Home ಜಿಲ್ಲೆ ಕಲಬುರಗಿ ಶಿವಯೋಗಿ ಸಿದ್ದರಾಮೇಶ್ವರಶ್ರೀಗಳ ಜನ್ಮದಿನಾಚರಣೆ:ಉಚಿತ ಆರೋಗ್ಯ, ನೇತ್ರ ತಪಾಸಣಾ ಶಿಬಿರ

ಶಿವಯೋಗಿ ಸಿದ್ದರಾಮೇಶ್ವರಶ್ರೀಗಳ ಜನ್ಮದಿನಾಚರಣೆ:ಉಚಿತ ಆರೋಗ್ಯ, ನೇತ್ರ ತಪಾಸಣಾ ಶಿಬಿರ

ಕಲಬುರಗಿ,ಸೆ 15: ಕನ್ನಡ ನಾಡಿನ ನಡೆದಾಡುವ ದೇವರು ಎಂದೇ ಪ್ರಸಿದ್ದರಾಗಿರುವ ಜಿಡಾಗಾ ಮುಗಳಖೋಡ ಮಠದ ಪೂಜ್ಯರಾದ ಷಡಕ್ಷರಿ ಲಿಂ. ಶಿವಯೋಗಿ ಸಿದ್ದರಾಮೇಶ್ವರ ಶ್ರೀಗಳ ಹುಟ್ಟು ಹಬ್ಬದ ಪ್ರಯುಕ್ತ ವೆಂಕಟಗಿರಿ ಸೌಹಾರ್ದ ಸಹಕಾರ ನಿಯಮಿತ ಸಂಘದ ವತಿಯಿಂದ ಉಚಿತ ನೇತ್ರ ತಪಾಸಣಾ ಕಾರ್ಯಕ್ರಮ, ಔಷಧಿಯ ಸಸಿಗಳನ್ನು ನೆಡುವುದು ಹಾಗೂ ಆರೋಗ್ಯದ ಅರಿವು ಕುರಿತಾದ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ರವೀಂದ್ರ ವಿಭೂತಿ,ಲೋಹಿತ್ ಕಲ್ಲೂರ,ಸಂಗಮೇಶ ನಾಗನಳ್ಳಿ ಅವರು ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು
ಸೆ. 16 ರಂದು ಬೆಳಗ್ಗೆ 11 ಗಂಟೆಗೆ ಕಲಬುರಗಿ ನಗರದ ಹೊರವಲಯದಲ್ಲಿರುವ ಖಣದಾಳ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ಆಯುರ್ವೇದಿಕ ಮತ್ತು ಔಷಧಿಯ ಗಿಡಗಳನ್ನು ನೆಡಲಾಗುವುದು. ನಂತರ ಪ್ರೌಢಶಾಲೆಯ ಮಕ್ಕಳಿಗೆ ಮತ್ತು ಗ್ರಾಮಸ್ಥರಿಗೆ ಔಷಧಿಯ ಗಿಡಗಳ ಬಗ್ಗೆ ಮಾಹಿತಿಯನ್ನು ತಜ್ಞ ಪರಿಣಿತರಾದ ರಮೇಶ ಮಹೇಂದ್ರಕರ ಹಾಗು ಯೋಗಾ ಕುರಿತು ಪತಂಜಲಿ ಯೋಗ ಸಂಸ್ಥೆಯ ಶಿವಾನಂದ ಸಾಲಿಮಠ ಅವರಿಂದ ಮಾಹಿತಿ ಒದಗಿಸಲಾಗುವುದು.
ಸೆ. 18 ರಂದು ಕೋಟನೂರಿನ ಸಿದ್ದಶ್ರೀ ಡಿವೈನ್ ಪಾಲೇಸ್ (ಕಲ್ಯಾಣ ಮಂಟಪ) ನಲ್ಲಿ ತಜ್ಞ ವೈದ್ಯರಿಂದ ಉಚಿತ ನೇತ್ರ ತಪಾಸಣಾ ಹಾಗೂ ವಿವಿಧ ರೀತಿಯ ಉಚಿತ ಆರೋಗ್ಯದ ಕಾರ್ಯಕ್ರಮದ ಜೊತೆಗೆ ಆವಶ್ಯಕತೆ ಇದ್ದರೆ ನೇತ್ರ ಶಸ್ತ್ರ ಚಿಕಿತ್ಸೆಯನ್ನು ಕೂಡಾ ಮಾಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಕಲಬುರಗಿ ನಗರದ ಅಲ್-ಬದರ್ ಡೆಂಟಲ್ ಕಾಲೇಜ್, ಕಿಡ್ವಾಯ್ ಕ್ಯಾನ್ಸರ್ ಆಸ್ಪತ್ರೆ, ಅನುಗ್ರಹ ಕಣ್ಣಿನ ಆಸ್ಪತ್ರೆ, ಯುನೈಟೆಡ್ ಆಸ್ಪತ್ರೆ, ಜಿಲ್ಲಾ ಕುಷ್ಠರೋಗ ನಿಯಂತ್ರಣಾ ಇಲಾಖೆಯ ಮುಖ್ಯಸ್ಥರು ಈ ಎಲ್ಲಾ ಕಾರ್ಯಕ್ರಮಗಳಿಗೆ ಸಹಭಾಗಿತ್ವ ನೀಡಲಿದ್ದಾರೆ.
ಪವನಕುಮಾರ ವಳಕೇರಿ ರಾಜಕೀಯ ಜೀವನದ ಬೆಳ್ಳಿ ಮಹೋತ್ಸವ:
ಸೆಪ್ಟೆಂಬರ್ 19 ರಂದು ನಂದಿಕೂರು ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷ ಪವನಕುಮಾರ ವಳಕೇರಿ ಅವರ ರಾಜಕೀಯ ಜೀವನದ 25ನೇ ವರ್ಷದ ಬೆಳ್ಳಿ ಮಹೋತ್ಸವದ ಪ್ರಯುಕ್ತ ಅವರ ಅಭಿಮಾನಿಗಳು ಅಭಿನಂದನಾ ಪತ್ರವನ್ನು ಅವರಿಗೆ ನೀಡಿ ಅದ್ದೂರಿಯಾಗಿ ಸನ್ಮಾನಿಸಲಿದ್ದಾರೆ.
ಈ ಎಲ್ಲಾ ಕಾರ್ಯಕ್ರಮದ ಪ್ರಯೋಜನಗಳನ್ನು ನಂದಿಕೂರ, ಖಣದಾಳ, ಸೀತನೂರ ಹಾಗು ಪಾಣೆಗಾಠವ ಸೇರಿದಂತೆ ಸುತ್ತಮುತ್ತಲಿನ ಎಲ್ಲಾ ಗ್ರಾಮಸ್ಥರು ಪಡೆದುಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.ಮಾಹಿತಿಗಾಗಿ ಸಂಪರ್ಕ ( 9945570234, 9060786333)
ಸುದ್ದಿಗೋಷ್ಠಿಯಲ್ಲಿ ಪವನಕುಮಾರ ಬಿ. ವಳಕೇರಿ,ಅನಿತಾ ಪವನಕುಮಾರ ವಳಕೇರಿ ಅವರು ಸೇರಿದಂತೆ ಹಲವರು ಉಪಸ್ಥಿತರಿದ್ದರು.