Home ಜಿಲ್ಲೆ ಕಲಬುರಗಿ ವಿಚಾರಗಳು ಜಗತ್ತನ್ನು ಆಳುತ್ತವೆ: ಚನ್ನಶೆಟ್ಟಿ

ವಿಚಾರಗಳು ಜಗತ್ತನ್ನು ಆಳುತ್ತವೆ: ಚನ್ನಶೆಟ್ಟಿ

ಬೀದರ್,ಜೂ.30-ವಿಶ್ವ ಶಾಂತಿ ನೀಡಿದ ಗೌತಮ ಬುದ್ಧ, ಭಕ್ತಿಭಂಡಾರಿ ಅಣ್ಣ ಬಸವಣ್ಣ ಮತ್ತು ವಿಶ್ವ ಜ್ಞಾನಿ ಡಾ.ಅಂಬೇಡ್ಕರ್ ಅವರ ವಿಚಾರಗಳು ಎಂದಿಗಿಂತಲೂ ಇಂದು ಹೆಚ್ಚು ಅವಶ್ಯಕವಾಗಿವೆ. ವಿಚಾರಗಳು ಜಗತ್ತನ್ನು ಆಳುತ್ತವೆ ಎಂದು ಬೀದರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುರೇಶ ಚನಶೆಟ್ಟಿ ಹೇಳಿದರು.
ಕಲಬುರಗಿಯ ಸಿದ್ಧಾರ್ಥ ಪ್ರಕಾಶನದಿಂದ, ಬುದ್ಧ ಬಸವ ಅಂಬೇಡ್ಕರ ವಿಚಾರಧಾರೆ, ಬುದ್ಧಿಷ್ಟ ಮಕ್ಕಳ ಹೆಸರಿನ ಲೋಕ, ಡಾ.ಅಂಬೇಡ್ಕರ್ ಮಹಾ ಪರಿನಿರ್ವಾಣ ಗ್ರಂಥಗಳನ್ನು ಸಮರ್ಪಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಇಂದಿನ ಸಮಾಜಕ್ಕೆ ಈ ಮೌಲಿಕ ಕೃತಿಗಳು ದಿವ್ಯ ಔಷಧಿಯಾಗಿವೆ. ಇವುಗಳು ಶಾಲಾ ಕಾಲೇಜು ಮಕ್ಕಳಿಗೆ ಬಹು ಉಪಯುಕ್ತ ಗ್ರಂಥಗಳಾಗಿವೆಂದರು.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಸಂಚಾಲಕರಾದ ಮಾರುತಿ ಬೌದ್ಧೆ ಅವರು ಅಧ್ಯಕ್ಷತೆ ವಹಿಸಿ, ಇಂದಿನ ಯುವ ಜನಾಂಗವೂ ಇಂತಹ ಮಾನವೀಯ ಮೌಲಿಕ ಪುಸ್ತಕವನ್ನು ಅಧ್ಯಯನ, ಅಧ್ಯಾಪನ ಮಾಡುವ ಮೂಲಕ ಈ ತ್ರಿಮೂರ್ತಿಗಳು ನಡೆದ ದಾರಿ, ನುಡಿದ ಅಮರ ಸಂದೇಶದಂತೆ ನಡೆಯಲು ಬುದ್ಧಿಷ್ಟ ಮಕ್ಕಳ ಹೆಸರಿನ ಲೋಕ ಪುಸ್ತಕವೂ ಡಾ.ಅಂಬೇಡ್ಕರ್ ರವರ ಕನಸಾದ ಭಾರತ ಬೌದ್ಧ ಮಯ ಮಾಡುವ ಉದ್ದೇಶಕ್ಕೆ ಪೂರಕವಾದ ಮಹಾನ ಗ್ರಂಥವಾಗಿದೆ ಎಂದರು.
ಮೊದಲಿಗೆ ಡಾ.ಕೆ.ಎಸ್.ಬಂಧು.ಸಿದ್ದೇಶ್ವರ ರವರು ಸ್ವಾಗತ ಕೋರಿದರು. ಜಗದೀಶ ತ್ಯಾಗವೀರ ಅವರು ನಿರೂಪಣೆ ಮಾಡಿದರೆ, ಬಸವರಾಜ ಬಂಧು ವಂದಾನಾರಪಣೆ ಗೈದರು. ಡಿ.ಎಸ್.ಎಸ್ ಪದಾದಿಕಾರಿಗಳು ಉಪಸ್ಥಿತರಿದ್ದರು.