Home ಜಿಲ್ಲೆ ಬಿಜೆಪಿ ಯುವ ಮೋರ್ಚಾ ವಿಜಯಪುರ ಮಹಾನಗರ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

ಬಿಜೆಪಿ ಯುವ ಮೋರ್ಚಾ ವಿಜಯಪುರ ಮಹಾನಗರ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

ಸಂಜೆವಾಣಿ ವಾರ್ತೆ,
ವಿಜಯಪುರ, ಜೂ. ೧೧:ಪ್ರಧಾನಿ ನರೇಂದ್ರ ಮೋದಿ ಅವರು ಸತತವಾಗಿ ಅತೀ ಹೆಚ್ಚು ಅವಧಿಗೆ (೪೩೯೯ ದಿನಗಳು) ಪ್ರಧಾನ ಮಂತ್ರಿಗಳಾಗಿ ಸೇವೆ ಸಲ್ಲಿಸುತ್ತಿರುವ ಹೆಗ್ಗಳಿಕೆಗೆ ಪಾತ್ರರಾದ ಈ ಸಂದರ್ಭದಲ್ಲಿ ಬಿಜೆಪಿ ಯುವ ಮೋರ್ಚಾ ವಿಜಯಪುರ ಮಹಾನಗರದ ವತಿಯಿಂದ ಬುಧವಾರ ವಾರ್ಡ್ ನಂ. ೦೩ ಭಾವಸಾರ ನಗರದ ವರದಹಸ್ತ ಆಂಜನೇಯ ದೇವಸ್ಥಾನದಲ್ಲಿ ಮತ್ತು ಸರ್ಕಾರಿ ಶಾಲೆ ನಂ ೩೨ರಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಾಗೂ ಸಸಿ ನೆಡುವ ಕಾರ್ಯಕ್ರಮ ಮಾಡಲಾಯಿತು.
ಬಿಜೆಪಿ ವಿಜಯಪುರ ನಗರ ಮಂಡಲ ಅಧ್ಯಕ್ಷ ಸಂದೀಪ ಪಾಟೀಲ ಮಾತನಾಡಿ, ವಿಶ್ವನಾಯಕ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾಗಿ ಭಾರತದ ಇತಿಹಾಸದಲ್ಲಿ ಹೆಚ್ಚಿನ ಅವಧಿ ಪೂರೈಸಿದ್ದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ. ಕಳೆದ ಹನ್ನೆರಡು ವರ್ಷಗಳ ಅವಧಿಯಲ್ಲಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ಅನೇಕ ಜನಪರ ಕೆಲಸಗಳನ್ನು ಮಾಡುತ್ತಿದೆ. ನರೇಂದ್ರ ಮೋದಿ ಕೇವಲ ಭಾರತಕ್ಕಷ್ಟೇ ಸೀಮಿತವಾಗದೆ ವಿಶ್ವದಲ್ಲಿಯೇ ಛಾಪು ಮೂಡಿಸಿದ್ದಾರೆ. ಅವರ ಕನಸಿನ ಕೂಸಾದ ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ಇಂದು ನಾವು ಈ ದೇವಸ್ಥಾನದ ಆವರಣವನ್ನು ಸ್ವಚ್ಛಗೊಳಿಸಲು ಬಂದಿದ್ದೇವೆ. ಅವರ ಆಶಯದಂತೆ ಇನ್ನೂ ಮುಂದೆಯೂ ಬಿಜೆಪಿ ಯುವ ಮೋರ್ಚಾ ವತಿಯಿಂದ ಮಂದಿರ, ಶಾಲೆ, ಸಾರ್ವಜನಿಕ ಸ್ಥಳಗಳ ಸ್ವಚ್ಛತಾ ಕಾರ್ಯ ಹೀಗೆ ಮುಂದುವರೆಯುತ್ತದೆ ಎಂದರು.
ವಿಜಯಪುರ ನಗರ ಮಂಡಲ ಯುವ ಮೋರ್ಚಾ ಅಧ್ಯಕ್ಷ ಆನಂದ ಮುಚ್ಚಂಡಿ ಮಾತನಾಡಿ, ನರೇಂದ್ರ ಮೋದಿ ಅವರ ಆಶಯದಂತೆ ನಾವು ಸ್ವಚ್ಛ ಭಾರತ ಮಿಷನ್ ಅಂಗವಾಗಿ ಇನ್ನು ಮುಂದೆ ತಿಂಗಳಿಗೆ ಎರಡಾದರೂ ದೇವಾಲಯಗಳು ಅಥವಾ ಶಾಲೆಗಳನ್ನು ಸ್ವಚ್ಛಗೊಳಿಸಿ ಸುಂದರ ಪರಿಸರ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸೇವೆ ಸಲ್ಲಿಸುತ್ತೇವೆ. ನರೇಂದ್ರ ಮೋದಿ ಅವರ ಅಧಿಕಾರದ ಹನ್ನೆರಡು ವರ್ಷ ಸಂಪನ್ನಗೊAಡ ಹಿನ್ನೆಲೆಯಲ್ಲಿ ಅವರು ನೀಡಿದ “ಏಕ್ ಪೆಡ್ ಮಾ ಕೆ ನಾಮ್” ಎನ್ನುವ ವಿಚಾರದೊಂದಿಗೆ ನಗರದ ಪ್ರತಿ ವಾರ್ಡ್ ಗಳಲ್ಲಿಯೂ ಸಸಿಗಳನ್ನು ನೆಡುವ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದರು.
ಮುಖAಡರಾದ ಮಹೇಶ ಒಡೆಯರ ಮಾತನಾಡಿ, ಮೂವತ್ತೆದಡು ದೇಶಗಳಿಂದ ಅತ್ಯುತ್ತಮ ನಾಗರಿಕ ಪ್ರಶಸ್ತಿ ಪಡೆದ ಭಾರತದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು ಆರ್ಟಿಕಲ್ ೩೭೦ ರದ್ದು, ನೋಟ್ ಬ್ಯಾನ್ ನಂತಹ ಅನೇಕ ಅಸಾಧ್ಯವೆಂದೇ ಭಾವಿಸಿದ ಕಾರ್ಯಗಳನ್ನು ಮಾಡಿ ಧೀಮಂತ ನಾಯಕನೆನೆಸಿಕೊಂಡಿದ್ದಾರೆ. ಪದೇ ಪದೇ ಭಾರತವನ್ನು ಕೆಣಕುವ ಹೇಡಿ ಪಾಕಿಸ್ತಾನಕ್ಕೆ ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟ್ರೈಕ್, ಹಾಗೂ ಆಪರೇಶನ್ ಸಿಂಧೂರದ ಮೂಲಕ ದಿಟ್ಟ ಪ್ರತ್ಯುತ್ತರ ನೀಡಿ ಭಾರತದ ಶಕ್ತಿ ಏನೆನ್ನುವುದನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಇಂತಹ ಶ್ರೇಷ್ಠ ನಾಯಕನನ್ನು ಪಡೆದದ್ದು ಸಮಸ್ತ ಭಾರತೀಯರ ಅದೃಷ್ಟ. ನರೇಂದ್ರ ಮೋದಿ ಅವರ ಆಶಯದಂತೆ ಸ್ವಚ್ಛ ಭಾರತ ಹಾಗೂ ಸಸಿಗಳನ್ನು ನೆಡುವ ಮೂಲಕ ನಾವು ಸಹ ಅವರ ಆಲೋಚನೆಯೊಂದಿಗೆ ಮುನ್ನಡೆಯೋಣ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಎಸ್.ಸಿ ಮೋರ್ಚಾ ಜಿಲ್ಲಾಧ್ಯಕ್ಷ ಮಂಜುನಾಥ ಮೀಸೆ, ಜಗದೀಶ ಮುಚ್ಚಂಡಿ, ವಿವೇಕ ತಾವರಗೇರಿ, ಜಗದೀಶ ಮನಗೂಳಿ, ಪ್ರಫುಲ್ ಪವಾರ, ಮಂಥನ ಗಾಯಕವಾಡ, ಸಂತೋಷ ಪತ್ತಾರ, ಮಹಾನಗರ ಪಾಲಿಕೆಯ ಸಿಬ್ಬಂದಿಗಳು, ಸ್ವಚ್ಛತಾ ಸಿಬ್ಬಂದಿಗಳು, ಓಣಿಯ ಹಿರಿಯರು ಸೇರಿದಂತೆ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.