Home ಜಿಲ್ಲೆ ಹುನ್ನೂರಿನಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಅಂಗವಾಗಿ ಅಷ್ಟೋತ್ತರ ಪಾರಾಯಣ

ಹುನ್ನೂರಿನಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಅಂಗವಾಗಿ ಅಷ್ಟೋತ್ತರ ಪಾರಾಯಣ

ಜಮಖಂಡಿ: ಸಮೀಪದ ಹುನ್ನೂರು ಗ್ರಾಮದ ಗ್ರಾಮಸಹಿತ ಹೊಸ ಬಡಾವಣೆಯ ಬ್ರಾಹ್ಮಣ ಸಂಘದ ವತಿಯಿಂದ ಶ್ರೀ ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವದ ಅಂಗವಾಗಿ ಆಗಸ್ಟ್ 1ರಿಂದ 28ರವರೆಗೆ ವಿಶೇಷ ಅಷ್ಟೋತ್ತರ ಪಾರಾಯಣ ಕಾರ್ಯಕ್ರಮವನ್ನು ಭಕ್ತಿಭಾವದಿಂದ ನೆರವೇರಿಸಲಾಯಿತು.

ಬಡಾವಣೆಯ 25ಕ್ಕೂ ಹೆಚ್ಚು ಮನೆಗಳಲ್ಲಿ ನಡೆದ ಈ ಪವಿತ್ರ ಕಾರ್ಯಕ್ರಮದಲ್ಲಿ ಪ್ರತಿ ಮನೆಯಲ್ಲಿ 9 ಆವೃತ್ತಿಗಳಂತೆ ಒಟ್ಟು 225 ಅಷ್ಟೋತ್ತರ ಪಾರಾಯಣಗಳು ಸಂಪೂರ್ಣಗೊಂಡವು. ಶ್ರೀಗುರುಸಾರ್ವಭೌಮರ ಅಷ್ಟೋತ್ತರ ಮಾಲಿಕೆಯ ಪಾರಾಯಣವು ಯಾವುದೇ ವಿಘ್ನವಿಲ್ಲದೆ ಯಶಸ್ವಿಯಾಗಿ ನೆರವೇರಿತು.

ಪಾರಾಯಣ ಕಾರ್ಯಕ್ರಮದಲ್ಲಿ ರಾಘವೇಂದ್ರ ಉಮರ್ಜಿ, ಶ್ರೀಪೂರ್ಣಬೋಧಾಚಾರ್ಯ ಬೀಡಕರ, ವಾದಿರಾಜ ಗಲಗಲಿ, ಅಶೋಕ ಕುಲಕರ್ಣಿ, ರಾಘವೇಂದ್ರ ಕುಲಕರ್ಣಿ, ಶ್ರೀನಿವಾಸ ದೇಶಪಾಂಡೆ, ಅರವಿಂದ ಕಾರಜೋಳ, ನಾಗೇಂದ್ರ ಕುಲಕರ್ಣಿ, ರಾಜೇಂದ್ರ ದೇಶಪಾಂಡೆ, ಲಕ್ಷ್ಮೀಶ ಮಣ್ಣೂರ, ಕಲ್ಯಾಣರಾವ ಕುಲಕರ್ಣಿ, ರಾಘವೇಂದ್ರ ಥಿಟೆ, ಶ್ರೀನಿವಾಸ ಪುರೋಹಿತ, ಕೃಷ್ಣಾ ಶೇಕದಾರ, ರಾಮಮೂರ್ತಿ ದೇಶಪಾಂಡೆ, ವಿಠ್ಠಲ ಉಮರ್ಜಿ, ಅನೀಲ ಶುಕ್ಲೆ, ರಾಘವೇಂದ್ರ ತೇರದಾಳ, ಸುರೇಶ ಶುಕ್ಲೆ, ಕೃಷ್ಣಾ ಕುಲಕರ್ಣಿ ಸೇರಿದಂತೆ ಅನೇಕ ಭಕ್ತರು ಭಾಗವಹಿಸಿ ಶ್ರೀಗುರು ರಾಘವೇಂದ್ರ ಸ್ವಾಮಿಗಳ ಕೃಪೆಗೆ ಪಾತ್ರರಾದರು.

ಈ ಪವಿತ್ರ ಧಾರ್ಮಿಕ ಕಾರ್ಯಕ್ಕೆ ಸಹಕಾರ ನೀಡಿದ ಎಲ್ಲ ಭಕ್ತರು ಹಾಗೂ ಸಂಘದ ಸದಸ್ಯರಿಗೆ ಬ್ರಾಹ್ಮಣ ಸಂಘದ ಅಧ್ಯಕ್ಷ ರಾಘವೇಂದ್ರ ಉಮರ್ಜಿ ಅಭಿನಂದನೆ ಸಲ್ಲಿಸಿದ್ದಾರೆ.