
ಕಲಬುರಗಿ,ಮೇ.4-ಪಂ.ಪಂಚಾಕ್ಷರಿ ಗವಾಯಿಗಳ ಸಂಗೀತ ಕಲಾ ಬಳಗ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಕೋಟನೂರು (ಡಿ)ಯ ಗುರು ಪುಟ್ಟರಾಜ ಸಂಗೀತ ಭವನದಲ್ಲಿ ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಬಹಳ ಯಶಸ್ವಿಯಾಗಿ ನೆರವೇರಿತು.
ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿದ ನರನಾಳ ಸ್ವಂತ ಮಠದ ಶಿವಕುಮಾರ ಶಿವಾಚಾರ್ಯರು ಮಾತನಾಡುತ ಈ ಸಂಸ್ಥೆಯು ಹಲವು ವರ್ಷಗಳಿಂದ ಸಾಮಾಜಿಕ ಹಾಗೂ ಸಂಗೀತ ಕ್ಷೇತ್ರದಲ್ಲಿ ಬಹಳ ಅದ್ಬುತವಾದ ಸಾಧನೆ ಮಾಡಿದೆ ಇಂತ ಸಂಸ್ಥೆಗಳಿಂದ ಸಮಾಜದಲ್ಲಿ ಸಂಗೀತ ಸಾಹಿತ್ಯ ಇನ್ನೂ ಜೀವಂತವಾಗಿವೆ ಮತ್ತು ಇಂಥ ಕಾರ್ಯಕ್ರಮಗಳಿಂದ ಸಮಾಜ ಸುಧಾರಣೆಯಾಗುತ್ತದೆ ಎಂದರು.
ಉದ್ಘಾಟನೆ ಮಾಡಿ ಮಾತನಾಡಿದ ಎಸ್ ಪಿ ಸುಳ್ಳದ ರವರು ಇಂತಹ ಕಾರ್ಯಕ್ರಮಗಳಲ್ಲಿ ಯುವ ಜನತೆಯ ಭಾಗವಹಿಸಬೇಕು, ಈಗಿನ ಯುವ ಜನತೆಯ ಕೇವಲ ಟಿವಿ ಮೊಬೈಲ್ ನಂತಹ ಮಾಧ್ಯಮಗಳಲ್ಲಿ ಮುಳುಗಿ ಹೋಗಿದ್ದಾರೆ, ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರೆ ಅವರಿಗೂ ಮನ ಶಾಂತಿ ದೊರೆಯುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಾಬುರಾವ ಕೋಬಲ್ ರವರು ಮಾತನಾಡಿ, ಪುಟ್ಟರಾಜ ಗವಾಯಿಗಳ ಆಶೀರ್ವಾದ ದಿಂದ ನಮ್ಮ ದೇಶದಲ್ಲಿ ಅಂಧ ಅನಾಥರ ಬಾಳಿಗೆ ಸಂಗೀತ ಬೆಳಕಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಸಿದ್ರಾಮಪ್ಪ ಪೆÇಲೀಸ್ ಪಾಟೀಲ ರವರು ಮಾತನಾಡಿ ಸಂಸ್ಥೆ ನಡೆದುಬಂದ ಹಾದಿಯಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಬಸವರಾಜ ಸಾಲಿ, ಸೂರ್ಯಕಾಂತ ಡುಮ್ಮ, ಪಲ್ಲವಿ ಶಿವಣಗಿ, ಕು. ಆಯುಷ್ ಗೌಡ, ಮಹಾಂತಪ್ಪ ಹಡಗಿಲ್ ಹಾರುತಿ, ಮಹೇಶ್ ಪಾಟೀಲ್, ಚೇತನ್, ಗುರು ಬಿರಾದಾರ, ವಿನೋದ್ ರವರು ಸಂಗೀತ ಕಾರ್ಯಕ್ರಮವನ್ನು ನೀಡಿದರು, ಶರಣಬಸವೇಶ್ವರ ಭಜನಾ ಸಂಘ ಶರಣ ಶಿರಸಿಗಿ ಭಜನಾ ಗೀತೆಗಳನ್ನು ಹಾಡಿದರು. ಕು. ಪೂರ್ಣಿಮಾ ಶಿವಣಗಿ ಮತ್ತು ಸಂಗಡಿಗರು ಭರತನಾಟ್ಯ ಮಾಡಿದರು. ಸಂಗೀತಕ್ಕೆ ಮಹಾಂತೇಶ ಹರವಾಳ ತಬಲಾ ಸಾಥ್ ನೀಡಿದರು ಎಂದು ಸಂಸ್ಥೆಯ ಅಧ್ಯಕ್ಷರಾದ ಸುಮಂಗಲ ಎಸ್ ಪಾಟೀಲ ರವರು ಪತ್ರಿಕೆ ಪ್ರಕಟಣೆಗೆ ತಿಳಿಸಿದ್ದಾರೆ.






















