
ಬೀದರ್: ಜಿಲ್ಲಾ ಕೇಂದ್ರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣಕ್ಕೆ ನಿವೇಶನ ಮಂಜೂರು ಮಾಡಬೇಕು ಎಂದು ಹಮಿಲಾಪುರದ ದಿ ಬುದ್ಧ ಯುತ್ ಕ್ಲಬ್ ಅಧ್ಯಕ್ಷ ಮಹೇಶ ಎಸ್. ರಾಂಪುರೆ ಒತ್ತಾಯಿಸಿದ್ದಾರೆ.
ಈ ಕುರಿತು ನಗರದಲ್ಲಿ ಸೋಮವಾರ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಸಮಾಜ ಕಲ್ಯಾಣ ಇಲಾಖೆಯಿಂದ ಭವನಕ್ಕೆ ಈಗಾಗಲೇ ರೂ. ೪ ಕೋಟಿ ಅನುದಾನ ಮಂಜೂರಾಗಿದೆ. ಆದರೆ, ನಿವೇಶನ ಲಭ್ಯ ಇಲ್ಲದ ಕಾರಣ ಅದನ್ನು ತಡೆ ಹಿಡಿಯಲಾಗಿದೆ ಎಂದು ತಿಳಿಸಿದ್ದಾರೆ.
ಕೂಡಲೇ ನಾಲ್ಕು ಎಕರೆ ಜಮೀನು, ಹೆಚ್ಚುವರಿ ರೂ. ೧೦೦ ಕೋಟಿ ಒಳಗೊಂಡAತೆ ಒಟ್ಟು ರೂ. ೧೦೪ ಕೋಟಿ ಅನುದಾನ ಮಂಜೂರು ಮಾಡಿ, ಭವನ ನಿರ್ಮಿಸಬೇಕು ಎಂದು ಆಗ್ರಹಿಸಿದ್ದಾರೆ.





















