Home ಮುಖಪುಟ ಸುದ್ದಿ ನರೆಗಲ್ ಗ್ರಾಮ ಹಿಂಸಾಚಾರ ಹೇಯ ಕೃತ್ಯ

ನರೆಗಲ್ ಗ್ರಾಮ ಹಿಂಸಾಚಾರ ಹೇಯ ಕೃತ್ಯ

ಹಾವೇರಿ,ಜೂ. ೩೦- ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ನರೆಗಲ್ ಗ್ರಾಮದಲ್ಲಿ ನಿನ್ನೆ ನಡೆದ ಹಿಂಸಾತ್ಮಕ ಘಟನೆ ಅತ್ಯಂತ ಹೇಯ ಕೃತ್ಯವಾಗಿದ್ದು, ಸಮಾಜದಲ್ಲಿ ಕೋಮು ಸೌಹಾರ್ದತೆಯನ್ನು ಕದಡುವ ಯತ್ನ ನಡೆದಿದ್ದು ಮತ್ತು ಉದ್ದೇಶ ಪೂರ್ವಕವಾಗಿ ಹೋರಿ ಬೆದರಿಸುವ ಯುವಕರ ಮೇಲೆ ಹಲ್ಲೆ ಮಾಡಿದ್ದು ಅತ್ಯಂತ ಖಂಡನೀಯ. ಕೂಡಲೇ ತಪ್ಪಿತಸ್ಥರ ಮೇಲೆ ಅತ್ಯಂತ ಕಠಿಣ ಶಿಸ್ತಿನ ಕ್ರಮ ತೆಗೆದುಕೊಂಡು ಅವರನ್ನು ಜೈಲಿಗೆ ಕಳುಹಿಸಬೇಕು ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಕೊಟ್ಟು ಸರ್ಕಾರ ಪರಿಹಾರ ಕೊಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.

ಈ ಕುರಿತು ಎಕ್ಸ್ ಮಾಡಿರುವ ಅವರು, ಈ ಥರದ ದ್ವೇಷದ ವಾತಾವರಣ ಮಾಡುತ್ತಿರುವವರಿಗೆ ರಾಜಕೀಯ ಪ್ರೋತ್ಸಾಹ ಇರುವುದು ಬಹಳ ಸ್ಪಷ್ಟ ಮತ್ತು ಪೊಲಿಸ್ ಇಲಾಖೆ ಈ ಪ್ರಚೋದನೆ ಮಾಡುವ ನಾಯಕರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದೆ. ಇದನ್ನು ನಿಯಂತ್ರಿಸಲು ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿಗಳು ವಿಫಲವಾಗಿದ್ದಾರೆ. ಇದರ ಹಿಂದೆ ಕಾನೂನು ಬಾಹಿರ ಚಟುವಟಿಕೆ, ಒಸಿ, ಇಸ್ಪೀಟ್ ಆಡಿಸುವವರ ಕುಮ್ಮಕ್ಕು ಕೂಡ ಇದೆ. ಇದು ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಕೂಡಲೇ ತಪ್ಪಿತಸ್ಥರ ಮೇಲೆ ಅತ್ಯಂತ ಕಠಿಣ ಶಿಸ್ತಿನ ಕ್ರಮ ತೆಗೆದುಕೊಂಡು ಅವರನ್ನು ಜೈಲಿಗೆ ಕಳುಹಿಸಬೇಕು ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಕೊಟ್ಟು ಸರ್ಕಾರ ಪರಿಹಾರ ಕೊಡಬೇಕು ಮತ್ತು ಅಲ್ಲಿಯ ಪೊಲಿಸ್ ಇಲಾಖೆ ಅಧಿಕಾರಿಗಳನ್ನು ಕೂಡಲೆ ವರ್ಗಾವಣೆ ಮಾಡಬೇಕೆಂದು ಗೃಹ ಸಚಿವರು ಮತ್ತು ಪೊಲಿಸ್ ಹಿರಿಯ ಅಧಿಕಾರಿಗಳಿಗೆ ಆಗ್ರಹಿಸುತ್ತೇನೆ ಎಂದು ತಿಳಿಸಿದ್ದಾರೆ.