Home ಜಿಲ್ಲೆ ಕಲಬುರಗಿ ವಿವಿಧ ಕಲೆಗಳಿಂದ ಮೆರಗುಗೊಂಡ ” ಜನಪ್ರಿಯ ಸಾಂಸ್ಕøತಿಕ ಸಂಭ್ರಮೋತ್ಸವ “

ವಿವಿಧ ಕಲೆಗಳಿಂದ ಮೆರಗುಗೊಂಡ ” ಜನಪ್ರಿಯ ಸಾಂಸ್ಕøತಿಕ ಸಂಭ್ರಮೋತ್ಸವ “

ಕಲಬುರಗಿ,ಮೇ.4-ಕಲೆಗಳು ನಮ್ಮ ದೈನಂದಿನ ಒತ್ತಡಗಳಿಂದ ಮುಕ್ತಿ ಹೊಂದಲು ಸಹಾಯಕವಾಗುತ್ತವೆ, ಸಮಾಜದಲ್ಲಿನ ಒತ್ತಡವನ್ನು ತಿಳಿಗೊಳಿಸಲು ಇಂಥಹ ಸಾಂಸ್ಕøತಿಕ ಕಾರ್ಯಕ್ರಮಗಳು ಅತ್ಯಾವಶ್ಯಕ ಎಂದು ಬಿ.ಜೆ.ಪಿ ಮಹಿಳಾ ಮೋರ್ಚಾ ದಕ್ಷಿಣ ವಲಯ ಕಲಬುರಗಿಯ ಅಧ್ಯಕ್ಷೆಯಾದ ಜ್ಯೋತಿ ಪಾಟೀಲ್ ಅವರು ಅಭಿಪ್ರಾಯಪಟ್ಟರು.
ಅವರು ಜನಪ್ರಿಯ ಸಾಂಸ್ಕøತಿಕ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದ ಕಲಬುರಗಿ ರಂಗಾಯಣದ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ “ಜನಪ್ರಿಯ ಸಾಂಸ್ಕøತಿಕ ಸಂಭ್ರಮೋತ್ಸವ”ವನ್ನು ಉದ್ಘಾಟಿಸಿ ಮಾತಾನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಚಲನಚಿತ್ರ ನಟ ಡಾ.ವಿಜಯಕುಮಾರ ಗೊತಗಿ ಮಾತನಾಡಿ ಕಲೆಗಳು ಮನರಂಜನೆ ಜೊತೆಗೆ ಮನೋವಿಕಾಶಕ್ಕೆ ಬೇಕಾದ ಅಂಶಗಳನ್ನು ಒದಗಿಸುವ ಕೆಲಸ ಮಾಡುತ್ತವೆ ಆದರಿಂದ ಎಲ್ಲರೂ ತಿಂಗಳಿಗೆ ಒಮ್ಮೆಯಾದರೂ ಇಂಥಹ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಇಡೀ ಕುಟುಂಬದೊಂದಿಗೆ ಪಾಲ್ಗೊಳ್ಳಬೇಕು ಎಂದರು.
ಇನ್ನೊರ್ವ ಮುಖ್ಯ ಅತಿಥಿಗಳಾಗಿ ಖ್ಯಾತ ಚಲನಚತ್ರ ನಟಿ ಹಾಗೂ ಜನಪದ ಆಯುರ್ವೇದ ವೈಧ್ಯರಾದ ಡಾ.ವೀಣಾ ಪಾಟೀಲ್ ಮಾತನಾಡಿ, ಮಕ್ಕಳು ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಪಾಲಕರು ಪ್ರೋತ್ಸಾಹಿಸಬೇಕು, ಕಲೆ, ಸಾಹಿತ್ಯ, ಸಂಸ್ಕøತಿ ಇವೇಲ್ಲವೂಗಳನ್ನು ಈ ಸಮಾಜದಲ್ಲಿ ಪಸರಿಸುವ ಕೆಲಸವನ್ನು ಜನಪ್ರಿಯ ತಂಡ ಹಾಗೂ ಮಠಪತಿಯವರ ಕುಟುಂಬ ಮಾಡ್ತಾ ಇದೆ. ಅವರಿಗೆ ನನ್ನದೊಂದು ಹ್ಯಾಟ್ಸ್‍ಪ್ ಎಂದು ಹೇಳಿ ಅಭಿನಂದನೆ ತಿಳಿಸಿದರು.
ಅತಿಥಿಗಳಾಗಿ ರಂಗಕರ್ಮಿಗಳಾದ ಕಲ್ಯಾಣಿ ಭಜಂತ್ರಿ ಉಪಸ್ಥಿತರಿದರು. ಶಾಂತಲಿಂಗಯ್ಯ ಎಸ್ ಮಠಪತಿ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದರು. ಕಾರ್ಯಕ್ರಮದ ಮೊದಲಿಗೆ ಕು. ಅಕ್ಷರಾ ರಾಜಶೇಖರ ಅಣಕಲ್
ಅವರು ಭರತನಾಟ್ಯವನ್ನು ಪ್ರಧರ್ಶನ ಮಾಡಿದರು. ನಂತರ ಬಸ್ಸಯ್ಯ ಬಿ ಗುತ್ತೆದಾರ ಸುಗಮ ಸಂಗೀತ, ದತ್ತರಾಜ ಕಲ್ಲಶೆಟ್ಟಿ ತತ್ವಪದ ಗಾಯನ ಹಾಗೂ ಸೈದಪ್ಪಾ ಸಪ್ಪನಗೋಳ ಅವರಿಂದ ಜನಪದ ಗಾಯನ
ನೆರೆವೇರಿದವು. ದಾಸವಾಣಿಯನ್ನು ಅಶ್ವಿನಿ ಆರ್ ಮೂಲಗೆ ಆವರು ಹಾಡಿ ಎಲ್ಲರ ಮನಸೆಳೆದರು. ಹಾಗೂ ಜನಪ್ರಿಯ ಸಂಗೀತ ಹಾಗು ನೃತ್ಯ ಶಾಲೆಯಮಕ್ಕಳಿಂದ ಜಾನಪದ ನೃತ್ಯ, ಶಾಸ್ತ್ರೀಯ ನೃತ್ಯ, ವಚನ ಗಾಯನ,
ಭಕ್ತಿಗೀತೆ ಮುಂತಾದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ಪ್ರದರ್ಶನಗೊಂಡು ಎಲ್ಲರ ಗಮನ ಸೆಳೆದರು. ಇವರೆಲ್ಲರಿಗೂ ಅವಧೂತ ಪಾಟೀಲ್ ತಬಲಾ ಸಾಥಿ ನೀಡಿದರು. ಮನಸ್ವಿ ನೃತ್ಯ ತಂಡದಿಂದ
ಜಾನಪದ ನೃತ್ಯ ಪ್ರದರ್ಶಿಸಲಾಯಿತು.
ಗಂಗೋತ್ರಿ ಮಠಪತಿ ನಿರೂಪಿಸಿದರು. ವೇದಕಂಠ ವಂದಿಸಿದರು.ಅಪಾರ ಜನರು ಈ ಸಂಭ್ರಮೋತ್ಸವದಲ್ಲಿ ಪಾಲ್ಗೊಂಡಿದರು.