ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಮಗದ ಗುಂಪು ವಿಮಾ ಯೋಜನೆಯ ಸದಸ್ಯ ಫಲಾನುಭವಿಗಳಲ್ಲಿ ನಿಧನರಾದ ನೌಕರರ ನಾಮನಿರ್ದೇಶಿತರಿಗೆ ಕೆ.ಕೆ.ಆರ್.ಟಿ.ಸಿ ಅಂತರಿಕ ಗುಂಪು ವಿಮಾ ಯೋಜನೆಯಡಿ ಮಂಜೂರಾದ ಪರಿಹಾರ ಚೆಕ್ಕನ್ನು ನಿಗಮದ ಕೇಂದ್ರ ಕಚೇರಿಯಲ್ಲಿಂದು ನಿಗಮದ ಅಧ್ಯಕ್ಷರಾದ ಅರುಣಕುಮಾರ ಪಾಟೀಲ್ ಅವರು, ವಿತರಿಸಿದರು. ನಿಗಮದ ವ್ಯವಸ್ಥಾಪಕ ನಿರ್ದೇಶಕರು, ಮತ್ತು ಸಿಬ್ಬಂದಿಗಳು ಈ ಸಂದರ್ಭದಲ್ಲಿದ್ದರು.