿದ್ದಲಿಂಗೇಶ್ವರ ದೇವರ ದರ್ಶನ ಪಡೆದು ಬಳಿಕ ಜಿಡಗಾ ಮಠ ತಲುಪುವ ಸಂಕಲ್ಪ ಹೊಂದಿದ್ದಾರೆ.
ಮೂಲತಃ ಖಾಸಗಿ ವಾಹನ ಚಾಲಕರಾಗಿರುವ ಸುರೇಶ ಅವರು ಲೋಕ ಕಲ್ಯಾಣ, ಉತ್ತಮ ಮಳೆ ಹಾಗೂ ಜನರ ನೆಮ್ಮದಿಗಾಗಿ ಸೈಕಲ್ ಮೂಲಕ ಯಾತ್ರೆ ಕೈಗೊಂಡಿದ್ದಾರೆ. ಅಥರ್ಗಾ ಗ್ರಾಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಶಿಕ್ಷಕ ಸಂತೋಷ ಬಂಡೆ ಅವರು ಸುರೇಶ ಅವರನ್ನು ಭೇಟಿ ಮಾಡಿ ಯಾತ್ರೆಗೆ ಶುಭ ಹಾರೈಸಿದರು.