
ಕಲಬುರಗಿ,ಅ.15: ಭಾರತ ಸರ್ಕಾರದ ಗೃಹ ಸಚಿವಾಲಯದ ಅಧಿಕೃತ ಭಾಷಾ ಇಲಾಖೆಯ ಅಧೀನದಲ್ಲಿರುವ ಕಲಬುರಗಿ ನಗರ ಅಧಿಕೃತ ಭಾಷಾ ಅನುಷ್ಠಾನ ಸಮಿತಿ (ಟೋಲಿಕ್) ಅರ್ಧವಾರ್ಷಿಕ ಸಭೆಯನ್ನು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು (ಸಿ.ಯು.ಕೆ.) ಆಯೋಜಿಸಿತ್ತು.
ಸಭೆಯಲ್ಲಿ ಬಿ.ಎಸ್.ಎನ್.ಎಲ್.ನ ಪ್ರಧಾನ ವ್ಯವಸ್ಥಾಪಕ ಫಣಿ ಪ್ರಸಾದ್ ಅವರು ಟೋಲಿಕ್ ಗುಲ್ಬರ್ಗಾ ಅಧ್ಯಕ್ಷರ ಜವಾಬ್ದಾರಿಯನ್ನು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಅವರಿಗೆ ಅಧಿಕೃತವಾಗಿ ಹಸ್ತಾಂತರಿಸಿದರು. ಸಿ.ಯು.ಕೆ.ಯ ರಾಜಭಾಷಾ ವಿಭಾಗದ ನಿರ್ದೇಶಕರಾದ ಡಾ. ರೇಷ್ಮಾ ನದಾಫ್ ಅವರು ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಈ ಟೋಲಿಕ್ ಸಮಿತಿಯು ಕೇಂದ್ರ ಸರ್ಕಾರಿ ಕಚೇರಿಗಳು, ಸಾರ್ವಜನಿಕ ವಲಯದ ಉದ್ಯಮಗಳು, ರಾಷ್ಟ್ರೀಕೃತ ಬ್ಯಾಂಕುಗಳು ಹಾಗೂ ಹಣಕಾಸು ಸಂಸ್ಥೆಗಳಲ್ಲಿ ಅಧಿಕೃತ ಭಾಷಾ ನೀತಿಯ ಅನುಷ್ಠಾನವನ್ನು ಪರಿಶೀಲಿಸುವುದರ ಜೊತೆಗೆ ಹಿಂದಿ ಭಾಷೆಯ ಪ್ರಗತಿಪರ ಬಳಕೆಯನ್ನು ಉತ್ತೇಜಿಸುತ್ತದೆ. ಅರ್ಧವಾರ್ಷಿಕ ಸಭೆಗಳ ಮೂಲಕ ಅನುಷ್ಠಾನದ ಪ್ರಗತಿಯನ್ನು ಪರಾಮರ್ಶಿಸಿ, ಅಧಿಕೃತ ಕೆಲಸಕಾರ್ಯಗಳಲ್ಲಿ ಹಿಂದಿ ಬಳಕೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಚರ್ಚಿಸಲಾಗುತ್ತದೆ.
ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಅವರು, ಪ್ರಾದೇಶಿಕ ಅಭಿವೃದ್ಧಿಗೆ ಸಿ.ಯು.ಕೆ. ನೀಡುತ್ತಿರುವ ಕೊಡುಗೆಯನ್ನು ವಿವರಿಸಿದರು. ದಿನದ ಪದ, ಕಾರ್ಯಾಗಾರಗಳು ಹಾಗೂ ತರಬೇತಿ ಕಾರ್ಯಕ್ರಮಗಳ ಮೂಲಕ ಹಿಂದಿ ಭಾಷೆಯ ಬಳಕೆಯನ್ನು ಉತ್ತೇಜಿಸುವ ಅಗತ್ಯವನ್ನು ಒತ್ತಿಹೇಳಿದರು. ಅಧಿಕಾರಿಗಳಿಗೆ ಹಿಂದಿ ತರಬೇತಿ ನೀಡಲು ವಿಶ್ವವಿದ್ಯಾಲಯದ ಹಿಂದಿ ಮತ್ತು ಅಧಿಕೃತ ಭಾಷಾ ವಿಭಾಗಗಳ ಬೋಧಕ ಸಿಬ್ಬಂದಿಯ ಅನುಭವವನ್ನು ಬಳಸಿಕೊಳ್ಳುವಂತೆ ಸಲಹೆ ನೀಡಿದರು.
ಬೆಂಗಳೂರಿನ ಪ್ರಾದೇಶಿಕ ಅನುಷ್ಠಾನ ಕಚೇರಿಯ ಸಂಶೋಧನಾ ಅಧಿಕಾರಿ ಪ್ರಕಾಶ್ ರಾಮ್ ಅವರು ಆನ್ಲೈನ್ ಮೂಲಕ ಸಭೆಯಲ್ಲಿ ಭಾಗವಹಿಸಿ, ಅಧಿಕೃತ ಭಾಷಾ ಇಲಾಖೆಯ ನಿಯಮಗಳು ಮತ್ತು ಮಾರ್ಗಸೂಚಿಗಳ ಕುರಿತು ಮಾಹಿತಿ ನೀಡಿದರು.
ಸಿ.ಯು.ಕೆ.ಯ ಪ್ರಭಾರ ಕುಲಸಚಿವ ಪೆÇ್ರ. ಚನ್ನವೀರ ಆರ್. ಎಂ. ಮತ್ತು ಉಪ ಕುಲಸಚಿವ ರವೀಂದ್ರನಾಥ ಪಂಡಿತ್ ಅವರು ಸಭೆಯಲ್ಲಿ ಭಾಗವಹಿಸಿದ್ದರು. ಕಲಬುರಗಿಯ ವಿವಿಧ ಕೇಂದ್ರ ಸರ್ಕಾರಿ ಸಂಸ್ಥೆಗಳಾದ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ, ಕೇಂದ್ರ ತೆರಿಗೆ ಮತ್ತು ಕೇಂದ್ರ ಅಬಕಾರಿ ಇಲಾಖೆ, ಪಿ.ಎಂ. ಶ್ರೀ ಕೇಂದ್ರೀಯ ವಿದ್ಯಾಲಯ, ರಾಷ್ಟ್ರೀಯ ಸಾಂಖ್ಯಿಕ ಕಚೇರಿ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್, ಜಿಲ್ಲಾ ವಿಜ್ಞಾನ ಕೇಂದ್ರ, ನೌಕರರ ಭವಿಷ್ಯ ನಿಧಿ ಸಂಸ್ಥೆ , ಪಿ.ಎಂ. ಶ್ರೀ ಜವಾಹರ ನವೋದಯ ವಿದ್ಯಾಲಯ, ಓರಿಯಂಟಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ಹಾಗೂ ನ್ಯಾಷನಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ಗಳ ಕಚೇರಿ ಮುಖ್ಯಸ್ಥರು ಮತ್ತು ಅಧಿಕೃತ ಭಾಷಾ ಅಧಿಕಾರಿಗಳು ಪಾಲ್ಗೊಂಡಿದ್ದರು.























