
ವಾಷಿಂಗ್ಟನ್,ಜೂ,೩೦- ಇರಾನ್- ಅಮೆರಿಕ ನಡುವೆ ಸಂಘರ್ಷ ಕೊನೆಗೊಳಿಸುವ ನಿಟ್ಟಿನಲ್ಲಿ ಅಂತಿಮ ಮಾತುಕತೆಗೆ ಎದುರು ನೋಡುತ್ತಿರುವ ಸಮಯದಲ್ಲಿ ಬ್ರೆಂಟ್ ಕಚ್ಚಾ ತೈಲ ಬ್ಯಾರೆಲ್‌ಗೆ ೭೨ ಡಾಲರ್ ಗೆ ಇಳಿಕೆಯಾಗಿದೆ.
ದೋಹಾದಲ್ಲಿ ಸಂಭಾವ್ಯ ಅಮೆರಿಕ-ಇರಾನ್ ಮಾತುಕತೆಗಳ ಫಲಿತಾಂಶಕ್ಕಾಗಿ ಜಾಗತಿಕ ನಾಯಕರು ಕಾಯುತ್ತಿರುವ ನಡುವೆ ತೈಲ ಬೆಲೆ ಇಳಿಕೆ ಕಂಡಿದೆ. ಉಭಯ ದೇಶಗಳ ನಡುವೆ ವಾರದ ಹಿಂದೆ ಕ್ಷಿಪಣಿ ದಾಳಿ ವಿನಿಮಯ ಮಾಡಿಕೊಂಡ ನಂತರವೂ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದರೂ ತೈಲ ಬೆಲೆ ಇಳಿಕೆ ಕಂಡಿದೆ
ಕಳೆದ ನಾಲ್ಕು ತಿಂಗಳ ಸಂಘರ್ಷವನ್ನು ಕೊನೆಗೊಳಿಸುವ ಗುರಿ ಹೊಂದಿರುವ ಮಧ್ಯಂತರ ಕದನ ವಿರಾಮವನ್ನು ಒತ್ತಡಕ್ಕೆ ಒಳಪಡಿಸಿದೆ.ಆಗಸ್ಟ್ ವಿತರಣೆಗೆ ಬ್ರೆಂಟ್ ಕಚ್ಚಾ ತೈಲದ ಭವಿಷ್ಯ ಬ್ಯಾರೆಲ್‌ಗೆ ಶೇಕಡಾ ೧.೦೩ ರಷ್ಟು ಅಥವಾ ೭೫ ಸೆಂಟ್‌ಗಳಷ್ಟು ಕುಸಿದು ೭೨.೪೦ ಡಾಲರ್‌ಗೆ ತಲುಪಿದೆ.
ಹೆಚ್ಚು ಸಕ್ರಿಯವಾಗಿ ವಹಿವಾಟು ನಡೆಸಲಾದ ಸೆಪ್ಟೆಂಬರ್ ಬ್ರೆಂಟ್ ಒಪ್ಪಂದ ಬ್ಯಾರೆಲ್‌ಗೆ ೭೩.೫೧ ಡಾಲರ್ ಗೆ ಕುಸಿದು ಶೇ.೦.೫೪ ರಷ್ಟು ಅಥವಾ ೪೦ ಸೆಂಟ್‌ಗಳಷ್ಟು ಕುಸಿದಿದೆ.
ಈ ನಡುವೆ ಅಮೆರಿಕ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ ಕಚ್ಚಾ ತೈಲ ಬ್ಯಾರೆಲ್‌ಗೆ ಶೇಕಡಾ ೦.೬೬ ರಷ್ಟು ಅಥವಾ ೪೭ ಸೆಂಟ್‌ಗಳಷ್ಟು ಕುಸಿದು ೭೦.೩೨ ಡಾಲರ್ ಗೆ ಕುಸಿದಿದೆ
ಇರಾನ್ ಮತ್ತು ಒಮಾನಿ ತಜ್ಞರು ಹಾರ್ಮುಜ್ ಜಲಸಂಧಿಯ ಮೂಲಕ ಸಾಗಣೆ ಮಾರ್ಗಗಳನ್ನು ಮರು ವ್ಯಾಖ್ಯಾನಿಸುವ ಕುರಿತು ಮುಂದಿನ ದಿನಗಳಲ್ಲಿ ಚರ್ಚೆ ಪ್ರಾರಂಭಿಸುವ ನಿರೀಕ್ಷೆಯಿದೆ ಎಂದು ಇರಾನ್ ಉಪ ವಿದೇಶಾಂಗ ಸಚಿವ ಕಜೆಮ್ ಘರಿಬಬಾದಿ ತಿಳಿಸಿದ್ದಾರೆ.
ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಘೈ ಪ್ರತಿಕ್ರಿಯಿಸಿ ಗೊತ್ತುಪಡಿಸಿದ ಹಡಗು ಮಾರ್ಗಗಳ ಹೊರಗೆ ಹಡಗುಗಳು ಪ್ರಯಾಣಿಸುವುದನ್ನು ತಡೆಯಲು ಇರಾನ್ ಪ್ರಯತ್ನಿಸುತ್ತದೆ ಅದೇ ಸಮಯದಲ್ಲಿ, ಮುಂಬರುವ ದಿನಗಳಲ್ಲಿ ಅಮೆರಿಕದೊಂದಿಗೆ ಯಾವುದೇ ಸಭೆಗಳು ಅಥವಾ ಮಾತುಕತೆಗಳನ್ನು ಯಾವುದೇ ಮಟ್ಟದಲ್ಲಿ ನಿಗದಿಪಡಿಸಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ಧಾರೆ
ಸಂಭಾವ್ಯ ಮಾತುಕತೆಗಳ ಕುರಿತಾದ ಸಂಘರ್ಷದ ಸಂಕೇತಗಳು ಜೂನ್ ೧೭ ರ ಕದನ ವಿರಾಮ ಒಪ್ಪಂದದ ದುರ್ಬಲತೆ ಒತ್ತಿಹೇಳುತ್ತವೆ, ಹಾರ್ಮುಜ್ ಜಲಸಂಧಿಯ ಮೂಲಕ ಜಾಗತಿಕ ತೈಲ ಸಾಗಣೆ ಅಡ್ಡಿಪಡಿಸಿದ ನವೆಂಬರ್ ಕಾಂಗ್ರೆಸ್ ಚುನಾವಣೆಗೆ ಮುಂಚಿತವಾಗಿ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ರಾಜಕೀಯ ಪರೀಕ್ಷೆ ಸೃಷ್ಟಿಸಿದ ಹಗೆತನವನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ



























