
ಜೇವರ್ಗಿ: ತಾಲೂಕಿನ ಕಾಸರಭೋಸಗಾ ಗ್ರಾಮದ ಶಿವಶರಣಪ್ಪ ಗುರುಬಸಪ್ಪ ಕೋರಿ ಅವರು ತಮ್ಮಜಮೀನಿನಲ್ಲಿ ಸಂಗ್ರಹಿಸಿಟ್ಟಿದ್ದಸುಮಾರು 15 ರಿಂದ 20 ಕ್ವಿಂಟಲ್ಗೂ ಅಧಿಕ ಹತ್ತಿ ಸುತ್ತು ಭಸ್ಮವಾಗಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.
ಯಾರೋ ಕಿಡಿಗೇಡಿಗಳು ರಾತ್ರಿ ವೇಳೆ ಹತ್ತಿಗೆ ಬೆಂಕಿ ಹಚ್ಚಿದ್ದಾರೆ ಎನ್ನಲಾಗುತ್ತಿದ್ದು, ಸುಮಾರು 15 ಲಕ್ಷ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಸಾಲ ಮಾಡಿ ಕೃಷಿ ನಡೆಸಿದ್ದ ರೈತ, ಬೆಳೆದ ಹತ್ತಿ ಕಣ್ಣೆದುರೇ ಬೆಂಕಿಗೆ ಆಹುತಿಯಾಗಿರುವುದರಿಂದ ರೈತ ಕುಟುಂಬದ ಕನಸು ನುಚ್ಚುನೂರಾಗಿದೆ.
ಘಟನೆ ತಿಳಿಯದಂತೆ ಜೇವರ್ಗಿ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಹರಸಾ-ಹಸಪಟ್ಟರು. ಆದರೆ, ಅಷ್ಟರಲ್ಲಾಗಲೇ ಅಪಾರ ಪ್ರಮಾಣದ ಹತ್ತಿ ಸುತ್ತು ಕರಕಲಾಗಿದೆ. ಘಟನೆ ಕುರಿತು ನೆಲೋಗಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೆÇಲೀಸರು ತನಿಖೆ ಕೈಗೊಂಡಿದ್ದಾರೆ.
‘ಸಾಲ ಮಾಡಿ ಬೆಳೆದ ಬೆಳೆ ಕೈಗೆ ಬರುವ ಸಮಯದಲ್ಲಿ ಬೆಂಕಿಗೆ ಆಹುತಿಯಾಗಿರುವುದು ರೈತನ ಬದುಕಿಗೆ ದೊಡ್ಡ ಕಂಪನಿ ನೀಡಿದೆ. ಸಂಬಂಧಪಟ್ಟ ಕೃಷಿ ಹಾಗೂ ಇಲಾಖೆ ಅಧಿಕಾರಿಗಳು ಘಟನೆಯ ಬಗ್ಗೆ ತಕ್ಷಣವೇ ತನಿಖೆ ನಡೆಸಿ, ಕೃತ್ಯ ಎಸಗಿದವರನ್ನು ಪತ್ತೆಹಚ್ಚಿ ಬಂಧಿಸಬೇಕು ಹಾಗೂ ನೊಂದ ರೈತನಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸಬೇಕು
ಸ್ಥಳಕ್ಕೆ ಭೇಟಿ ನೀಡಿ ಬೆಳೆ ನಷ್ಟದ ಸಮರ್ಪಕ ಸಮೀಕ್ಷೆ ನಡೆಸಿ, ಸಂತ್ರಸ್ತ ರೈತರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕು’ ಎಂದು ರೈತ ಸಂಘ- ಹಸಿರುಸೇನೆ ಜಿಲ್ಲಾಧ್ಯಕ್ಷ ಮಹಾಂತಗೌಡ ನಂದಿಹಳ್ಳಿ ಆಗ್ರಹಿ ಸಿದ್ದಾರೆ.





















