
ಲಕ್ಷೆ÷್ಮÃಶ್ವರ,ನ.೪: ರಾಜ್ಯದಲ್ಲಿ ವಕೀಲರ ಮೇಲೆ ನಡೆಯುತ್ತಿರುವ ಹಲ್ಲೆ ಕೊಲೆ ಕೊಲೆ ಯತ್ನ ಇವುಗಳನ್ನು ಖಂಡಿಸಿ ರ್ನಾಟಕ ರಾಜ್ಯ ವಕೀಲರ ಸಂಘ ನೀಡಿದ್ದ ಕರೆಯ ಮೇರೆಗೆ ಲಕ್ಷೆ÷್ಮÃಶ್ವರ ನ್ಯಾಯವಾದಿಗಳ ಸಂಘವು ನಿನ್ನೆ ಕರ್ಟ್ ಕಲಾಪ ಬಹಿಷ್ಕರಿಸಿ ತಹಶೀಲ್ದಾರ್ ಧನಂಜಯ ಎಂ ಅವರಿಗೆ ಮನವಿ ಸಲ್ಲಿಸಿದರು.
ಮನವಿಯಲ್ಲಿ ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ ಅನ್ನಪರ್ಣೇಶ್ವರಿ ನಗರದ ನ್ಯಾಯವಾದಿ ಮಂಜುನಾಥ್ ಅವರ ಕೊಲೆ ಗೌರಿಬಿದನರಿನಲ್ಲಿ ಸಣ್ಣಕ್ಕಿ ವೆಂಕಟರಮಣಪ್ಪ ಅವರ ಕೊಲೆ ಯತ್ನ ಇವು ಆಘಾತಕಾರಿಯಾಗಿದ್ದು ಈಗಿರುವ ನ್ಯಾಯವಾದಿಗಳ ಸಂರಕ್ಷಣಾ ಕಾನೂನನ್ನು ಮತ್ತಷ್ಟು ಬಲಪಡಿಸಿ ನ್ಯಾಯವಾದಿಗಳಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಲಾಗಿದೆ.
ಮನವಿ ಪತ್ರವನ್ನು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಬಸವರಾಜ ನೇಕಾರ ಸುರೇಶ ನಾವಿ ವಿ. ಎನ್. ಪಶುಪತಿ ಹಾಳ ಬಸವರಾಜ್ ಬಾಳೇಶ್ವರ ಮಠ ಎಸ್ ಪಿ ಬಳಿಗಾರ ಎ ಬಿ ಪಾಟೀಲ ಗೊಂಗಡಿ ವಕೀಲರು ಉಮಾ ಬಳ್ಳಾರಿ ರೇಷ್ಮಾ ಕುರಿ ಶ್ರೀಕಾಂತ ನರಸಮ್ಮನವರ ಗದಗ್ ವಕೀಲರು ಸೇರಿದಂತೆ ಸಂಘದ ಸದಸ್ಯರು ಪಾಲ್ಗೊಂಡಿದ್ದರು





















