Home ಜಿಲ್ಲೆ ಮೈಸೂರು ಕಾನೂನು ಅರಿವು, ಜಾಗೃತಿ ಕಾರ್ಯಕ್ರಮ: ನ್ಯಾ. ಅರವಿಂದ್ರ.ಬಿ.ಸಿ

ಕಾನೂನು ಅರಿವು, ಜಾಗೃತಿ ಕಾರ್ಯಕ್ರಮ: ನ್ಯಾ. ಅರವಿಂದ್ರ.ಬಿ.ಸಿ

ಸಂಜೆವಾಣಿ ವಾರ್ತೆ
ಕೆ.ಆರ್.ನಗರ, ನ.20:
ಕಾನೂನು ಎಂದರೆ ಸಾಮಾನ್ಯ ಜ್ಞಾನ ಇದ್ದಂತೆ. ಯಾವುದನ್ನು ಮಾಡಬೇಕು ಯಾವುದನ್ನು ಮಾಡಬಾರದು ಎಂದು ಹೇಳುವುದೇ ಕಾನೂನು. ಇದರ ಅರಿವು ಪ್ರತಿ ನಾಗರೀಕರಿಗೂ ಇರಬೇಕು ಎಂದು ತಾಲೂಕು ಹಿರಿಯ ಸಿವಿಲ್ ನ್ಯಾಯಾಧೀಶ ಅರವಿಂದ್ರ.ಬಿ.ಸಿ ಹೇಳಿದರು.


ತಾಲೂಕಿನ ತಿಪ್ಪೂರು ಗ್ರಾಮದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆಯ ಅಂಗವಾಗಿ ಕಾನೂನು ಅರಿವು ಮತ್ತು ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಒಂದು ಮಗು ಜನಿಸಿದಾಗಿನಿಂದ ಆ ಮಗುವಿನ ಅಂತಿಮ ಯಾತ್ರೆಯವರೆಗೂ ಕಾನೂನು ಜೊತೆಯಾಗಿ ಇರುತ್ತದೆ. ಮಗುವಿನ ಜನನದಿಂದ ಆರಂಭವಾದ ಜನನ ಪ್ರಮಾಣ ಪತ್ರದಿಂದ ಹಿಡಿದು ಮರಣ ಪ್ರಮಾಣ ಪತ್ರದವರೆಗೂ ಕಾನೂನು ಇರುವುದನ್ನು ಗಮನಿಸಬೇಕು.14 ವರ್ಷದ ಕೆಳಗಿನ ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕು ಎಂಬುದು ಕಾನೂನು. ಭ್ರೂಣ ಹತ್ಯೆ,ಲೈಂಗಿಕ ದೌರ್ಜನ್ಯ, ವರದಕ್ಷಿಣೆ ಕಿರುಕುಳ ಸೇರಿದಂತೆ ಅನೇಕ ದೌರ್ಜನ್ಯಗಳು ನಡೆಯುತ್ತಿದ್ದು, ಇವುಗಳನ್ನು ತಡೆಯಲು ಕಾಯ್ದೆಗಳನ್ನು ರೂಪಿಸಲಾಗಿದೆ. ಈ ಎಲ್ಲಾ ಕಾರಣಗಳಿಂದ ಕಾನೂನು ಸೇವಾ ಸಮಿತಿಯನ್ನು ಜಾರಿಗೆ ತರಲಾಗಿದೆ ಎಂದರು.


ಕೆ.ಆರ್.ನಗರ ಮತ್ತು ಸಾಲಿಗ್ರಾಮ ಅವಳಿ ತಾಲೂಕುಗಳಲ್ಲಿ ಹೆಚ್ಚು ಬಾಲ್ಯ ವಿವಾಹ ಪ್ರಕರಣಗಳು ಕಂಡುಬಂದಿದ್ದು ಇದಕ್ಕೆ ಕಾರಣ ಕಾನೂನಿನ ಅರಿವಿಲ್ಲದಿರಬಹುದು ಹೆಣ್ಣು ಮಗುವಿಗೆ 18 ವರ್ಷ ವಾಗಿರಬೇಕು ಎಂಬುದ ಎಂಬ ಕಾನೂನಿಗೆ ಕಾರಣ ಆಕೆಯ ದೈಹಿಕ ಸ್ಥಿತಿಯನ್ನು ಅವಲಂಬಿಸಿರುತ್ತದೆ ಒಂದು ವೇಳೆ ಬಾಲ್ಯ ವಿವಾಹ ಕಂಡುಬಂದರೆ 190ಕ್ಕೆ ಕರೆ ಮಾಡಬಹುದು ಎಂದ ಅವರು ಇತ್ತೀಚಿಗೆ ಪೆÇೀಕ್ಸೋ ಪ್ರಕರಣಗಳು, ಸೈಬರ್ ಅಪರಾಧಗಳು ಹೆಚ್ಚಾಗಿದ್ದು ಈ ಬಗ್ಗೆ ನಾಗರಿಕರು ಜಾಗೃತರಾಗಿರಬೇಕಿದೆ ಎಂದರು.


ಪ್ರಧಾನ ಸಿವಿಲ್ ನ್ಯಾಯಾಧೀಶ ಚಂದನ್ ಅವರು ಮಾತನಾಡುತ್ತಾ ಕಾನೂನಿನಲ್ಲಿ ತಾರತಮ್ಯ ಎಂಬುದು ಇರುವುದಿಲ್ಲ. ವಾಸ್ತವದಲ್ಲಿ ದೈನಂದಿನ ಬದಲಾವಣೆಗೆ ಅನುಗುಣವಾಗಿ ಕಾನೂನು ಅಸ್ತಿತ್ವಕ್ಕೆ ಬಂದರು ಒಮ್ಮೊಮ್ಮೆ ನ್ಯಾಯದ ಬೆಳಕು ಎಲ್ಲೆಡೆಯೂ ಪಸರಿಸಲು ವಿಫಲವಾಗುತ್ತದೆ. ಕಾನೂನಿನ ನೆರವು ಪ್ರತಿಯೊಬ್ಬರಿಗೂ ಸಿಗುತ್ತಿಲ್ಲ ಕಾರಣ ಕಾನೂನಿನ ಅರಿವು ಆ ವ್ಯಕ್ತಿಗೆ ಇಲ್ಲದಿರಬಹುದು ಅಥವಾ ಉದಾಸೀನತೆಯಿಂದಲೂ ಆಗಿರಬಹುದು. ಹಣವಂತರಿಗೆ ಮಾತ್ರ ನ್ಯಾಯ ಸಿಗುತ್ತದೆ ಎಂಬ ಮಾತು ಕೇಳಿ ಬರುತ್ತದೆ. ಆದರೆ ಹಣವಂತರು ನ್ಯಾಯಾಲಯಕ್ಕೆ ತಲುಪಿ ನ್ಯಾಯಾಲಯದ ಬಾಗಿಲನ್ನು ತಟ್ಟುತ್ತಾರೆ. ಹೀಗಾಗಿ ಕಾನೂನಿನ ಅರಿವು ಸಾಮಾನ್ಯ ರಜೆಯಲ್ಲಿಯೂ ಇದ್ದಾಗ ಖಂಡಿತ ಎಲ್ಲರಿಗೂ ನ್ಯಾಯ ಸಿಗುತ್ತದೆ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಹಶೀಲ್ದಾರ್ ಜಿ ಸುರೇಂದ್ರ ಮೂರ್ತಿ ಅವರು ಪ್ರತಿ ಶನಿವಾರ ಪ್ರಜಾ ಸೇವೆ ಆಂದೋಲನ ಕಾರ್ಯಕ್ರಮದಲ್ಲಿ ತಾಲೂಕು ಹೋಬಳಿ ಗ್ರಾಮ ಮಟ್ಟದಲ್ಲಿ ಪ್ರಜಾ ಸೇವೆ ಆಂದೋಲನ ಕಾರ್ಯಕ್ರಮಗಳು ನಡೆಯುತ್ತಿದ್ದು ಈ ಸಂದರ್ಭದಲ್ಲಿ ಜನರ ಸಮಸ್ಯೆಗಳನ್ನು ಆದಷ್ಟು ಬಗೆಹರಿಸಲಾಗುತ್ತಿದೆ. ಎಂದ ಅವರು ಸಾರ್ವಜನಿಕರು ಯೂಟ್ಯೂಬ್, ಫೇಸ್ಬುಕ್ ಗಳನ್ನು ನೋಡುವ ಜೊತೆಗೆ ಭೂಮಿ ಆನ್ಲೈನ್ ಆರ್ ಟಿ ಸಿ ಆಪ್ ಇದ್ದು, ಇದರಲ್ಲಿ ನಿಮ್ಮ ತಾಲೂಕು, ಹೋಬಳಿ, ಗ್ರಾಮ ಹಾಗೂ ನಿಮ್ಮ ಜಮೀನಿನ ಸರ್ವೆ ನಂಬರ್ ಹಾಕಿ ನಿಮ್ಮ ಆರ್ ಟಿ ಸಿ ಸರಿಯಾಗಿದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ ಎಂದು ಕರೆ ನೀಡಿದರು.


ಸಂಪನ್ಮೂಲ ವ್ಯಕ್ತಿ ಹಿರಿಯ ವಕೀಲ ಸುರೇಶ್ ಕರ್ತಾಳ್, ಮತ್ತೊಬ್ಬ ಹಿರಿಯ ವಕೀಲ ಶಶಿಕಾಂತ್ ಕಾನೂನು ಪರಿಪಾಲನೆ ಮಾಡುವ ರೀತಿಯನ್ನು ವಿಸ್ತಾರವಾಗಿ ವಿವರಿಸಿದರು.
ಕಾರ್ಯಕ್ರಮವು ಹಿರಿಯ ವಕೀಲ ಹಾಗೂ ಗ್ರಾಪಂ ಮಾಜಿ ಅಧ್ಯಕ್ಷ ಟಿ.ಜಿ ತಿಮ್ಮೇಗೌಡ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಎಸ್ ಪ್ರಸಾದ್, ಕಾರ್ಯದರ್ಶಿ ಶಿವರಾಜು,ಖಜಾಂಚಿ ವೇದಾವತಿ, ಜಂಟಿ ಕಾರ್ಯದರ್ಶಿಗಳಾದ ಕುಮಾರಿ, ದಿಲೀಪ್, ಉಪಾಧ್ಯಕ್ಷ ಗಂಗಾಧರ್ ಕೆ ಬಿ, ದಿಲೀಪ್ ಕುಮಾರ್, ಕೆ ಸಿ ಶಿವಕುಮಾರ್, ವಿಶ್ವನಾಥ್, ಕೆ ಎನ್ ಸತೀಶ್,ಜಗದೀಶ್, ಹರೀಶ, ಕೆ ಪಿ ಮಂಜುನಾಥ್, ಎಸ್ ಎಸ್ ಗಾಂಧಿ, ಕೆ ಪಿ ರಮೇಶ್, ವಿಜಯ್ ಕುಮಾರ್, ರಮೇಶ,ಚಂದ್ರ ಮೌಳಿ, ಪೂರ್ಣಿಮಾ, ಪ್ರದೀಪ್ ಕುಮಾರ್,ಅಕ್ಷಯ್, ದರ್ಶನ್, ಜಗದೀಶ ಇನ್ನಿತರರಿದ್ದರು.