
ನವದೆಹಲಿ,ಮೇ ೪- ದೇಶದ ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ನಡೆದ ಚುನಾವಣೆಯಲ್ಲಿ ಅಸ್ಸಾಂನಲ್ಲಿ ಬಿಜೆಪಿ, ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಹಾಗು ಪುದುಚೆರಿಯಲ್ಲಿ ಎನ್‌ಡಿಎ ಅಧಿಕಾರ ಹಿಡಿದಿದೆ.
ತೀವ್ರ ಕುತೂಹಲ ಕೆರಳಿಸಿದ್ದ ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆಗೆ ನಡೆದ ಮತ ಎಣಿಕೆ ಪ್ರಗತಿಯಲ್ಲಿದ್ದು ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಹಿಡಿಯುವತ್ತೆ ಹೆಜ್ಜೆ ಇಟ್ಟಿದೆ
ಯುಡಿಎಫ್ ಕಮಾಲ್:
ಕೇರಳಂನಲ್ಲಿ ಕಳೆದ ಮೂರು ಅವಧಿಯಿಂದ ಅಧಿಕಾರದಲ್ಲಿದ್ದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಎಡರಂಗದ ಎಲ್‌ಡಿಎಫ್ ಪಕ್ಷದಿಂದ ಅಧಿಕಾರ ಕಸಿದು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಕಮಾಲ್ ಮಾಡಿದೆ.

ಸದ್ಯದ ಮುನ್ನಡೆ ಪ್ರಕಾರ ಯುಡಿಎಫ್ ೧೪೦ ವಿಧಾನಸಭಾ ಕ್ಷೇತ್ರಗಳ ಪೈಕಿ ಬಹುಮತಕ್ಕೆ ಅಗತ್ಯವಿರುವ ೭೧ ಸ್ಥಾನಗಳನ್ನು ದಾಟಿ ೯೯ ಸ್ಥಾನಗಳಲ್ಲಿ ಮುನ್ನಡೆ ಗಳಿಸಿದೆ. ಎಲ್ ಡಿಎಫ್ ೩೯ , ಬಿಜೆಪಿ- ೨ ಮತ್ತು ಇತರರು ೧೨ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
ಅಸ್ಸಾಂನಲ್ಲಿ ಮತ್ತೆ ಬಿಜೆಪಿ:
ಕಳೆದ ಎರಡು ಅವಧಿಯಿಂದ ಅಧಿಕಾರದಲ್ಲಿರುವ ಬಿಜೆಪಿ ಅಸ್ಸಾಂನಲ್ಲಿ ಮೂರನೇ ಬಾರಿಗೆ ಅಧಿಕಾರ ಹಿಡಯುವತ್ತ ಹೆಜ್ಜೆ ಹಾಕಿದೆ, ೧೨೬ ವಿಧಾನಸಭಾ ಕ್ಷೇತ್ರಗಳ ಪೈಕಿ ಬಹುಮತಕ್ಕೆ ಅಗತ್ಯವಾಗಿರುವ ೬೪ ಸ್ಥಾನಗಳನ್ನು ದಾಟಿ ೧೦೦ ಕ್ಷೇತ್ರಗಳಲ್ಲಿ ಮುನ್ನೆಡೆ ಸಾಧಿಸುವ ಮೂಲಕ ಹ್ಯಾಟ್ರಿಕ್ ಜಯಭೇರಿ ಬಾರಿಸಿದೆ.
ಕಾಂಗ್ರೆಸ್ ಅಧಿಕಾರ ಹಿಡಿಯಬೇಕು ಎನ್ನವು ಆಸೆ ನಿರಾಸೆಯಾಗಿದೆ. ಕೇವಲ ೨೬ ಸ್ಥಾನಗಳಿಗಷ್ಟೇ ಶಕ್ತಿವಾಗಿದೆ, ಎಐಡಿಎಫ್ ೨, ಮತ್ತು ಇತರರು ಒಂದು ಕ್ಷೇತ್ರದಲ್ಲಿ ಮುನ್ನೆಡೆ ಸಾಧಿಸಿದ್ದಾರೆ.
ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತೊಮ್ಮೆ ಈಶಾನ್ಯ ರಾಜ್ಯ ಅಸ್ಸಾಂನಲ್ಲಿ ಮೋಡಿ ಮಾಡಿದ್ದಾರೆ
ಪುದುಚೆರಿಯಲ್ಲಿ ಎನ್‌ಡಿಎ:
ಪುದುಚೆರಿಯಲ್ಲಿ ಎನ್ ಡಿಎ ನೇತೃತ್ವದ ಮೈತ್ರಿಕೂಟ ಮತ್ತೊಮ್ಮೆ ಅಧಿಕಾರ ಹಿಡಿಯುವತ್ತ ಹೆಜ್ಜೆ ಇಟ್ಟಿದೆ, ೩೦ ಕ್ಷೇತ್ರಗಳ ಪೈಕಿ ಆಡಳಿತಾರೂಢ ಎನ್ ಆರ್ ಸಿ ೧೫ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ ಅಧಿಕಾರ ಹಿಡಿಯುವತ್ತ ಹೆಜ್ಜೆ ಇಟ್ಟಿದೆ, ಕಾಂಗ್ರೆಸ್ ೧೧ ಮತ್ತು ಹಾಗೂ ಇತರರು ಮೂರು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.

























