Home ಜಿಲ್ಲೆ ಕಲಬುರಗಿ ಕಲಬುರಗಿ ಜೈಲಿನಿಂದ ಪರಾರಿಯಾಗಿದ್ದ ಮತ್ತೊಬ್ಬ ಕೈದಿ ಬಂಧನ

ಕಲಬುರಗಿ ಜೈಲಿನಿಂದ ಪರಾರಿಯಾಗಿದ್ದ ಮತ್ತೊಬ್ಬ ಕೈದಿ ಬಂಧನ

ಕಲಬುರಗಿ,ಜು.19-ನಗರ ಹೊರವಲಯದಲ್ಲಿರುವ ಕಲಬುರಗಿ ಕೇಂದ್ರ ಕಾರಾಗೃಹದಿಂದ ಜು.14 ರಂದು ಪರಾರಿಯಾಗಿದ್ದ ಸಜಾ ಕೈದಿ ಸಾಗರ್ ಭೀಮರಾಯ ಹೊಸಮನಿ (26)ಯನ್ನು ಭಾಲ್ಕಿ ಬಸ್ ನಿಲ್ದಾಣದ ಸಮೀಪ ಶನಿವಾರ ಸಂಜೆ ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬೇರೆ ಬೇರೆ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಬೀದರ್ ಜಿಲ್ಲೆಯ ಸಂತೋಷ ಬಸಪ್ಪ, ಮಸ್ತಾನ್ ಮಾಣಿಕಪ್ಪ ಹಾಗೂ ಸಾಗರ ಭೀಮರಾಯ ಹೊಸಮನಿ ಜು.14ರ ನಸುಕಿನಜಾವ ಜೈಲಿನಿಂದ ಪರಾರಿಯಾಗಿದ್ದರು.
ಜೈಲಿನಿಂದ ಪರಾರಿಯಾಗಿದ್ದ ಕೈದಿಗಳ ಪತ್ತೆಗೆ ಕಲಬುರಗಿ ಮತ್ತು ಬೀದರ್ ಜಿಲ್ಲೆಯ ಪೊಲೀಸ್ ತಂಡಗಳು ತೀವ್ರ ಶೋಧಕಾರ್ಯ ಆರಂಭಿಸಿದ್ದವು. ಬುಧವಾರ ನಗರದ ಕೈಗಾರಿಕಾ ಪ್ರದೇಶದಲ್ಲಿ ಸಂತೋಷ ಬಸಪ್ಪನನ್ನು ಪೊಲೀಸರು ಬಂಧಿಸಿದ್ದರು. ಇನ್ನುಳಿದ ಇಬ್ಬರ ಕೈದಿಗಳ ಪತ್ತೆಗೆ ಪೊಲೀಸರು ತೀವ್ರ ಶೋಧ ನಡೆಸಿದ್ದರು. ಸಾಗರ್ ಭಾಲ್ಕಿ ಕಡೆಗೆ ಬರುತ್ತಿದ್ದಾನೆ ಎಂಬ ಖಚಿತ ಮಾಹಿತಿ ದೊರೆದೊರೆತ ಹಿನ್ನೆಲೆಯಲ್ಲಿ ಪೆÇಲೀಸರು ಮುಂಜಾನೆಯಿಂದಲೇ ಬಲೆ ಬೀಸಿದ್ದರು. ಸಂಜೆ ವೇಳೆಗೆ ಆತನನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಭಾಲ್ಕಿ ನಗರ ಪೆÇಲೀಸ್ ಠಾಣೆಯ ಪೇದೆ ಮಹೇಶ್, ಧನ್ನೂರು ಪೆÇಲೀಸ್ ಠಾಣೆಯ ಪೇದೆ ಹರ್ಷವರ್ಧನ್ ಹಾಗೂ ಡಿಎಆರ್ ಪೆÇಲೀಸ್ ಪೇದೆ ಮಹಾದೇವ ಹೀರೆಮಠ್ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಕೈದಿಯನ್ನು ಬಂಧಿಸಿದ್ದಾರೆ.
ಘಟನೆ ಹಿನ್ನೆಲೆ: ಕಲಬುರಗಿ ಕೇಂದ್ರ ಕಾರಾಗೃಹದಿಂದ ಜುಲೈ 14ರ ನಸುಕಿನಜಾವ ಸಜಾ ಕೈದಿಗಳಾದ ಸಾಗರ್, ಸಂತೋಷ್ ಹಾಗೂ ಮಸ್ತಾನ್ ಎಂಬ ಮೂವರು ಪರಾರಿಯಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತೋಷ್‍ನನ್ನು ಈಗಾಗಲೇ ಬಂಧಿಸಲಾಗಿದ್ದು, ಇದೀಗ ಸಾಗರ್ ಕೂಡ ಪೆÇಲೀಸರ ಬಲೆಗೆ ಬಿದ್ದಿದ್ದಾನೆ. ಪರಾರಿಯಾಗಿರುವ ಮೂರನೇ ಕೈದಿ ಮಸ್ತಾನ್ ಪತ್ತೆಗೆ ವ್ಯಾಪಕ ಶೋಧ ಕಾರ್ಯ ಮುಂದುವರಿಸಲಾಗಿದೆ ಎಂದು ಪೆÇಲೀಸ್ ಮೂಲಗಳು ತಿಳಿಸಿವೆ.