ಕಲಬುರಗಿ: ಕ್ಲಸ್ಟರ್ ಕಿಚನ್ ರಚಿಸಬಾರದು ಹಾಗೂ ಬಿಸಿಯೂಟ ಜವಾಬ್ದಾರಿಯನ್ನು ಸಂಪೂರ್ಣವಾಗಿ ಈಗಿರುವ ಅಡುಗೆ ಸಿಬ್ಬಂದಿಗೆ ವಹಿಸಬೇಕು ಎಂದು ಒತ್ತಾಯಿಸಿ ಅಕ್ಷರ ದಾಸೋಹ ನೌಕರರ ಸಂಘದ ನೇತೃತ್ವದಲ್ಲಿ ಜಿ.ಪಂ.ಕಚೇರಿ ಮುಂದೆ ಇಂದು ಧರಣಿ ಸತ್ಯಾಗ್ರಹ ನಡೆಸಲಾಯಿತು. ಸಂಘದ ಜಿಲ್ಲಾ ಅಧ್ಯಕ್ಷೆ ವಿಜಯಲಕ್ಷ್ಮೀ ಹಿರೇಮಠ, ಕಾರ್ಯದರ್ಶಿ ಸಂಗೀತಾ ಗುತ್ತೇದಾರ, ರೇಖಾ ರಂಗನ್, ನಾಗಮ್ಮ, ಎಂ.ಬಿ.ಸಜ್ಜನ್ ಸೇರಿದಂತೆ ಮತ್ತಿತರರು ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.