
ಬೀದರ:ಮೇ.9: ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಬೃಹತ್
ಸನ್ಮಾನ ಕಾರ್ಯಕ್ರಮವನ್ನು ಪೂಜ್ಯ ಡಾ.ಚನ್ನಬಸವ ಪಟ್ಟದೇವರು ರಂಗಮಂದಿರ ಬೀದರನಲ್ಲಿ
ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಚಂದ್ರಕಾಂತ ಶಾಬಾದ್ಕರ್ ಡಿ.ಡಿ.ಪಿ. ಯುಮಾತನಾಡಿ ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶಕ್ಕಾಗಿ ಪ್ರಶಂಸಿಸಿದ್ದಾರೆ.ಮಕ್ಕಳಿಗೆ
ಒಳ್ಳೆಯ ವಿದ್ಯಾಭ್ಯಾಸದ ಮಾರ್ಗಗಳನ್ನು ಆಯ್ಕೆ ಮಾಡುವಲ್ಲಿ ಮಾರ್ಗದರ್ಶನ ನೀಡಿದರು. ಈ
ಸಂಸ್ಥೆಯು ಪಿ.ಯು.ಬೋರ್ಡನ ಎಲ್ಲಾ ನಿಯಮಗಳನ್ನು ಪಾಲಿಸುತ್ತದೆ ಮತ್ತು ಅತ್ಯುತ್ತಮ
ಸಹಕಾರವನ್ನು ನೀಡುವ ಒಂದು ಕಾಲೇಜಾಗಿದೆ ಎಂದು ಪ್ರಶಂಸಿಸಿದ್ದಾರೆ. ಅಧ್ಯಕ್ಷರಿಗೆ
ಉತ್ತಮ ಫಲಿತಾಂಶಕ್ಕಾಗಿ ಅಭಿನಂದಿಸಿದ್ದಾರೆ. ಕೇವಲ ವಿಸಡಮ್ ಸಂಸ್ಥೆಯ ಮಕ್ಕಳಿಗಲ್ಲದೆ
ಇಡಿ ಬೀದರ ಜಿಲ್ಲೆಯ ಎಸ್.ಎಸ್.ಎಲ್.ಸಿ.ಸಾಧಕರಿಗೆ ಆಹ್ವಾನಿಸಿ ಸನ್ಮಾನಿಸುತ್ತಿರುವುದು
ಪ್ರಶಂಸಾರ್ಹವಾಗಿದೆ ಎಂದು ಹೇಳಿದರು.
ರೇವಣಸಿದ್ದಪ್ಪ ಜಲಾದೆ ರಾಜ್ಯಧ್ಯಕ್ಷರು ಖಾಸಗಿ ಅನುದಾನ ರಹಿತ ಶಾಲಾ ಆಡಳಿತ ಮಂಡಳಿ
ಬೆಂಗಳೂರು ಇವರು ಮಾತನಾಡಿ ಮುಹಮ್ಮದ ಆಸಿಫುದ್ದಿನ್ ಅವರು ಎಸ್.ಎಸ್.ಎಲ್.ಸಿ
ಪರೀಕ್ಷೆಯಲ್ಲಿಉತ್ತೀರ್ಣರಾದ ಬೀದರ ಜಿಲ್ಲೆಯ ಸರ್ಕಾರಿ, ಅನುದಾನಿತ, ಅನುದಾನ ರಹಿತ
ಕನ್ನಡ, ಉರ್ದು, ಇಂಗ್ಲೀಷ, ಮರಾಠಿ ಮಾಧ್ಯಮದ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ
ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವಾಗಿದೆ ಎಂದು ಹೇಳುತ್ತ ಸಂಸ್ಥೆಯ
ಅಧ್ಯಕ್ಷರಿಗೆ ಅಭಿನಂದಿಸಿದರು.
ವಿಸ್ಡಮ್ ಸಮೂಹ ಸಂಸ್ಥೆಯ ಅಧ್ಯಕ್ಷರಾದ ಮುಹಮ್ಮದ ಆಸಿಫುದ್ದಿನ್ಅವರು ಮಾತನಾಡಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿಉತ್ತೀರ್ಣರಾದ ವಿದ್ಯಾರ್ಥಿಗಳಿಗೆ
ಶಿಕ್ಷಕರಿಗೆ, ಖ್ಯೋಪಾದ್ಯಾಯರಿಗೆ ಹಾಗು ಶಾಲಾ ಆಡಳಿತ ಮಂಡಳಿಯವರಿಗೆ ಈ
ಫಲಿತಾಂಶಕ್ಕಾಗಿ ಹೃತ್ಪೂರ್ವಕವಾಗಿ ಅಭಿನಂದಿಸಿದರು.
ಬೀದರ ಜಿಲ್ಲೆಯ 70ಕ್ಕಿಂತ ಹೆಚ್ಚು ಪ್ರೌಢ ಶಾಲೆಯ ವಿದ್ಯಾರ್ಥಿಗಳು,
ಮುಖ್ಯೋಪಾಧ್ಯಾಯರು ಆಡಳಿತ ಮಂಡಳಿಯವರು ಭಾಗವಹಿಸಿದ್ದರು. ಪ್ರಥಮ, ದ್ವಿತೀಯ, ತೃತೀಯ
ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ “ವಿಸಡಮ್ ಎಕ್ಸಲೇನ್ಸಅವಾರ್ಡ” ನೀಡಿ
ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮುಹಮ್ಮದ ಆಸಿಫುದ್ದಿನ್ ಅವರು ಒಂದು ದೊಡ್ಡ ಘೋಷಣೆಯನ್ನು ಮಾಡಿದರು.
ಅದೇನೆಂದರೆ ಎಸ್.ಎಸ್.ಎಲ್.ಸಿ ಪಾಸಾದ ವಿದ್ಯಾರ್ಥಿಗಳ ಮುಂದಿನ ವ್ಯಾಸಂಗಕ್ಕಾಗಿ 95%
ಪ್ರತಿಶತಕಿಂತ ಹೆಚ್ಚು ಅಂಕ ಪಡೆದ 150 ವಿದ್ಯಾರ್ಥಿಗಳಿಗೆ 100% ಬೋಧನಾ ಶುಲ್ಕದಲ್ಲಿ
ರಿಯಾಯತಿ ನೀಡಲು ನಿರ್ಧರಿಸಿದ್ದೇವೆ. ಅದೇ ರೀತಿಯಾಗಿ 70%, 80%, ಮತ್ತು 90%ಕ್ಕಿಂತ
ಹೆಚ್ಚು ಅಂಕ ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ವಿಶೇಷ
ವಿದ್ಯಾರ್ಥಿವೇತನವನ್ನು ನೀಡಲಾಗುವುದು ಎಂದು ಹೇಳಿದರು.

























