Home ಜಿಲ್ಲೆ ಪುಸ್ತಕದ ಕಾಶಿ ಹಾರಕೂಡ ಮಠ; ಪ್ರೊ. ಡಿ. ವಿ. ಪರಶಿವಮೂರ್ತಿ

ಪುಸ್ತಕದ ಕಾಶಿ ಹಾರಕೂಡ ಮಠ; ಪ್ರೊ. ಡಿ. ವಿ. ಪರಶಿವಮೂರ್ತಿ

ಸಂಜೆವಾಣಿ ವಾರ್ತೆ
ಬಸವಕಲ್ಯಾಣ: ಜೂ.೬:ಹಾರಕೂಡ ಮಠ ೧೦೮ ಕೃತಿಗಳನ್ನು ಪ್ರಕಟಿಸಿ ಪುಸ್ತಕದ ಕಾಶಿ ಯಾಗಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊಫೆಸರ್ ಡಿ. ವಿ. ಪರಶಿವಮೂರ್ತಿ ತಿಳಿಸಿದರು.
ತಾಲೂಕಿನ ಹಾರಕೂಡ ಶ್ರೀಮಠದಲ್ಲಿ ಡಾ. ಬಸವರಾಜ ಸಬರದ ಅವರು ರಚಿಸಿದ ಬೀದರ ಜಿಲ್ಲೆಯ ತತ್ವಪದಕಾರರು ಮತ್ತು ತತ್ವಪದ ಸಾಹಿತ್ಯ ಮೀಮಾಂಸೆ ಪ್ರತಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು ಪಂಡಿತರನ್ನು ರಾಜ ಮಹಾರಾಜರನ್ನು ಮೆಚ್ಚಿಸಲಿಕ್ಕೆ ಕಾವ್ಯಗಳನ್ನು ಪುಸ್ತಕಗಳನ್ನು ಬರೆದರು ಬಹಳ ಜನ ಕವಿಗಳಾಗಿದ್ದಾರೆ, ವಿದ್ವಾಂಸರಾಗಿದ್ದಾರೆ, ಆದರೆ ಜನಸಾಮಾನ್ಯರನ್ನು ಕುರಿತು ಬರೆದವರು ೧೨ನೇ ಶತಮಾನದ ಶರಣರು.
ಮನುಷ್ಯ ದೇಹ ಒಂದು ತುಚ್ಛ ಶರೀರ ಎಂದು ಅಲ್ಲ ಬೆಳೆದ ಸಂದರ್ಭದಲ್ಲಿ ಶರಣರು ಮಾನವ ಶರೀರವನ್ನು ವೈಭವಿಕರಿಸಿದರು, ದೇಹವನ್ನು ದೇವಾಲಯಕ್ಕೆ ಹೋಲಿಸಿ ದೇಹವೇ ದೇವಾಲಯ ಎಂದು ಹೇಳಿದರು ಬಸವಾದಿ ಶರಣರಿದ್ದಾರೆಂದು ಹೇಳಿದರು.
ಹಂಪಿ ವಿಶ್ವವಿದ್ಯಾಲಯದ ಶಾಸನ ವಿಭಾಗದ ಮುಖ್ಯಸ್ಥರು ಡಾಕ್ಟರ್ ಅಮರೇಶ ಯತಗಲ್ಲ ಮಾತನಾಡಿ, ನಮ್ಮನ್ನು ನಾವು ಪ್ರೀತಿಸುವ ಮನಸುಳ್ಳವರು ಮಾತ್ರ ಇತರರನ್ನು ಪ್ರೀತಿಸಲು ಸಾಧ್ಯ, ಹಾಗಾಗಿ ತತ್ವಪದಕಾರರು ತಮ್ಮನ್ನು ತಾವು ಪ್ರೀತಿಸಿ ಸಮಾಜವನ್ನು ಪ್ರೀತಿಸಿದರು.
ಸಮಾಜದ ಓರೆ ಕೋರೆಗಳನ್ನು ತಮ್ಮ ಹಾಡುಗಳ ಮುಖಾಂತರ ತಿದ್ದಲು ಪ್ರಯತ್ನಿಸಿದರು.
ತತ್ವಪದಕಾರರಿಗೆ ಪ್ರಭುತ್ವ ಮುಖ್ಯವಾಗಿರಲಿಲ್ಲ, ಜನಸಾಮಾನ್ಯರ ಬದುಕು ಮುಖ್ಯವಾಗಿತ್ತು.
ಕೃತಿಗಳನ್ನು ರಚಿಸಿದ ಡಾ. ಬಸವರಾಜ ಸಬರದ ಅವರು ಮಾತನಾಡಿ, ನಾನು ರಚಿಸಿದ ಕೃತಿ ಹಾರಕೂಡ ಶ್ರೀಮಠದಿಂದ ಪ್ರಕಟಗೊಂಡಿದೆ.
ತಮ್ಮ ಪ್ರಕಾಶನ ಸಂಸ್ಥೆಯಿAದ ಪ್ರಕಟಿಸಿದ ಹಾರಕೂಡ ಹಿರೇಮಠ ಸಂಸ್ಥಾನದ ಪೀಠಾಧಿಪತಿಗಳು ಡಾಕ್ಟರ್ ಚನ್ನವೀರ ಶಿವಾಚಾರ್ಯರಿಗೆ ನಾನು ಕೃತಜ್ಞನಾಗಿದ್ದೇನೆ.
ಪೂಜ್ಯರದು ಮಾತ್ರ ಹೃದಯವಾಗಿದೆ.
ತಾಯಿ ತನ್ನ ಮಕ್ಕಳನ್ನು ಬಹಳ ಪ್ರೀತಿ ವಾತ್ಸಲ್ಯದಿಂದ ಕಾಣುವಂತೆ ಹಾರಕೂಡದ ಡಾ. ಚನ್ನವೀರ ಶಿವಾಚಾರ್ಯರು ಕವಿ, ಸಾಹಿತ್ಯ, ಕಲಾವಿದರನ್ನು ತಮ್ಮ ಮಕ್ಕಳಂತೆ ಕಂಡು ಪ್ರೀತಿಸಿ ಪ್ರೋತ್ಸಾಹಿಸಿ, ಬೆಳೆಸುವವರಾಗಿದ್ದಾರೆ ಎಂದರು.
ಡಾ. ಗವಿಸಿದ್ದಪ್ಪ ಪಾಟೀಲ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು, ಹಾರಕೂಡ ಪಾವನ ಸಾನಿಧ್ಯ ವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ಬಿ. ಕೆ. ಹಿರೇಮಠ ವಿಶ್ರಾಂತ ಉಪ ಕಾರ್ಯದರ್ಶಿಗಳು, ಜಿ. ಪಂ. ಬೀದರ ವಹಿಸಿದ್ದರು.
ಡಾ. ವಿಜಯಶ್ರೀ ಸಬರದ ಸಾಹಿತಿಗಳು, ಬೀದರ,
ಪಿ. ಕೆ. ಹಿರೇಮಠ, ಡಾ. ಶಾಂತಪ್ಪ ಡಂಬಳ,
ಮಲ್ಲಿನಾಥ ಹಿರೇಮಠ ಹಾರಕೂಡ,
ಮೇಘರಾಜ ನಾಗರಾಳೆ, ಸಿದ್ರಾಮಪ್ಪ ಗುದಗೆ ಉಪಸ್ಥಿತರಿದ್ದರು.
ಪ್ರಾರ್ಥನೆ ಕಾರ್ತೀಕ ಸ್ವಾಮಿ ಯಲದಗುಂಡಿ ಮತ್ತು ಶರಣಪ್ಪ ಸುಂಠಾಣ ನಡೆಸಿಕೊಟ್ಟರು.
ಬಸವರಾಜ ಐನೋಳಿ ನಿರೂಪಣೆ ಮಾಡಿದರು.
ಡಾ.ರಾಜಕುಮಾರ ಮಾಳಗೆ ವಂದಿಸಿದರು.
ಚಿತ್ರ : ತಾಲೂಕಿನ ಹಾರಕೂಡ ಶ್ರೀಮಠದಲ್ಲಿ ಡಾ. ಬಸವರಾಜ ಸಬರದ ಅವರು ರಚಿಸಿದ ಬೀದರ ಜಿಲ್ಲೆಯ ತತ್ವಪದಕಾರರು ಮತ್ತು ತತ್ವಪದ ಸಾಹಿತ್ಯ ಮೀಮಾಂಸೆ ಪ್ರತಿಗಳ ಲೋಕಾರ್ಪಣೆ ಸಮಾರಂಭವನ್ನು ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ಜ್ಯೋತಿ ಬೆಳಗಿಸಿ ಉದ್ಘಾಟನೆ ಮಾಡಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಡಿ. ವಿ. ಪರಮಶಿವಮೂರ್ತಿಗಳು, ಡಾ ಅಮರೇಶ ಯತಗಲ್ಲ, ಡಾ. ಬಸವರಾಜ ಸಬರದ, ಬಿ. ಕೆ. ಹಿರೇಮಠ, ಡಾ. ವಿಜಯಶ್ರೀ ಸಬರದ,
ಪಿ. ಕೆ. ಹಿರೇಮಠ,
ಮಲ್ಲಿನಾಥ ಹಿರೇಮಠ ಹಾರಕೂಡ, ಮೇಘರಾಜ ನಾಗರಾಳೆ ಉಪಸ್ಥಿತರಿದ್ದರು.