Home ಜಿಲ್ಲೆ ಸ್ಪರ್ಧಿಗಳು ಕ್ರೀಡಾ ಮನೋಭಾವ ಮತ್ತು ಶಿಸ್ತಿನಿಂದ ಸ್ಪರ್ಧಿಸಬೇಕು, ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು

ಸ್ಪರ್ಧಿಗಳು ಕ್ರೀಡಾ ಮನೋಭಾವ ಮತ್ತು ಶಿಸ್ತಿನಿಂದ ಸ್ಪರ್ಧಿಸಬೇಕು, ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು

ಬೀದರ, ನ ೦೪ : ಸಾಹಿತ್ಯ ಮತ್ತು ಸಂಸ್ಕೃತಿಯ ಸಂದೇಶದೊAದಿಗೆ ಮೂಡಿಬಂದ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರನ ಯುವಜನೋತ್ಸವದಲ್ಲಿ ಸ್ಪರ್ಧಿಗಳು ಕ್ರೀಡಾ ಮನೋಭಾವ ಮತ್ತು ಶಿಸ್ತಿನಿಂದ ಸ್ಪರ್ಧಿಸಬೇಕು ಹಾಗೂ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿಗಳಾದ ಡಾ. ಎ.ಟಿ. ರಾಮಚಂದ್ರ ನಾಯಕ್ ಕರೆ ನೀಡಿದರು.

ಬೀದರದ ನಂದಿನಗರ ಆವರಣದಲ್ಲಿರುವ ಪಶುವೈದ್ಯಕೀಯ ಮಹಾವಿದ್ಯಾಲಯದ ೨೦ನೇ ಅಂತರ ಮಹಾವಿದ್ಯಾಲಯಗಳ ಯುವಜನೋತ್ಸವ ‘ಝೇಂಕಾರ-೨೦೨೬’ ಕಾರ್ಯಕ್ರಮವನ್ನು ೨೦೨೬ರ ನವೆಂಬರ್ ೩ ರಿಂದ ೫ರ ವರೆಗೆ ಅತ್ಯಂತ ಸಂಭ್ರಮ ಮತ್ತು ಸಡಗರದಿಂದ ಉದ್ಘಾಟಿಸಿ ಅವರು ಮಾತನಾಡಿದರು.
ತಮ್ಮ ಹಿಂದಿನ ಯುವಜನೋತ್ಸವಗಳ ಅನುಭವಗಳನ್ನು ಹಂಚಿಕೊAಡ ಕುಲಪತಿಗಳು, ವಿಶ್ವವಿದ್ಯಾಲಯದ ವಿವಿಧ ಅಂಗಸAಸ್ಥೆಗಳು ರಾಜ್ಯದಾದ್ಯಂತ ವಿಸ್ತರಿಸಿರುವುದರಿಂದ ಈ ಯುವಜನೋತ್ಸವವು ಇಡೀ ಕರ್ನಾಟಕದ ನೈಜ ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರತಿಬಿಂಬಿಸುವ ವೇದಿಕೆಯಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಸುರೇಶ ಚನ್ನಶೆಟ್ಟಿ ಅವರು ಮಾತನಾಡಿ, ವಚನ ಸಾಹಿತ್ಯದ ಮೂಲಕ ಜಗಜ್ಯೋತಿ ಬಸವಣ್ಣನವರು ಕನ್ನಡ ನಾಡು ಮತ್ತು ಸಂಸ್ಕೃತಿಗೆ ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ ಎಂದು ಅಭಿಪ್ರಾಯಪಟ್ಟರು. ಬೀದರ್ ನಗರದ ಸಾಮಾಜಿಕ, ಆರ್ಥಿಕ ಹಾಗೂ ವೈಜ್ಞಾನಿಕ ಬೆಳವಣಿಗೆಗೆ ಪಶುವೈದ್ಯಕೀಯ ಕಾಲೇಜು ಮತ್ತು ವಿಶ್ವವಿದ್ಯಾಲಯ ನೀಡಿದ ಮಹತ್ತರ ಕೊಡುಗೆಯನ್ನು ಸ್ಮರಿಸಿ ಸಂಸ್ಥಾಪಕರಿಗೆ ಕೃತಜ್ಞತೆ ಸಲ್ಲಿಸಿದರು. ಅಲ್ಲದೆ, ಬಸವಣ್ಣನವರ ‘ದಯವೇ ಧರ್ಮದ ಮೂಲವಯ್ಯ’ ಎಂಬ ವಚನದ ಆಶಯವನ್ನು ನೆನಪಿಸುತ್ತಾ, ಮೂಕ ಪ್ರಾಣಿಗಳಿಗೆ ಸೇವೆ ಸಲ್ಲಿಸುವಾಗ ಪಶುವೈದ್ಯರು ಇದೇ ಕರುಣೆ ಹಾಗೂ ದಯಾಭಾವವನ್ನು ಮೂಲ ಮಂತ್ರವನ್ನಾಗಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಪಶುವೈದ್ಯಕೀಯ ಮಹಾವಿದ್ಯಾಲಯದ ಡೀನ್ ರವರಾದ ಡಾ.ಎಂ.ಕೆ.ತಾಗಡಳೆ ಮಾತನಾಡಿ, ಶಿಕ್ಷಣವು ಕೇವಲ ಪಠ್ಯಪುಸ್ತಕಗಳಿಗೆ ಸೀಮಿತವಾಗಿರದೆ, ಕಲೆ, ಸಾಹಿತ್ಯ, ಸಂಗೀತ, ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಪ್ರತಿಭೆ ಮತ್ತು ಸೃಜನಶೀಲತೆ ಮೂಡುತ್ತದೆ ಎಂದರು.

ಬಸವರಾಜ ಪಿ.ಭತಮುರ್ಗೆ ಮಾತನಾಡಿ, ಬೀದರ ನೆಲವು ಶ್ರೀಮಂತ ಸಾಂಸ್ಕೃತಿಕ ಹಿನ್ನೆಲೆಯನ್ನು ಹೊಂದಿದ್ದು, ನಮ್ಮ ವಿಶ್ವವಿದ್ಯಾಲಯವೂ ಸಹ ಅಷ್ಟೇ ಸಾಂಸ್ಕೃತಿಕ ವೈವಿಧ್ಯತೆಯನ್ನು ಹೊಂದಿದೆ ಎಂದು ಶ್ಲಾಘಿಸಿದರು.

ವಿಜಯಕುಮಾರ ಪಾಟೀಲ್ ಮಾತನಾಡಿ, ಯುವಶಕ್ತಿಯ ಮಹತ್ವವನ್ನು ಅರಿತು ಸನಾತನ ಸಂಸ್ಕೃತಿಯನ್ನು ಗೌರವಿಸಬೇಕೆಂದು ಕರೆ ನೀಡಿದರು ಹಾಗೂ ಸಿಬ್ಬಂದಿ ವರ್ಗದವರು ಕುಟುಂಬ ಸಮೇತರಾಗಿ ಈ ಉತ್ಸವದ ಸಾಂಸ್ಕೃತಿಕ ರಸದೌತಣವನ್ನು ಆನಂದಿಸಬೇಕೆAದರು.

ಈ ಸಂದರ್ಭದಲ್ಲಿ ವ್ಯವಸ್ಥಾಪಕ ಮಂಡಳಿಯ ಸದಸ್ಯರಾದ ಡಾ. ಹೆಚ್.ಎಂ.ಜಯಪ್ರಕಾಶ್, ಸಂಗಪ್ಪ ದೊಡ್ಡಬಸಪ್ಪ ವಾಲಿಕಾರ ಮತ್ತು ಶ್ರೀಮತಿ ಸುಮಿತ್ರಾ ದೇವಿ. ಬಿ., ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಪಿ.ಟಿ. ರಮೇಶ್, ಸಂಶೋಧನಾ ನಿರ್ದೇಶಕರಾದ ಡಾ. ಬಿ.ವಿ. ಶಿವಪ್ರಕಾಶ್ ಮತ್ತು ಸ್ನಾತಕೋತ್ತರ ಶಿಕ್ಷಣ ನಿರ್ದೇಶಕರಾದ ಡಾ.ದಿಲೀಪ್ ಕುಮಾರ್ ಉಪಸ್ಥಿತರಿದ್ದರು.