Home ಕ್ರೈಂ ಸುದ್ದಿಗಳು ಸಾಲದ ಬಾಧೆ: ನೇಣಿಗೆ ಶರಣಾದ ರೈತ

ಸಾಲದ ಬಾಧೆ: ನೇಣಿಗೆ ಶರಣಾದ ರೈತ

ವಿಜಯಪುರ, ಜು.19: ಜಿಲ್ಲೆಯ ಇಂಡಿ ತಾಲೂಕಿನ ತಡವಲಗಾ ಗ್ರಾಮದಲ್ಲಿ ಸಾಲದ ಬಾಧೆಯಿಂದ ಮನನೊಂದ ರೈತರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ.
ಪ್ರಾಥಮಿಕ ಮಾಹಿತಿಯಂತೆ, ಮಳೆಯ ಕೊರತೆ ಹಾಗೂ ಸಾಲ ಮರುಪಾವತಿ ಚಿಂತೆಯೇ ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.
ಮೃತರನ್ನು ನಾಗಪ್ಪ ಭೀಮಶ್ಯಾ ಅಥರ್ಗಾ (57) ಎಂದು ಗುರುತಿಸಲಾಗಿದೆ. ಅವರು ತಮ್ಮ ತೋಟದ ವಸತಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕುಟುಂಬದ ಮಾಹಿತಿಯ ಪ್ರಕಾರ, ರೈತರು ಕೋಟಕ್ ಮಹೀಂದ್ರ ಬ್ಯಾಂಕ್‍ನಲ್ಲಿ ?15 ಲಕ್ಷ, ತಡವಲಗಾ ಸಹಕಾರಿ ಸಂಘದಲ್ಲಿ ?65 ಸಾವಿರ ಹಾಗೂ ಖಾಸಗಿಯಾಗಿ ?5 ಲಕ್ಷ ಸಾಲ ಪಡೆದಿದ್ದರು. ಈ ನಡುವೆ ಮಳೆಯ ಕೊರತೆಯಿಂದ ಕಬ್ಬಿನ ಬೆಳೆ ಒಣಗಿ ಭಾರೀ ನಷ್ಟ ಉಂಟಾಗಿದ್ದು, ಸಾಲ ಮರುಪಾವತಿ ಬಗ್ಗೆ ತೀವ್ರ ಚಿಂತೆಯಲ್ಲಿ ಇದ್ದರು ಎನ್ನಲಾಗಿದೆ.
ಘಟನೆ ಕುರಿತು ಹೊರ್ತಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೆÇಲೀಸರು ತನಿಖೆ ನಡೆಸುತ್ತಿದ್ದಾರೆ.
ರೈತನ ಆತ್ಮಹತ್ಯೆ ಹಿನ್ನೆಲೆಯಲ್ಲಿ ಮೃತರ ಕುಟುಂಬಕ್ಕೆ ಸರ್ಕಾರ ತಕ್ಷಣ ಸೂಕ್ತ ಪರಿಹಾರ ನೀಡಬೇಕು ಹಾಗೂ ಕೃಷಿ ಸಾಲ ಮನ್ನಾ ಸೇರಿದಂತೆ ರೈತರಿಗೆ ಅಗತ್ಯ ನೆರವು ಕಲ್ಪಿಸಬೇಕು ಎಂದು ಸ್ಥಳೀಯ ರೈತರು ಆಗ್ರಹಿಸಿದ್ದಾರೆ.