
ಸಂಜೆವಾಣಿ ನ್ಯೂಸ್
ಮೈಸೂರು:ನ.20: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಹೆಚ್.ಡಿ. ಕೋಟೆ ಹಾಗೂ ಬಾವಲಿ ರಸ್ತೆ ಬದಿ ನಿಂತಿದ್ದ ಕಾಡಾನೆಗೆ ಕಲ್ಲು ಹೊಡೆದಿದ್ದ ಇಬ್ಬರು ಬೈಕ್ ಸವಾರರನ್ನು ಪತ್ತೆಹಚ್ಚಿರುವ ಅರಣ್ಯ ಇಲಾಖೆ ಇಬ್ಬರಿಗೂ ತಲಾ 10 ಸಾವಿರ ರೂ. ದಂಡ ವಿಧಿಸಿ ತಪೆÇ್ಪಪ್ಪಿಗೆ ಹೇಳಿಕೆಯೊಂದಿಗೆ ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆ ಮಾಡಿದ್ದಾರೆ.
ರಸ್ತೆ ಬದಿ ಮೇಯುತ್ತಿದ್ದ ಕಾಡಾನೆಗೆ ಸ್ಕೂಟರ್ನಲ್ಲಿ ಬಂದ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಆನೆಮಾಳ ಹಾಡಿ ನಿವಾಸಿಗಳಾದ ಎ.ಎಂ. ರಾಜೇಶ್ ಹಾಗೂ ಎ.ವಿ. ಸುಮೇಶ್ ಎಂಬುವರು ಕಲ್ಲು ಎಸೆದು ಆನೆಯನ್ನು ಕೆಣಕುತ್ತಿರುವ ವಿಡಿಯೋ ವೈರಲ್ ಆಗಿತ್ತು. ಆ ವಿಡಿಯೋ ಗಮನಿಸಿದ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು ಆನೆ ಮೇಲೆ ಕಲ್ಲೆಸದ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದರು.
ಈ ಹಿನ್ನೆಲೆಯಲ್ಲಿ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ನಿರ್ದೇಶಕ ಸೌರಭ್ ಕುಮಾರ್ ನಿರ್ದೇಶನದ ಮೇರೆಗೆ ಸ್ಕೂಟರ್ ನೋಂದಣಿ ಸಂಖ್ಯೆ ಹಾಗೂ ಸವಾರರ ಮುಖ ಚಹರೆ ಆಧಾರದಲ್ಲಿ ನಾಗರಹೊಳೆಯ ಡಿ.ಬಿ. ಕುಪ್ಪೆ ಆರ್ಎಫ್ಒ ಎಸ್.ಎಸ್. ಸಿದ್ದರಾಜು ತನಿಖೆ ಕೈಗೊಂಡಿದ್ದು, ತನಿಖೆ ಪೂರ್ಣಗೊಂಡಿದೆ.






















