
ಬೀದರ್, ಜೂ 06 : ಬೀದರ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ಅನೇಕ ರೈತರು ಮುಂಗಾರು ಹಂಗಾಮಿನ ಬಿತ್ತನೆಕಾರ್ಯವನ್ನುಕೈಗೊಂಡಿದ್ದಾರೆ. ಇನ್ನೂ ಹಲವಾರುರೈತರು ಬಿತ್ತನೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ನಮ್ಮ ಪ್ರದೇಶಕ್ಕೆ ಸೂಕ್ತವಾದ ಬೆಳೆಗಳು ಹಾಗೂ ಅಧಿಕ ಇಳುವರಿ ನೀಡುವ ತಳಿಗಳನ್ನು ಆಯ್ಕೆ ಮಾಡಿಕೊಂಡು, ನೂತನ ಕೃಷಿ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಲ್ಲಿ ಉತ್ತಮ ಉತ್ಪಾದನೆ ಪಡೆಯಲು ಸಾಧ್ಯವಾಗುತ್ತದೆ ಎಂದು ಬೀದರ ಐಸಿಎಆರ್À ಕೃಷಿ ವಿಜ್ಞಾನಕೇಂದ್ರ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು ಅವರು ತಿಳಿಸಿದ್ದಾರೆ.
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಹೆಸರು ಹಾಗೂ ಉದ್ದು ಬೆಳೆಗಳನ್ನು ಬಿತ್ತನೆ ಮಾಡಲು ಸಿದ್ಧತೆ ನಡೆಸುತ್ತಿರುವರೈತರು, ಉತ್ತಮ ಇಳುವರಿ ಹಾಗೂ ರೋಗಮುಕ್ತ ಬೆಳೆ ಪಡೆಯಲುಕಡ್ಡಾಯವಾಗಿ ಬೀಜೋಪಚಾರ ಕೈಗೊಳ್ಳಬೇಕು. ಬಿತ್ತನೆಗೆ ಮುನ್ನ ಬೀಜಗಳಿಗೆ ಜೈವಿಕ ಗೊಬ್ಬರಗಳು ಹಾಗೂ ಕೀಟನಾಶಕಗಳಿಂದ ಉಪಚರಿಸುವುದರಿಂದಆರಂಭಿಕ ಹಂತದಲ್ಲಿಕಂಡುಬರುವರೋಗ ಹಾಗೂ ಕೀಟಗಳ ಬಾಧೆಯನ್ನು ಪರಿಣಾಮಕಾರಿಯಾಗಿತಡೆಗಟ್ಟಬಹುದು. ಜೊತೆಗೆಜೈವಿಕ ಗೊಬ್ಬರಗಳ ಬಳಕೆಯು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿ ಸಸ್ಯಗಳಿಗೆ ಅಗತ್ಯ ಪೆÇೀಷಕಾಂಶಗಳ ಲಭ್ಯತೆಯನ್ನು ಸುಧಾರಿಸುತ್ತದೆ.
ಹೆಸರು ಹಾಗೂ ಉದ್ದು ಬೆಳೆಗಳಿಗೆ ಪ್ರತಿಎಕರೆಗೆ ಬೇಕಾಗುವ ಬೀಜಕ್ಕೆಜೈವಿಕ ಗೊಬ್ಬರಗಳಾದ ರೈಜೋಬಿಯಂ ಮತ್ತುರಂಜಕಕರಗಿಸುವಅಣುಜೀವಿ ಗೊಬ್ಬರ (ಪಿ.ಎಸ್.ಬಿ.) ತಲಾ 200 ಗ್ರಾಂ ಪ್ರಮಾಣದಲ್ಲಿ ಮಿಶ್ರಣ ಮಾಡಿ ಬೀಜೋಪಚಾರ ಮಾಡಬೇಕು. ಇದರೊಂದಿಗೆಜೈವಿಕ ಶಿಲೀಂಧ್ರನಾಶಕವಾದ ಟ್ರೈಕೋಡರ್ಮಾವನ್ನು ಪ್ರತಿಎಕರೆಗೆ ಬೇಕಾಗುವ ಬೀಜಕ್ಕೆ 20 ಗ್ರಾಂ ಪ್ರಮಾಣದಲ್ಲಿಉಪಚರಿಸುವುದುಅತ್ಯಗತ್ಯವಾಗಿದೆ.
ರೈಜೋಬಿಯಂ ಅಣುಜೀವಿಗಳು ವಾತಾವರಣದಲ್ಲಿನ ಸಾರಜನಕವನ್ನು ಸ್ಥಿರೀಕರಿಸಿ ಸಸ್ಯಗಳಿಗೆ ಒದಗಿಸುತ್ತವೆ. ರಂಜಕಕರಗಿಸುವ ಅಣುಜೀವಿಗಳು ಮಣ್ಣಿನಲ್ಲಿಕರಗದರೂಪದಲ್ಲಿರುವರಂಜಕವನ್ನು ಕರಗಿಸಿ ಗಿಡಗಳಿಗೆ ಲಭ್ಯವಾಗುವಂತೆ ಮಾಡುತ್ತವೆ. ಟ್ರೈಕೋಡರ್ಮಾ ಬೇರು ಕೊಳೆತ ಸೇರಿದಂತೆ ವಿವಿಧ ಶಿಲೀಂಧ್ರಜನ್ಯ ರೋಗಗಳಿಂದ ಬೆಳೆಯನ್ನು ರಕ್ಷಿಸಲು ಸಹಕಾರಿಯಾಗುತ್ತದೆ.ಇದಲ್ಲದೆ, ಬೆಳೆಗಳ ಆರಂಭಿಕ ಹಂತದಲ್ಲಿ ಹೆಚ್ಚಾಗಿ ಕಂಡುಬರುವರಸಹೀರುವ ಕೀಟಗಳಾದ ನುಸಿ ಹಾಗೂ ಜಿಗಿಜಾತಿ ಕೀಟಗಳ ಹಾವಳಿಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲುರಾಸಾಯನಿಕ ಬೀಜೋಪಚಾರವೂಅಗತ್ಯವಾಗಿದೆ. ಇದಕ್ಕಾಗಿ ಪ್ರತಿಒಂದುಕಿಲೋಗ್ರಾಂ ಹೆಸರುಅಥವಾ ಉದ್ದಿನ ಬೀಜಕ್ಕೆಇಮಿಡಾಕ್ಲೋಪ್ರಿಡ್ 60 ಎಫ್.ಎಸ್. ಕೀಟನಾಶಕವನ್ನು 10 ಮಿಲಿ ಪ್ರಮಾಣದಲ್ಲಿ ಬೆರೆಸಿ ಬೀಜಗಳಿಗೆ ಸಮರ್ಪಕವಾಗಿ ಲೇಪಿಸಬೇಕು.
ಜೈವಿಕ ಹಾಗೂ ರಾಸಾಯನಿಕಗಳ ಸಂಯೋಜಿತ ಬೀಜೋಪಚಾರದಿಂದ ಬೀಜಗಳ ಮೊಳಕೆ ಪ್ರಮಾಣ ಹೆಚ್ಚುವುದರಜೊತೆಗೆ, ಸಸಿಗಳು ಆರೋಗ್ಯಕರವಾಗಿ ಬೆಳೆಯಲು ನೆರವಾಗುತ್ತದೆ. ರೋಗ ಹಾಗೂ ಕೀಟಗಳ ಬಾಧೆಕಡಿಮೆಯಾಗುವುದರಿಂದಉತ್ತಮ ಇಳುವರಿ ಪಡೆಯಲು ಸಾಧ್ಯವಾಗುತ್ತದೆ. ರೈತ ಬಾಂಧವರು ಹೆಸರು ಹಾಗೂ ಉದ್ದು ಬೆಳೆಗಳಲ್ಲಿ ಈ ಸುಧಾರಿತ ಬೀಜೋಪಚಾರತಂತ್ರಜ್ಞಾನವನ್ನುಕಡ್ಡಾಯವಾಗಿ ಅಳವಡಿಸಿಕೊಂಡು, ಉತ್ತಮಉತ್ಪಾದನೆ ಹಾಗೂ ಹೆಚ್ಚಿನಆದಾಯವನ್ನು ಪಡೆಯುವಂತೆ ಕೃಷಿ ತಜ್ಞರು ಮನವಿ ಮಾಡಿದ್ದಾರೆ.ರೈತರಿಗಾಗಿ ಪ್ರಮುಖ ಶಿಫಾರಸುಗಳು : ರೈಜೋಬಿಯಂ- 200 ಗ್ರಾಂ/ಎಕರೆಗೆಬೇಕಾಗುವಬೀಜಕ್ಕೆ, ರಂಜಕಕರಗಿಸುವಅಣುಜೀವಿಗೊಬ್ಬರ (PSಃ)-200 ಗ್ರಾಂ/ಎಕರೆಗೆಬೇಕಾಗುವಬೀಜಕ್ಕೆ, ಟ್ರೈಕೋಡರ್ಮಾ-20 ಗ್ರಾಂ/ಎಕರೆಗೆಬೇಕಾಗುವಬೀಜಕ್ಕೆ, ಇಮಿಡಾಕ್ಲೋಪ್ರಿಡ್ 60 ಎಫ್.ಎಸ್.-10 ಮಿ.ಲೀ./ಕೆ.ಜಿ. ಹೆಸರುಅಥವಾ ಉದ್ದಿನಬೀಜಕ್ಕೆ ಈ ಕ್ರಮಗಳನ್ನು ಅನುಸರಿಸುವ ಮೂಲಕ ಮುಂಗಾರು ಹಂಗಾಮಿನಲ್ಲಿಆರೋಗ್ಯಕರ ಬೆಳೆ ಹಾಗೂ ಅಧಿಕ ಇಳುವರಿ ಪಡೆಯಬೇಕು, ಹೆಚ್ಚಿನ ಮಾಹಿತಿಗಾಗಿಹಿರಿಯ ವಿಜ್ಞಾನಿ & ಮುಖ್ಯಸ್ಥರು, ಕೃಷಿ ವಿಜ್ಞಾನಕೇಂದ್ರ, ಬೀದರ ಇವರನು ??ದೂ.ಸಂ.9480696318ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

























