Home ಜಿಲ್ಲೆ ಕಲಬುರಗಿ ಕಾರ್ಗಿಲ್ ವಿಜಯೋತ್ಸವ ಆಚರಣೆ

ಕಾರ್ಗಿಲ್ ವಿಜಯೋತ್ಸವ ಆಚರಣೆ

ಕಲಬುರಗಿ,ಜು.27-ಭಾರತ್ ಸ್ಕೌಟ್ಸ್ ಗೈಡ್ಸ್ ಜಿಲ್ಲಾ ಸಂಸ್ಥೆಯಿಂದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮ ಮತ್ತು ಜಾಥಾ ಕಾರ್ಯಕ್ರಮ ಮಾಡಲಾಯಿತು.
ಜಿಲ್ಲಾ ಕೇಂದ್ರ ಕಚೇರಿಯಿಂದ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಬ್ ಬುಲ್ ಬುಲ್ ಸ್ಕೌಟ್ಸ್ ಗೈಡ್ಸ್, ರೂವರ್ ರೇಂಜರ್ಸ್ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಮತ್ತು ಜಿಲ್ಲಾ ಸಂಸ್ಥೆ ಪದಾಧಿಕಾರಿಗಳು ಜಾಥಾದಲ್ಲಿ ಭಾಗವಹಿಸಿದ್ದರು ಜಾಥಾ ಕಾರ್ಯಕ್ರಮವು ನಗರದ ಸುಪರ್ ಮಾರ್ಕೆಟ್‍ನ ಎಂಪಿಎಸ್‍ಹೆಚ್ ಶಾಲೆಯಿಂದ ಪ್ರಾರಂಭವಾಗಿ ತಹಸೀಲ್ದಾರ್ ಕಾರ್ಯಾಲಯದಿಂದ ಜಗತ್ ಸರ್ಕಲ್ ಮತ್ತು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಚೌಕ ಪೂಲೀಸ್ ಸ್ಟೇಷನ್ ಮಾರ್ಗದಿಂದ ಮರಳಿ ಜಿಲ್ಲಾ ಸಂಸ್ಥೆ ಕೇಂದ್ರ ಕಚೇರಿಗೆ ತಲುಪಲಾಯಿತು.
ನಂತರ ಕಾರ್ಗಿಲ್ ವಿಜಯೋತ್ಸವ ಆಚರಣೆ ಮಾಡಲಾಯಿತು. ಜಿಲ್ಲಾ ಸಂಸ್ಥೆ ಕಾರ್ಯದರ್ಶಿ ಪೀರಪ್ಪ ಹೂಗೂಂಡ ಕಾರ್ಗಿಲ್ ವಿಜಯೋತ್ಸವ ಆಚರಣೆ ಕುರಿತು ಪ್ರಾಸ್ತಾವಿಕ ಮಾತನಾಡಿದರು, ನಂತರ ದೇಶ ಸೇವೆ ಸಲ್ಲಿಸಿದ ಸೈನಿಕರಿಗೆ ಜಿಲ್ಲಾ ಸಂಸ್ಥೆಯಿಂದ ಗೌರವಿಸಿ ಸನ್ಮಾನಿಸಲಾಯಿತು ಮತ್ತು ಸೈನಿಕರು ತಮ್ಮ ಹೋರಾಟ ಮತ್ತು ಕಾರ್ಗಿಲ್ ವಿಜಯೋತ್ಸವ ಆಚರಣೆ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ಕಬ್ ಬುಲ್ ಬುಲ್ ಸ್ಕೌಟ್ಸ್ ಗೈಡ್ಸ್ ರೂವರ್ ರೇಂಜರ್ಸ್ 260 ಕ್ಕೂ. ಹೆಚ್ಚು ವಿದ್ಯಾರ್ಥಿಗಳು ಶಿಕ್ಷಕರು ಹಾಗೂ ಪಾಲಕರು ಭಾಗವಹಿಸಿದ್ದರು.
ಸಂಸ್ಥೆಯ ಜಿಲ್ಲಾ ಉಪಾಧ್ಯಕ್ಷ ಸೈಯದ್ ಮೊಹಮ್ಮದ್, ಜಿಲ್ಲಾ ಜಂಟಿ ಕಾರ್ಯದರ್ಶಿ ರಾಜಕುಮಾರ್ ಮರಾಠೆ, ಜಿಲ್ಲಾ ಸಹ ಕಾರ್ಯದರ್ಶಿ ರಾಜಮಾನೆ, ಜಿಲ್ಲಾ ಖಜಾಂಗಿ ಪ್ರಮೀಳಾ ಪಾಟೀಲ್, ಡಿಟಿಸಿ ಅಮರೇಶ ಕೂರಿ, ಸುಮಂಗಲಾ ಕೂರಿ, ಶರೀಫ್ ಹತ್ತಿಮತ್ತೂರ್ ಎ ಎಸ್ ಓ ಸಿ ಶಿಲಿಸಿದ್ದ ಹೂಗಾರ, ಹಿರಿಯ ಶಿಕ್ಷಕ ರಾಜೇಂದ್ರ ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು. ಗುರುಲಿಂಗಯ್ಯ ಕಾರ್ಯಕ್ರಮ ನಿರೂಪಿಸಿದರು. ಜಯಪ್ರಕಾಶ ಸ್ವಾಗತಿಸಿದರು. ಪ್ರಮೀಳಾ ಪಾಟೀಲ ವಂದಿಸಿದರು.