Home ಜಿಲ್ಲೆ ಮುಕ್ತಾಯ ಸಮಾರಂಭ

ಮುಕ್ತಾಯ ಸಮಾರಂಭ

ಕುAದಗೋಳ ಆ.೧೩: ಮೂಲ ನಂಬಿಕೆ-ಮೂಢನAಬಿಕೆ ಬೇರೆ-ಬೇರೆ ಆಗಿದ್ದು, ಮೂಲ ನಂಬಿಕೆಯು ಪ್ರೀತಿ-ಪ್ರಗತಿಯ ಬಿತ್ತುವ ಬೀಜಾಂಕುರವಾಗಿದೆ ಎಂದು ಸಾಹಿತಿ ಡಾ.ಸಂಗಮನಾಥ ಲೋಕಾಪೂರ ಹೇಳಿದರು.


ತಾಲೂಕಿನ ಯಲಿವಾಳದಲ್ಲಿ ಕನ್ನಡ ಜನಪದರ ಜಾನಪದ ಜಗತ್ತು , ಶಂಕರ-ಪಾರ್ವತಿ ಸಾಂಸ್ಕöÈತಿಕ ವೇದಿಕೆ ಹಾಗೂ ಕನ್ನಡ-ಸಂಸ್ಕöÈತಿ ಇಲಾಖೆ ಜಂಟಿಯಾಶ್ರಯದಲ್ಲಿ ನಡೆದ ಗುಳ್ಳವ್ವನ ೪ನೇ ಸುತ್ತಿನ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದ ಮಾತನಾಡಿ ಭಾರತದ ಹಬ್ಬಗಳಿಗೆ ಒಂದೊAದು ಬಗೆ ಅರ್ಥವಿದ್ದು, ಅವು ಬದುಕಿಗೆ ಒಳಿತು ಬಯಸುವ ಉದ್ದೇಶಗಳಾಗಿವೆ ಎಂದರು.


ಜಾನಪದ ವಿವಿ ಪ್ರೊ.ಹಜರೇಸಾಬ ನದಾಫ್, ಕಲಾವಿದ ಕುಬೇರಗೌಡ, ಬಸವರಾಜ ಬಾಗಲ, ಎಸ್ ಎಸ್ ಮುಗಳಿ, ಡಾ.ಬಸಮ್ಮಾ ಹಮ್ಮಿಣಿ, ಮಂಜುಳಾ ಕಾಮಧೇನು, ಗಿರಿಜಾ ಮುಗಳಿ ಸೇರಿದಂತೆ ಅನೇಕರಿದ್ದರು.
ಜಾನಪದ ಕಲಾವಿದ ಡಾ.ರಾಮೂ ಮೂಲಗಿ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಶಿವಾನಂದ ಒಂಭತ್ತರೊಟ್ಟಿ ನಿರೂಪಿಸಿದರು.