Home ಜಿಲ್ಲೆ ಉಚಿತ ತಪಾಸಣಾ ಶಿಬಿರ

ಉಚಿತ ತಪಾಸಣಾ ಶಿಬಿರ


ಗದಗ,ನ.೧೯: ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಸಮೀಕ್ಷಣ ಘಟಕ ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಲಯನ್ಸ್ ಕ್ಲಬ್ ಹಾಗೂ ಗದಗ ಐಎಂಎ ಇವುಗಳ ಸಂಯುಕ್ತ ಆಶ್ರಯದಲ್ಲಿ ಹೆಸರಿನಲ್ಲಿ ನಾಮಜೋಷಿ ರಸ್ತೆಯ ಮಳಿಗೆಯಲ್ಲಿ ಏರ್ಪಡಿಸಲಾಗಿದ್ದ ಉಚಿತ ರಕ್ತದೊತ್ತಡ ಹಾಗೂ ಸಕ್ಕರೆ ಕಾಯಿಲೆ ತಪಾಸಣಾ ಶಿಬಿರ ನಡೆಯಿತು.
ಗದಗ ಐಎಂಎ ಅಧ್ಯಕ್ಷರಾದ ಡಾ. ಈರಣ್ಣ ಹಳೆಮನೆ, ಶಿಬಿರಕ್ಕೆ ಚಾಲನೆಯನ್ನು ನೀಡಿ, ಇಂಥ ಉಚಿತ ಆರೋಗ್ಯ ಶಿಬಿರಗಳ ಮೂಲಕ ಅನೇಕ ರೋಗಿಗಳನ್ನು ಗುರುತಿಸಿ ಆರಂಭದಲ್ಲಿಯೇ ಚಿಕಿತ್ಸೆಯನ್ನು ನೀಡಲು ಅನುಕೂಲವಾಗುತ್ತದೆ ಎಂದರು.


ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿ ಡಾ. ರಾಜೇಂದ್ರ ಅವರು ಮಾತನಾಡಿ ಮಧುಮೇಹ ಮತ್ತು ರಕ್ತದೊತ್ತಡ ಎಂದು ಎಲ್ಲೆಡೆ ಸಾಮಾನ್ಯವಾಗಿ ಕಾಣಬರುವ ರೋಗಗಳಾಗಿದ್ದು ನಿಯಮಿತ ಸಕ್ರಿಯ ಜೀವನದಿಂದ ಇವುಗಳನ್ನು ನಿಯಂತ್ರಣದಲ್ಲಿಡಲು ಸಾಧ್ಯ ಎಂದರು. ಜಿಲ್ಲಾ ಸಮೀಕ್ಷಣ ಘಟಕದ ಎಪಿಡಾಮಲೋಜೆಸ್ಟ್ ಡಾ. ಪ್ರವೀಣ್ ನಿಡಗುಂದಿ ಹಾಗೂ ಐ.ಎಂ.ಎ ಕಾರ್ಯದರ್ಶಿ ಡಾ. ವೀರೇಶ್ ದ್ಯಾವಣ್ಣವರ ಸಕ್ಕರೆ ಕಾಯಿಲೆ ಹಾಗೂ ಅಧಿಕಾರದ ಉಂಟಾಗುವ ಕ್ರಮಗಳನ್ನು ವಿವರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರವೀಣ್ ವಾರಕರ್ ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ಲಿಂಗರಾಜ ಚೇಂಬರ್ ಆಫ್ ಕಾಮರ್ಸ್ ನ ಕೋಶಾಧ್ಯಕ್ಷ ಮಂಜುನಾಥ ವೀರಲಿಂಗಯ್ಯನ ಮಠ, ಶರಣು, ತಾಲೂಕ ಆರೋಗ್ಯ ನಿರೀಕ್ಷನಾಧಿಕಾರಿ ಯಲ್ಲಪ್ಪ ಹಕ್ಕಿ ಆರ್ ಆರ್ ಕಲಾಲ್, ಅಂಬಿಗೇರ , ಶ್ರೀ ನದಾಫ್ ಸೇರಿದಂತೆ ಕೆ.ಎಚ್. ಪಾಟೀಲ್ ವೇದಿಕೆಯ ವಿಜ್ಞಾನ ಸಂಸ್ಥೆಯ ತರಬೇತಿ ವೈದ್ಯರು ಹಾಗೂ ನಗರ ಆರೋಗ್ಯ ಕೇಂದ್ರ ರೆಹಮತನಗರ, ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.