
ಬಾದಾಮಿ,ಅ.೨೮: ವ್ಯಾಪಾರದಿಂದ ನಾವು ಬಣಜಿಗರು, ರಾಜಕೀಯವಾಗಿ ಹಲವರು ರಾಜ್ಯದ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಸಮಸಮಜಾವನ್ನು ಒಗ್ಗೂಡಿಸಿಕೊಂಡು ಹೋಗುವ ನಾವೆಲ್ಲ ಒಗ್ಗಟ್ಟಿನೊಂದಿಗೆ ಸಮಾಜವನ್ನು ಕಟ್ಟಬೇಕು. ಆಧುನಿಕ ಯುಗದಲ್ಲಿ ಮಕ್ಕಳಿಗೆ ಶಿಕ್ಷಣ ಕೊಡಿಸುವ ಜತೆಗೆ ನಾವು ಸಂಸ್ಕಾರವನ್ನು ಕಲಿಸಬೇಕು ಎಂದು ಮಾಜಿ ಸಂಸದ ರಮೇಶ ಕತ್ತಿ ಹೇಳಿದರು.
ಇಲ್ಲಿಯ ವೀರಪುಲಿಕೇಶಿ ವಿದ್ಯಾ ಸಂಸ್ಥೆಯ ಬಸವ ಭವನದಲ್ಲಿ ಬಾದಾಮಿ ತಾಲೂಕ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘದಿAದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ, ಗಣ್ಯರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬಣಜಿಗರು ತಕ್ಕಡಿ ಹಿಡಿದು ಬದುಕಿದರೆ ನಮ್ಮ ಧರ್ಮವನ್ನು ಪೂಜಿಸುವುದರ ಜತೆಗೆ ಅಣ್ಯ ಧರ್ಮಗಳನ್ನು ಗೌರವಿಸುವುದು ಕೂಡ ಬಣಜಿಗರ ಶ್ರೇಷ್ಟತೆಯಲ್ಲಿ ಒಂದಾಗಿದೆ. ಸಮಾಜದ ಸಂಘಟಿತರಾಗಿ ರಾಜಕೀಯವಾಗಿ ಪ್ರಾತಿಣದ್ಯ ಪಡೆಯುವುದರ ಜತೆಗೆ ವಿವಿಧ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಲು ಸಾಧ್ಯವಿದೆ ಎಂದು ಹೇಳಿದ ಅವರು ವೀರಶೈವ ಲಿಂಗಾಯತಕ್ಕೆ ಹಾನಗಲ್ ಕುಮಾರ ಶ್ರೀಗಳ ಕೊಡುಗೆ ಅಪಾರವಿದೆ ಎಂದರು.
ವೀರಶೈವ ಲಿಂಗಾಯತದಲ್ಲಿ ಬರುವ ಒಳ ಪಂಗಡಗಳು ಕುಲಕಸಬುಗಳ ಆಧರಿಸಿ ಆಚರಣೆಗಳಿದ್ದೇ ವಿನಹ ಅವು ಎಲ್ಲವೂ ಕಾಯಕದ ರೂಪಗಳಾಗಿವೆ. ಇವೆಲ್ಲವನ್ನು ಒಗ್ಗೂಡಿಸಿಕೊಂಡು ಶಕ್ತಿಯನ್ನಾಗಿ ಪರಿವರ್ತಿಸಿ ವೀರಶೈವ ಲಿಂಗಾಯತ ಸಮುದಾಯದ ಪ್ರಭಾವ ಮತ್ತು ಶಕ್ತಿಯನ್ನು ನಮ್ಮ ಸಂಘಟನಾ ಬಲದಿಂದ ತೋರಿಸಬೇಕಾದ ಅವಶ್ಯಕತೆ ಮತ್ತು ಅನಿವಾರ್ಯತೆ ಎದುರಾಗಿದೆ. ಇದಕ್ಕೆ ಪೂರಕವಾಗಿ ಸಮಾಜ ಬಾಂಧವರು ಸಂಘಟಿತರಾಗುವAತೆ ಕರೆ ನೀಡಿದರು.
ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ ಬಣಜಿಗ ಸಮಾಜದ ಮಹಿಳಾ ಘಟಕ, ಎ.ಸಿ.ಪಟ್ಟಣದ ನಿವೃತ್ತ ನೌಕರರ ಘಟಕವನ್ನು ಉದ್ಘಾಟಿಸಿ ಮಾತನಾಡಿ ವೀರಪುಲಿಕೇಶಿ ಸಹಕಾರಿ ಬ್ಯಾಂಕ್, ವಿದ್ಯಾ ಸಂಸ್ಥೆ ಈ ಎರಡೂ ಸಂಸ್ಥೆಗಳು ಸಮಾಜದ ಜತೆಗೆ ಉಳಿದ ಸಮುದಾಯಗಳ ಶ್ರೇಯೋಭಿವೃದ್ಧಿಗೆ ಸದಾ ಶ್ರಮಿಸುತ್ತಿವೆ. ಇದನ್ನು ನಮ್ಮ ಪೂರ್ವಿಕರು ಹುಟ್ಟುಹಾಕಿದ್ದು ಸ್ಮರಿಸುವಂತದ್ದಾಗಿದೆ ಎಂದರು.
ಪಿಕಾರ್ಡ ಬ್ಯಾಂಕ್ ಅಧ್ಯಕ್ಷ ಮಹಾಂತೇಶ ಮಮದಾಪೂರ ಮಾತನಾಡಿ ನಮ್ಮ ಹಾಗೂ ಪಟ್ಟಣಶೆಟ್ಟಿ ಅವರ ಒಗ್ಗಟ್ಟು ಕೆಲವರಿಗೆ ರಾಜಕೀಯವಾಗಿ ಸಹಿಸಲಾಗುತ್ತಿಲ್ಲ. ಸಮಾಜದ ಹಿತದೃಷ್ಟಿಯಿಂದ ನಾವುಗಳು ಒಗ್ಗಟ್ಟಾಗಿ ಪ್ರತಿ ಸವಾಲುಗಳನ್ನು ಎದುರಿಸಿ, ಅದರಲ್ಲಿ ಯಶಸ್ವಿಯಾಗಿ ಸಮಾಜದ ಸಂಘಟನೆ ಹಾಗೂ ಕ್ಷೇತ್ರಕ್ಕೆ ಕೊಡುಗೆ ನೀಡಲು ಸದಾ ಸಿದ್ದರಿದ್ದೇವೆ ಎಂದರು. ಸಮಾಜದ ಜಿಲ್ಲಾಧ್ಯಕ್ಷ ಹೊಳಬಸಪ್ಪ ಬಾಳಶೆಟ್ಟಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಸಮಾಜದ ಅಧ್ಯಕ್ಷ ಡಾ. ಅವಿನಾಶ ಮಮದಾಪೂರ ಮಾತನಾಡಿ ನಮ್ಮ ಬಣಜಿಗ ಸಮಾಜದ ಅಸ್ತಿತ್ವದ ಬಗ್ಗೆ ಕೆಲವರಲ್ಲಿ ಸಂಶಯವಿದ್ದು ಅದನ್ನು ನಿವಾರಿಸುವ ಕೆಲಸವನ್ನು ಈ ವೇದಿಕೆ ಮೂಲಕ ಮಾಡಲಾಗುತ್ತಿದ್ದು, ನಾವು ಜೈನ ಸಮುದಾಯದವರಲ್ಲ ಆದರೆ ಜೈನ ಸಮುದಾಯದ ಉಚ್ಛರಾಯ ಸ್ಥಿತಿಯಲ್ಲಿ ಇದ್ದಾಗ ಅವರ ನೆರವು ಪಡೆದವರು. ಇದಕ್ಕೆ ಪ್ರತಿಯಾಗಿ ನಾವು ಕೂಡ ಜೈನ ಸಮುದಾಯದ ಬಸದಿಗಳ ನಿರ್ಮಾನದಲ್ಲಿ ಅಪಾರ ಪ್ರಮಾಣದ ಕೊಡುಗೆಯನ್ನು ನೀಡಿರುವ ಬಗ್ಗೆ ಇತಿಹಾಸ ಮತ್ತು ಶಿಲಾ ಶಾಸನಗಳಲ್ಲಿ ಉಲ್ಲೇಖವಿದೆ ಎಂದರು.
ಶಿರೋಳದ ಶಂಕರಾರೂಢ ಸ್ವಾಮಿಜಿ ಆಶಿರ್ವಚನ ನೀಡಿದರು. ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶ್ರೀಮತಿ ಸವಿತಾ ಅಂಗಡಿ, ಬಿ.ಎಂಟೆAಗಿನಕಾಯಿ, ಚನಮಲ್ಲಪ್ಪ ಘಟ್ಟದ ಇದ್ದರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಸಾಧಕರಿಗೆ ಸನ್ಮಾನಿಸಿದರು. ಬಿ.ಸಿ.ಪ್ಯಾಟಿ ನಿರೂಪಿಸಿ, ವಂದಿಸಿದರು. ಐನೂರಕ್ಕೆ ಹೆಚ್ಚು ಸಮಾಜ ಬಾಂಧವರು ಪಾಲ್ಗೊಂಡಿದ್ದರು.






















