
ಲಕ್ಷೆ÷್ಮÃಶ್ವರ,ನ೧೬: ಪಟ್ಟಣದ ದೊಡ್ಡೂರು ರಸ್ತೆಯಲ್ಲಿರುವ ಎಂಜಿಎA ಯೂನಿವರ್ಸಲ್ ಸ್ಕೂಲಿನಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಭಾರತದ ಪ್ರಥಮ ಪ್ರಧಾನ ಮಂತ್ರಿ ಜವಾಹಲಾಲ್ ನೆಹರು ಅವರ ಜನ್ಮ ದಿನಾಚರಣೆಯ ಅಂಗವಾಗಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಉದ್ಘಾಟಿಸಿ ಮಾತನಾಡಿದ ನಿವೃತ್ತ ಶಿಕ್ಷಕ ಸಿಜಿ ಹಿರೇಮಠ ಅವರು ಕನ್ನಡದ ಭಾಷೆಗೆ ತನ್ನದೇ ಆದ ಇತಿಹಾಸವಿದೆ. ಅದರಲ್ಲೂ ಕನ್ನಡ ಸಾಹಿತ್ಯಕ್ಕೆ ಪುಲಿಗೆರೆಯ ಕೊಡುಗೆ ಅಪಾರವಾಗಿದ್ದು ಆದಿ ಕವಿ ಪಂಪ ತಿರುಳು ಗನ್ನಡ ಭಾಷೆಯನ್ನು ನೀಡಿದ್ದು ಕನ್ನಡ ಸಾರ್ವಭೌಮತೆಗೆ ಸಾಕ್ಷಿಯಾಗಿದೆ ಎಂದರು.
ಅವರು ಕನ್ನಡ ಭಾಷೆ ನೆಲ ಜಲ ವಿಷಯದಲ್ಲಿ ಯಾರೂ ರಾಜಕೀಯ ಮಾಡದೆ ಸಮಗ್ರ ಕರ್ನಾಟಕದ ಪರಿಕಲ್ಪನೆಯನ್ನು ಹೊಂದಿ ಕನ್ನಡ ಭಾಷೆ ಏಳಿಗೆಗಾಗಿ ಕರ್ನಾಟಕದ ಅಭಿವೃದ್ಧಿಗಾಗಿ ಎಲ್ಲರೂ ಪಕ್ಷಭೇದ ಮರೆತು ಕೈಜೋಡಿಸಬೇಕು.
ಮಕ್ಕಳಲ್ಲಿ ಭಾಷಾಭಿಮಾನ ಹುಟ್ಟು ಹಾಕಿ ಅವರಲ್ಲಿ ನಮ್ಮ ಸಂಸ್ಕöÈತಿ ಪರಂಪರೆ ಇತಿಹಾಸ ಇವುಗಳ ಬಗ್ಗೆ ಶಿಕ್ಷಕರು ವಿಶೇಷ ಗಮನಹರಿಸಬೇಕು ಎಂದು ಹೇಳಿದರು.
ಮಕ್ಕಳ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿನಿಯರಾದ ಅಕ್ಷಯ ಕಲ್ಲೂರ್ ಸಾನ್ವಿ ಸುಣಗಾರ ಮಕ್ಕಳ ದಿನಾಚರಣೆ ಮಹತ್ವತೆ ಕುರಿತು ಮಾತನಾಡಿ ಜವಾಹರ್ ಲಾಲ್ ನೆಹರುರವರು ತಮ್ಮ ಜನ್ಮದಿನವನ್ನು ಮಕ್ಕಳ ಮೇಲಿನ ಅಪಾರವಾದ ಪ್ರೀತಿ ಮತ್ತು ಪ್ರೇಮದಿಂದ ಮಕ್ಕಳ ದಿನಾಚರಣೆ ಆಚರಿಸುವಂತೆ ಹೇಳಿದ್ದರಿಂದ ಇಂದು ನಾವೆಲ್ಲ ಮಕ್ಕಳ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿ ಬಸವೇಶ್ ಮಹಾಂತ ಶೆಟ್ಟರ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ರಮೇಶನವಲೆ ಸಿ ಆರ್ ಪಿ ಶಿವಾನಂದ ಅಸುಂಡಿ ಪ್ರಾಚಾರ್ಯ ಪುರುಷೋತ್ತಮ್ ಎನ್ ಉಪ ಪ್ರಾಚಾರ್ಯ ಕೆ ಎಸ್ ಕೋಷ್ಟಿ ಹಾಗೂ ಸಿಬ್ಬಂದಿ ವರ್ಗದವರು ಇದ್ದರು.
ಶಿಕ್ಷಕರಾದ ಪುಷ್ಪಾ ನರೇಗಲ್ ಬಿ ಏ ಚೌರಿ ಶಿಮ್ರಾನ್ ಕುಡಚಿ ನಿರ್ವಹಿಸಿದರು.


















